
ಬೆಂಗಳೂರು/ ಕೆಂಗೇರಿ (ಜು.19) : ಗೋಕುಲ ವಿದ್ಯುತ್ ವಿತರಣ ಕೇಂದ್ರ, ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್ ಹಾಗೂ ವೃಷಭಾವತಿ ವಿದ್ಯುತ್ ವಿತರಣ ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿಕೊಳ್ಳಲಾಗುತ್ತಿದೆ. ಆದ್ದರಿಂದ ಜು.20ರಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
66/11 ಕೆವಿ ಸರ್ ಎಂ.ವಿಶ್ವೇಶ್ವರಯ್ಯ ಲೇಔಟ್ ಹಾಗೂ 220/66/11 ಕೆವಿ ವೃಷಭಾವತಿ ವಿದ್ಯುತ್ ವಿತರಣ ಉಪ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಶನಿವಾರ ಬೆಳಗ್ಗೆ 10 ರಿಂದ 5 ಗಂಟೆಯವರೆಗೂ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಉಲ್ಲಾಳ ಉಪನಗರ, ಮಾರುತಿ ನಗರ, ಮರಿಯಪ್ಪನ ಪಾಳ್ಯ, ಜ್ಞಾನ ಭಾರತಿ 1 ಮತ್ತು 2ನೇ ಹಂತ, ಅಮ್ಮ ಆಶ್ರಮ ರಸ್ತೆ, ಚಿಕ್ಕಬಸ್ತಿ, ದೊಡ್ಡ ಬಸ್ತಿ, ಭುವನೇಶ್ವರಿನಗರ, ನಾಗದೇವನಹಳ್ಳಿ, ಆರ್.ಆರ್.ಲೇಔಟ್, ದುಬಾಸಿಪಾಳ್ಯ, ಬ್ರಹ್ಮದೇವರ ಗುಟ್ಟೆ, ಬಿ.ಎಲ್.ಬಡಾವಣೆ, ಉಪಕಾರ ಲೇಔಟ್, ಮುದ್ದಿನಪಾಳ್ಯ, ರೈಲ್ವೆ ಲೇಔಟ್, ಜ್ಞಾನಜೋತಿನಗರ, ಮುನೇಶ್ವರನಗರ, ಎಂಪಿಎಂ ಲೇಔಟ್, ಐಟಿಐ ಲೇಔಟ್, ಕೆಂಗುಂಟೆ, ಮಲ್ಲತಹಳ್ಳಿ ಡಿ ಗ್ರೂಪ್ ಲೇಔಟ್, ರತ್ನನಗರ, ಅಂಜನಾನಗರ, ಕೊಡಿಗೆಹಳ್ಳಿ ಸುತ್ತಮುತ್ತ ವಿದ್ಯುತ್ ಕಡಿತವಾಗಲಿದೆ.
ಮಂಗನಹಳ್ಳಿ, ಉದಯ ಬಡಾವಣೆ, ಅಪ್ರಮಯ ಲೇಔಟ್, ಮೈಸೂರು ರಸ್ತೆಯ ಬಾಪೂಜಿನಗರ, ಗಂಗೊಂಡನಹಳ್ಳಿ, ದೀಪಾಂಜಲಿ ನಗರ, ಅತ್ತಿಗುಪ್ಪೆ ಪಂತರಪಾಳ್ಯ, ಕೆಂಚೇನಹಳ್ಳಿ, ರಾಜರಾಜೇಶ್ವರಿನಗರ, ಐಡಿಯಲ್ ಹೋಮ್ಸ್, ಬಿಎಚ್ಇಎಲ್ ಲೇಔಟ್, ಕೆಂಗೇರಿ ಉಪನಗರ, ಜ್ಞಾನಭಾರತಿ ಲೇಔಟ್, ಬಂಡೆಮಠ, ಗಿರಿನಗರ, ಬ್ಯಾಂಕ್ ಕಾಲೋನಿ, ಶ್ರೀನಗರ, ಹನುಮಂತನಗರ, ವಿದ್ಯಾಪೀಠ ಸರ್ಕಲ್, ತ್ಯಾಗರಾಜನಗರ, ಹೊಸಕೆರೆಹಳ್ಳಿ, ನಾಗೇಂದ್ರ ಬ್ಲಾಕ್, ಅವಲಹಳ್ಳಿ ಹಾಗೂ ಮೈಸೂರು ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ಪಶ್ಚಿಮ ವೃತ್ತದ ಅಧೀಕ್ಷಕ ಎಂಜಿನಿಯರ್ ಕಾಶಿರಾಮ್ ಪವಾರ್ ತಿಳಿಸಿದ್ದಾರೆ. ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆಗಾಗಿ ಸಹಾಯವಾಣಿ ಸಂಖ್ಯೆ 1912 ಸಂಪರ್ಕಿಸಲು ಕೋರಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