SIR ನಮೂನೆ ವಾಪಸ್ ಕೊಡಲು ಇಂದೇ ಕೊನೆ ದಿನ; ಹೆಸರು ತೆಗೆದುಹಾಕಿದ್ದಾರಾ? ನೋಡಿಕೊಳ್ಳಿ

Published : Aug 17, 2026, 05:30 AM IST
SIR

ಸಾರಾಂಶ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ, ಗಣತಿ ನಮೂನೆ ವಾಪಸ್ ನೀಡಲು ಮತ್ತು ರೋಲ್‌ಬ್ಯಾಕ್‌ಗೆ ಸೋಮವಾರ ಕೊನೆಯ ದಿನವಾಗಿದೆ. ಎಎಸ್‌ಡಿಡಿಒ ವರ್ಗಕ್ಕೆ ಸೇರಿದ ಅಂದಾಜು 1.08 ಕೋಟಿ ಮತದಾರರ ಹೆಸರುಗಳು ಪಟ್ಟಿಯಿಂದ ರದ್ದಾಗುವ ಸಾಧ್ಯತೆಯಿದ್ದು, ಅರ್ಹರು ತಮ್ಮ ಹೆಸರು ಉಳಿಸಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಪರಿಷ್ಕೃತ ಕರಡು ಮತದಾರರ ಪಟ್ಟಿಯು ಆಗಸ್ಟ್ 24 ರಂದು ಪ್ರಕಟವಾಗಲಿದೆ.

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಮತದಾರರು ಗಣತಿ ನಮೂನೆ ವಾಪಸ್‌ ನೀಡಲು ಹಾಗೂ ರೋಲ್‌ ಬ್ಯಾಕ್‌ಗೆ ಸೋಮವಾರ ಕಡೆಯ ದಿನವಾಗಿದೆ.

ಈಗಾಗಲೇ ಬೂತ್‌ ಮಟ್ಟದ ಅಧಿಕಾರಿಯಿಂದ(ಬಿಎಲ್‌ಒ) ಗಣತಿ ನಮೂನೆ ಪಡೆದಿರುವ ಮತದಾರರು ಮಾಹಿತಿ ಭರ್ತಿ ಮಾಡಿ ಸಹಿ ಮಾಡಿ ಸೋಮವಾರ ಸಂಜೆ 4 ಗಂಟೆಯೊಳಗೆ ಸಂಬಂಧಿತ ಬಿಎಲ್‌ಒಗೆ ವಾಪಸ್‌ ನೀಡಬೇಕು.

ಅಂತೆಯೇ ಎಸ್ಐಆರ್‌ ವೇಳೆ ಎ-ಆಬ್ಸೆಂಟ್‌, ಎಸ್‌-ಶಿಫ್ಟ್‌, ಡಿ-ಡೆತ್‌, ಡಿ-ಡ್ಯುಪ್ಲಿಕೇಟ್‌, ಒ-ಅದರ್ಸ್‌(ಎಎಸ್‌ಡಿಡಿಒ) ವರ್ಗಕ್ಕೆ ಸೇರಿಸಿರುವ ಅರ್ಹ ಮತದಾರರು ಸಂಬಂಧಿತ ಬಿಎಲ್‌ಒ ಅಥವಾ ಮತದಾರರ ನೋಂದಣಾಧಿಕಾರಿ(ಇಆರ್‌ಒ) ಸಂಪರ್ಕಿಸಿ ತಮ್ಮ ಗಣತಿ ನಮೂನೆ ಪಡೆದು (ರೋಲ್‌ಬ್ಯಾಕ್‌) ಮಾಹಿತಿ ಭರ್ತಿ ಮಾಡಿ ವಾಪಸ್‌ ನೀಡಬೇಕು. ಇಲ್ಲವಾದರೆ, ನಿಮ್ಮ ಹೆಸರು ಹಾಲಿ ಮತದಾರರ ಪಟ್ಟಿಯಿಂದ ರದ್ದಾಗಲಿದೆ ಮತ್ತು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗುವುದಿಲ್ಲ.

ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟ

ಬಿಎಲ್‌ಒಗಳು ಅರ್ಹ ಮತದಾರರನ್ನೂ ಎಎಸ್‌ಡಿಡಿಒ ವರ್ಗಕ್ಕೆ ಸೇರಿಸಿರುವ ಬಗ್ಗೆ ಆರೋಪಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಈವರೆಗೆ ಎರಡು ಬಾರಿ ರಾಜ್ಯದ ಎಸ್‌ಐಆರ್‌ ವೇಳಾಪಟ್ಟಿ ಪರಿಷ್ಕರಿಸಿ ರೋಲ್‌ ಬ್ಯಾಕ್‌ಗೆ ಅವಕಾಶ ನೀಡಿತ್ತು. ಅದರಂತೆ ಮನೆ-ಮನೆ ಭೇಟಿ ಮತ್ತು ರೋಲ್‌ಬ್ಯಾಕ್‌ಗೆ ನೀಡಿದ್ದ ಸಮಯ ಆ.17ರಂದು ಮುಗಿಯಲಿದೆ. ಪರಿಷ್ಕೃತ ವೇಳಾ ಪಟ್ಟಿ ಪ್ರಕಾರ ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಆ.24ರಿಂದ ಸೆ.23ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶವಿದೆ. ಆ.24ರಿಂದ ಅ.22ರ ವರೆಗೆ ನೋಟಿಸ್‌/ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.

ಎಎಸ್ಡಿಡಿಒ ವರ್ಗದ 1.08 ಕೋಟಿ ಮತದಾರರ ಹೆಸರು ಡಿಲೀಟ್‌!

ರಾಜ್ಯದ ಮತದಾರರ ಪಟ್ಟಿಯಲ್ಲಿ 5,54,32,314 ಮತದಾರರು ಇದ್ದಾರೆ. ಈ ಪೈಕಿ ಎಸ್‌ಐಆರ್‌ ವೇಳೆ ಭಾನುವಾರ ಸಂಜೆ 4 ಗಂಟೆ ವರೆಗೆ ಎ-ಆಬ್ಸೆಂಟ್‌ 15,30,449, ಎಸ್‌-ಪರ್ಮನೆಂಟ್‌ ಶಿಫ್ಟ್‌ 65,62,586 , ಡಿ-ಡೆತ್‌ 16,38,600, ಡಿ-ಡ್ಯುಪ್ಲಿಕೇಟ್‌ 7,07,095, ಒ-ಅದರ್ಸ್‌ 3,95,865 ಸೇರಿ ಒಟ್ಟು 1,08,34,595 (ಶೇ.19.55) ಮತದಾರರನ್ನು ಎಎಸ್‌ಡಿಡಿಒ ವರ್ಗಕ್ಕೆ ಸೇರಿಸಲಾಗಿದೆ. ಅಂದರೆ, ಈ ಮತದಾರರ ಹೆಸರು ಹಾಲಿ ಮತದಾರರ ಪಟ್ಟಿಯಿಂದ ರದ್ದಾಗಲಿದೆ. 4,45,97,719 (ಶೇ.80.45) ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಖಚಿತವಾಗಿ ಪ್ರಕಟವಾಗಲಿದೆ.

ಫಾರ್ಮ್‌ 6 ಸಲ್ಲಿಸಿ ಸೇರ್ಪಡೆ

ಈ ಎಎಸ್‌ಡಿಡಿಒ ವರ್ಗದ 1.08 ಕೋಟಿ ಮತದಾರರ ಪೈಕಿ 65.62 ಲಕ್ಷ ಮತದಾರರನ್ನು ಶಾಶ್ವತ ಸ್ಥಳಾಂತರ ಎಂದು ಗುರುತಿಸಲಾಗಿದೆ. ಹೀಗಾಗಿ ಈ ಮತದಾರರು ನಿಗದಿತ ದಾಖಲೆಗಳೊಂದಿಗೆ ಹೊಸದಾಗಿ ಫಾರ್ಮ್‌ 6 ಭರ್ತಿ ಮಾಡಿ ಸಲ್ಲಿಸಿದರೆ, ಸಂಬಂಧಪಟ್ಟ ಇಆರ್‌ಒ ಪರಿಶೀಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಿದ್ದಾರೆ. ಈವರೆಗೂ ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಳ್ಳದ ಮತದಾರರು ಫಾರ್ಮ್‌ 6 ಭರ್ತಿ ಮಾಡಲು ಅವಕಾಶವಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಕಾನೂನು ವಿವಿಗೆ ಸಿಜೆಐ ಸೂರ್ಯಕಾಂತ್‌ ಆಗಮನಕ್ಕೂ ವಿದ್ಯಾರ್ಥಿಗಳಿಂದ ವಿರೋಧ
Karnataka Latest News Live: ಆರೆಸ್ಸೆಸ್‌ ನಿಯಂತ್ರಿಸಲು ಮಸೂದೆ ತರುತ್ತಿಲ್ಲ: ಸಿಎಂ ಡಿ.ಕೆ.ಶಿವಕುಮಾರ್‌