ಕರ್ನಾಟಕದಲ್ಲಿ ವಾಹನ ಸವಾರರಿಗೆ ಶಾಕ್: ವಾಯು ಮಾಲಿನ್ಯ ತಪಾಸಣೆ ದರ ಹೆಚ್ಚಳ! ಯಾವ ಗಾಡಿಗೆ ಎಷ್ಟೆಷ್ಟು?

Published : Aug 16, 2026, 02:15 PM IST
Emission Test

ಸಾರಾಂಶ

ಕರ್ನಾಟಕದಲ್ಲಿ ವಾಹನ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ (PUCC) ಶುಲ್ಕವನ್ನು ಸಾರಿಗೆ ಇಲಾಖೆ ಪರಿಷ್ಕರಿಸಿದೆ. ಮಾಲಿನ್ಯ ಪರೀಕ್ಷಾ ಕೇಂದ್ರಗಳ ನಿರ್ವಾಹಕರ ಮನವಿ ಮೇರೆಗೆ ದ್ವಿಚಕ್ರ ವಾಹನ, ಕಾರು, ಮತ್ತು ಡೀಸೆಲ್ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಈ ನಿರ್ಧಾರವು ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ವಾಹನ ಸವಾರರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಬೀರಲಿದೆ.

ಬೆಂಗಳೂರು: ಇಂಧನ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಸಾರ್ವಜನಿಕರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು, ಆರ್ಥಿಕ ಹೊರೆ ಬಿದ್ದಿದೆ. ಕರ್ನಾಟಕದಲ್ಲಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಪಡೆಯಲು ಇನ್ನು ಮುಂದೆ ವಾಹನ ಮಾಲೀಕರು ಹೆಚ್ಚಿನ ಶುಲ್ಕ ತೆರಬೇಕಾಗಿದೆ. ಕಾರ್ಯಾಚರಣೆಯ ವೆಚ್ಚ ಹೆಚ್ಚಿರುವುದನ್ನು ಉಲ್ಲೇಖಿಸಿ ಮಾಲಿನ್ಯ ಪರೀಕ್ಷಾ ಕೇಂದ್ರಗಳ ನಿರ್ವಾಹಕರ ಸಂಘ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ಸಾರಿಗೆ ಇಲಾಖೆ, ಆಗಸ್ಟ್ 13ರಂದು ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಿ ಅಧಿಕೃತ ಆದೇಶ ಹೊರಡಿಸಿದೆ.

ಶುಲ್ಕ ಹೆಚ್ಚಳಕ್ಕೆ ಕಾರಣವೇನು?

ರಾಜ್ಯದಲ್ಲಿ ಕೊನೆಯ ಬಾರಿಗೆ 2022ರ ಏಪ್ರಿಲ್‌ನಲ್ಲಿ PUC ಶುಲ್ಕವನ್ನು ಪರಿಷ್ಕರಿಸಲಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಬಾಡಿಗೆ, ವಿದ್ಯುತ್ ಬಿಲ್ ಮತ್ತು ಇಂಟರ್ನೆಟ್ ವೆಚ್ಚ ಏರಿಕೆಯಾಗಿದೆ. ಪರೀಕ್ಷಾ ಉಪಕರಣಗಳ ನಿರ್ವಹಣೆ ಹಾಗೂ ಸಿಬ್ಬಂದಿ ವೇತನ ಗಣನೀಯವಾಗಿ ಹೆಚ್ಚಾಗಿದೆ. ಪ್ರಿಂಟರ್ ಕಾರ್ಟ್ರಿಡ್ಜ್ ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ದುಬಾರಿಯಾಗಿದೆ. ಈ ಎಲ್ಲ ಕಾರ್ಯಾಚರಣೆ ವೆಚ್ಚಗಳನ್ನು ಸರಿದೂಗಿಸಲು ಶುಲ್ಕ ಏರಿಕೆ ಅನಿವಾರ್ಯ ಎಂದು ವಾಯು ಮಾಲಿನ್ಯ ತಪಾಸಣೆ ಕೇಂದ್ರಗಳ ಮಾಲೀಕರು ಇಲಾಖೆಗೆ ಮನವಿ ಮಾಡಿದ್ದರು.

