ಆದಾಯ ಮೀರಿ ಆಸ್ತಿ ಪ್ರಕರಣ: ಅಮಾನತ್ತಿನಲ್ಲಿರುವಾಗಲೇ ಬೆಂಗಳೂರಿಂದ ರಾಯಚೂರಿನ ಸಿರವಾರಕ್ಕೆ ಅಜಿತ್ ರೈ ವರ್ಗಾವಣೆ!

By Ravi Janekal  |  First Published Jul 3, 2023, 9:46 AM IST

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆಆರ್ ಪುರ ತಹಸೀಲ್ದಾರ್‌ ಅಜಿತ್ ಕುಮಾರ್ ರೈ  ಬೆಂಗಳೂರು ಕೆಆರ್‌ ಪುರಂನಿಂದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿಗೆ ವರ್ಗಾವಣೆ ಮಾಡಿರುವ ಸರ್ಕಾರ. ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ


ಬೆಂಗಳೂರು (ಜು.3) : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆಆರ್ ಪುರ ತಹಸೀಲ್ದಾರ್‌ ಅಜಿತ್ ಕುಮಾರ್ ರೈ  ಬೆಂಗಳೂರು ಕೆಆರ್‌ ಪುರಂನಿಂದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿಗೆ ವರ್ಗಾವಣೆ ಮಾಡಿರುವ ಸರ್ಕಾರ. ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ


ಪೊಲೀಸರು ಬಂಧಿಸಿದ್ದಾರೆ.  ಬಂಧನದಲ್ಲಿರುವಾಗಲೇ ಕಂದಾಯ ಇಲಾಖೆ ಅಜಿತ್ ರೈ ವಿರುದ್ಧ ಅಮಾನತ್ತು ಆದೇಶ ಹೊರಡಿಸಿತ್ತು. ಅಜಿತ್ ರೈ ಅಧಿಕಾರದಲ್ಲಿದ್ರೆ ಸಾಕ್ಷ್ಯನಾಶ, ಅಧಿಕಾರ ದುರ್ಬಳಕೆ, ತನಿಖೆಗೆ ಅಡ್ಡಿಯಾಗಬಹುದು ಎಂದು ಅಮಾನತಿನಲ್ಲಿಟ್ಟಿತ್ತು. ಅದ್ರೆ ಇದೀಗ ಅದೇ ಭ್ರಷ್ಟ ಅಧಿಕಾರಿ ಅಜಿತ್ ರೈರನ್ನು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿಗೆ ವರ್ಗಾವಣೆ ಮಾಡಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 

Latest Videos

undefined

Bengaluru: ಭ್ರಷ್ಟ ಅಧಿಕಾರಿ ಅಜಿತ್‌ ರೈ ಮನೆಯಲ್ಲಿ ಸಿಕ್ಕಿದ್ದೇನು? ನಗ, ನಾಣ್ಯ, ಲಕ್ಸುರಿ ವಸ್ತುಗಳು ನೋಡಿ..

ಹೌದು ಬೆಂಗಳೂರಿನ ತಹಸೀಲ್ದಾರ್(ಗ್ರೇಡ್ 1) ಅಧಿಕಾರಿಯಾಗಿದ್ದ ಅಜಿತ್ ರೈ  ಅಕ್ರಮ ಹಣ ಪತ್ತೆಯಾದ ಬಳಿಕ  ಗ್ರೇಡ್ -1 ತಹಸೀಲ್ದಾರ್ ಹುದ್ದೆಯಿಂದ ಗ್ರೇಡ್ - 2 ತಹಸೀಲ್ದಾರ್ ಹಿಂಬಡ್ತಿ ಮಾಡಿ ಸರ್ಕಾರ ವರ್ಗಾವಣೆ ಮಾಡಿದೆ.

ಅಜಿತಕುಮಾರ್ ರೈ ಅಮಾನತಿನಲ್ಲಿ ಇದ್ರೂ ವರ್ಗಾವಣೆ 

ಆದಾಯಕ್ಕಿಂತ ಹೆಚ್ಚು ಆಸ್ತಿ ಪತ್ತೆಯಾಗಿ ಸಾಕ್ಷ್ಯ ಸಮೇತ ಸಿಕ್ಕಿಬಿದ್ದಿದ್ರೂ  ಸರ್ಕಾರ ಮಾತ್ರ ಅಮಾನತುಗೊಂಡ ತಹಸೀಲ್ದಾರರನ್ನ ಸಿರವಾರ್‌ಗೆ  ವರ್ಗಾಯಿಸಿದ್ದು ಯಾಕೆ? ಲೋಕಾಯುಕ್ತರು ಭ್ರಷ್ಟರ ಮೇಲೆ ದಾಳಿ ಮಾಡಿ ಎಡೆಮುರಿಕಟ್ಟುತ್ತಿದ್ದರು ಇತ್ತ ಸರ್ಕಾರ ಅಮಾನತ್ತಿನಲ್ಲಿರುವ ಭ್ರಷ್ಟ ಅಧಿಕಾರಿಗೆ ಹಿಂಬಡ್ತಿ ನೀಡಿ ರಾಚೂರು ಜಿಲ್ಲೆ ಸಿರವಾರಕ್ಕೆ ವರ್ಗಾವಣೆ ಮಾಡಿರುವುದು ಸರ್ವತಾ ಸರಿಯಲ್ಲ

 

ಕೋಟ್ಯಂತರ ರೂ ಅಕ್ರಮ ಆಸ್ತಿ ಗಳಿಸಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ Tahsildar Ajith Rai ಯಾರು, ಹಿನ್ನೆಲೆ ಏನು?

click me!