ಇದು ಭಕ್ತರ ಪುಣ್ಯಕ್ಷೇತ್ರ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದುಕೊಳ್ತಾರೆ. ಅದರಲ್ಲೂ ದ್ವಿ ಚಕ್ರ, ತ್ರಿ ಚಕ್ರ, ಕಾರು ಸೇರಿದಂತೆ ಇತರ ವಾಹನಗಳಲ್ಲಿ ಬರುವ ಭಕ್ತರ ಸಂಖ್ಯೆಯೇ ಹೆಚ್ಚು.
ವರದಿ: ಪುಟ್ಟರಾಜು.ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ನ.25): ಇದು ಭಕ್ತರ ಪುಣ್ಯಕ್ಷೇತ್ರ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದುಕೊಳ್ತಾರೆ. ಅದರಲ್ಲೂ ದ್ವಿ ಚಕ್ರ, ತ್ರಿ ಚಕ್ರ, ಕಾರು ಸೇರಿದಂತೆ ಇತರ ವಾಹನಗಳಲ್ಲಿ ಬರುವ ಭಕ್ತರ ಸಂಖ್ಯೆಯೇ ಹೆಚ್ಚು. ಭಕ್ತರ ವಾಹನಗಳಿಗೆ ಪ್ರಾಧಿಕಾರದಿಂದ ಟೆಂಡರ್ ಕರೆದು ಸುಂಕ ವಸೂಲಿ ಮಾಡಲಾಗ್ತಿದೆ. ಆದ್ರೆ ಭಕ್ತರು ಈ ಸುಂಕ ವಸೂಲಿ ರೀತಿಗೆ ಆಕ್ಷೇಪ ವ್ಯಕ್ತವಾಗಿದ್ದು, ಡಬಲ್ ಸುಂಕ ಕಟ್ಟುತ್ತಿದ್ದೇವೆ ಅಂತಾ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಇಂದು ಸ್ಟೋರಿ ಇಲ್ಲಿದೆ ನೋಡಿ.
undefined
ಹೌದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತೆ. ಭಕ್ತಾಧಿಗಳು ದ್ವಿ ಚಕ್ರ,ತ್ರಿ ಚಕ್ರ,ಕಾರು ಸೇರಿದಂತೆ ಇನ್ನಿತರ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರೋದು. ಹೀಗೆ ಬರುವ ವಾಹನಗಳಿಗೆ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಟೆಂಡರ್ ಕರೆದು ಪ್ರತಿಯೊಂದು ವಾಹನಗಳಿಗು ಕೂಡ ಇಂತಿಷ್ಟು ಸುಂಕ ನಿಗದಿಪಡಿಸಿದೆ. ಆದ್ರೆ ಮಲೆ ಮಹದೇಶ್ವರ ಬೆಟ್ಟಕ್ಕೆ ಎಂಟ್ರಿ ಪ್ರವೇಶ ಶುಲ್ಕ ಕೊಡಬೇಕಿದೆ.ನಂತರ ವಾಹನ ಸವಾರರು ದೇವರ ದರ್ಶನದ ಬಳಿಕ ಹೊಗೆನಕಲ್ ವೀಕ್ಷಣೆಗೆ ಹೋಗ್ತಾರೆ.
ಲೋಕಸಭೆ ಚುನಾವಣೆ: ಮತ್ತೆ ಪುತ್ರನ ಪರ ಬ್ಯಾಟ್ ಬೀಸಿದ ಸಚಿವ ಮಹದೇವಪ್ಪ
ನಂತರ ಮಲೆ ಮಹದೇಶ್ವರ ಬೆಟ್ಟಕ್ಕೆ ಮತ್ತೇ ಆಗಮಿಸಿ ತಮ್ಮ ಊರುಗಳತ್ತ ಮುಖ ಮಾಡ್ತಾರೆ.ಆದ್ರೆ ಹೊಗೆನಕಲ್ ವೀಕ್ಷಿಸಿ ಬರುವ ವೇಳೆಯೂ ಮತ್ತೇ ಪ್ರವೇಶ ಶುಲ್ಕ ನಿಗದಿಪಡಿಸಿದ್ದಾರೆ. ಇದ್ರಿಂದ ಒಂದೇ ವಾಹನಕ್ಕೆ ಎರಡು ಬಾರಿ ಪ್ರವೇಶ ಶುಲ್ಕ ಕಟ್ಟಬೇಕಿದೆ. ಈ ಕುರಿತು ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಕೂಡ ಯಾವುದೇ ಪ್ರಯೋಜನವಾಗ್ತಿಲ್ಲ.ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಓಡಾಟಕ್ಕೆ ಯಾಕೆ ಎರಡು ಬಾರಿ ಪ್ರವೇಶ ಶುಲ್ಕ ಕಟ್ಟಬೇಕು ಅಂತಾ ಪ್ರಾಧಿಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ.
ಇನ್ನೂ ಮಲೆ ಮಹದೇಶ್ವರ ಪ್ರಾಧಿಕಾರಕ್ಕೆ ಆದಾಯ ಬರುವ ದೃಷ್ಟಿಯಿಂದ ಪ್ರಾಧಿಕಾರ ಒಂದೂವರೆ ಕೋಟಿ ರೂಪಾಯಿಗೆ ಟೆಂಡರ್ ಕೊಟ್ಟಿದೆ.ಈ ಟೆಂಡರ್ ದಾರ ಪ್ರಾಧಿಕಾರದ ಸೂಚನೆಯಂತೆ ಎರಡು ಕಡೆ ಚೆಕ್ ಪೋಸ್ಟ್ ತೆರೆದು ಪ್ರವೇಶ ಶುಲ್ಕ ವಸೂಲಿ ಮಾಡ್ತಿದ್ದಾನೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನ ಮುಗಿದು ಗೋಪಿನಾಥಂ, ಪಾಲಾರ್,ಹೊಗೆನಕಲ್ ಕಡೆಗೆ ಹೋಗಿ ಮತ್ತೇ ನಾವು ಬೆಟ್ಟಕ್ಕೆ ವಾಪಾಸ್ ಬಂದು ನಮ್ಮ ಊರುಗಳತ್ತ ಪಯಣ ಮಾಡ್ತೇವೆ.ಒಂದು ಬಾರಿ ಎಂಟ್ರಿಗೆ ಶುಲ್ಕ ಪಡೆದಿರುತ್ತಾರೆ. ಈಗ ತಮಿಳುನಾಡು ಮಾರ್ಗದ ಎಂಟ್ರಿಯಲ್ಲೂ ಹಣ ಕೊಡಬೇಕಿದೆ.ಎರಡು ಕಡೆ ಒಂದೇ ವಾಹನಕ್ಕೆ ಶುಲ್ಕ ಪಾವತಿಸಬೇಕಿದೆ. ಇದರಿಂದ ವಾಹನ ಸವಾರರ ಜೇಬಿಗೆ ಕತ್ತರಿ ಬೀಳ್ತಿದೆ ಅಂತಾ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಅಂಬರೀಶ್ ಗುರಿ, ಉದ್ದೇಶಗಳನ್ನು ಮುಂದುವರೆಸಿಕೊಂಡು ಹೋಗಲು ಸಂಕಲ್ಪ: ಸುಮಲತಾ
ಇನ್ನೂ ಈ ಕುರಿತು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿಯವರನ್ನು ಪ್ರಶ್ನಿಸಿದ್ರೆ ಬಹಳ ಹಿಂದೆಯೇ ಟೆಂಡರ್ ಆಗಿದೆ.ವಾಹನ ಸವಾರರಿಗೆ ಆಗಿರುವ ಸಮಸ್ಯೆ ನಮ್ಮ ಗಮನಕ್ಕೆ ಬಂದಿಲ್ಲ. ಎರಡು ಕಡೆ ಶುಲ್ಕ ಕಟ್ಟುವ ಬಗ್ಗೆ ಗೊತ್ತಿಲ್ಲ, ಈ ಬಗ್ಗೆ ಚರ್ಚಿಸಿ ತೀರ್ಮಾನ ಮಾಡ್ತೇವೆ ಅನ್ನೋ ಹಾರಿಕೆ ಉತ್ತರ ಕೊಡ್ತಾರೆ. ಇನ್ನಾದ್ರೂ ಅಧಿಕಾರಿಗಳು ಎಚ್ಚರ ವಹಿಸಿ ಒಂದೇ ವಾಹನಕ್ಕೆ ಎರಡು ಕಡೆ ಸುಂಕ ವಸೂಲಿ ನಿಲ್ಲಿಸುವಂತೆ ಭಕ್ತರು ಹಾಗೂ ವಾಹನ ಸವಾರರ ಒತ್ತಾಸೆಯಾಗಿದೆ.