ಪರಿಷ್ಕೃತ PUC ಶುಲ್ಕದ ವಿವರ (ಹಳೆಯ ದರ vs ಹೊಸ ದರ)

ದ್ವಿಚಕ್ರ ವಾಹನಗಳು : ರೂ. 65 ರಿಂದ ರೂ. 80 ಕ್ಕೆ ಏರಿಕೆ

ತ್ರಿಚಕ್ರ ವಾಹನಗಳು : ರೂ. 75 ರಿಂದ ರೂ. 80 ಕ್ಕೆ ಏರಿಕೆ

ಪೆಟ್ರೋಲ್ / LPG / CNG ಕಾರುಗಳು: ರೂ. 115 ರಿಂದ ರೂ. 150 ಕ್ಕೆ ಏರಿಕೆ

ಎಲ್ಲ ಮಾದರಿಯ ಡೀಸೆಲ್ ವಾಹನಗಳು: ರೂ. 160 ರಿಂದ ರೂ. 200 ಕ್ಕೆ ಏರಿಕೆ

ಪರೀಕ್ಷಾ ಕೇಂದ್ರಗಳಿಗೆ ಸಾರಿಗೆ ಇಲಾಖೆಯ ಕಟ್ಟುನಿಟ್ಟಿನ ಷರತ್ತುಗಳು

ಶುಲ್ಕ ಏರಿಕೆಯ ಜೊತೆಗೆ, ಸಾರ್ವಜನಿಕರಿಗೆ ಸರಿಯಾದ ಸೇವೆ ಸಿಗುವಂತೆ ಮಾಡಲು ಮತ್ತು ಅಕ್ರಮಗಳನ್ನು ತಡೆಯಲು ಸಾರಿಗೆ ಇಲಾಖೆ ಹಲವಾರು ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ತಜ್ಞ ಸಿಬ್ಬಂದಿ ನೇಮಕ , ಸಾಧನಗಳ ಮರುಮಾಪನ (Calibration): ಪರೀಕ್ಷೆಗೆ ಬಳಸುವ ಗ್ಯಾಸ್ ಅನಾಲೈಸರ್‌ಗಳನ್ನು ನಿಯಮಿತವಾಗಿ ಕಡ್ಡಾಯವಾಗಿ ಕ್ಯಾಲಿಬ್ರೇಷನ್ ಮಾಡಿಸಬೇಕು. ಅಲ್ಲದೆ, ಕೊನೆಯ ಕ್ಯಾಲಿಬ್ರೇಷನ್ ಮಾಡಿದ ದಿನಾಂಕವನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಬೇಕು. PUCC ಪ್ರಮಾಣಪತ್ರದಲ್ಲಿ ಕೈಯಿಂದ ಬರೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗಣಕೀಕೃತ ಪ್ರಮಾಣಪತ್ರವನ್ನು ಮಾತ್ರ ನೀಡಬೇಕು. ಕೇಂದ್ರ ಮೋಟಾರು ವಾಹನ ನಿಯಮಗಳು-1989ರ 'ರೂಲ್ 115'ರ ಪ್ರಕಾರ ನಿಗದಿತ ಮಿತಿಯೊಳಗೆ ವಾಹನದ ಹೊರಸೂಸುವಿಕೆ (Emission) ಇದ್ದರೆ ಮಾತ್ರ ಪ್ರಮಾಣಪತ್ರ ವಿತರಿಸಬೇಕು. BS-IV ಮತ್ತು BS-VI ವಾಹನಗಳ ಪ್ರಮಾಣಪತ್ರವು 12 ತಿಂಗಳುಗಳವರೆಗೆ (1 ವರ್ಷ) ಮಾನ್ಯವಾಗಿರುತ್ತದೆ. ಕೇಂದ್ರದ ಪರವಾನಗಿ (License) ಪತ್ರವನ್ನು ಸಾರ್ವಜನಿಕರಿಗೆ ಸುಲಭವಾಗಿ ಕಾಣುವ ಸ್ಥಳದಲ್ಲಿ ಪ್ರದರ್ಶಿಸುವುದು ಕಡ್ಡಾಯ. ಇಂಧನ ಬೆಲೆ ಹಾಗೂ ವಾಹನ ನಿರ್ವಹಣೆ ವೆಚ್ಚದಿಂದ ಬೇಸತ್ತಿದ್ದ ವಾಹನ ಸವಾರರಿಗೆ ಸರ್ಕಾರದ ಈ ನಿರ್ಧಾರ ಹೆಚ್ಚುವರಿ ಹೊರೆಯಾಗಿ ಪರಿಣಮಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಂಗ್ಲಾ ವಲಸಿಗರ ಗಡಿಪಾರಿಗೆ ಭಾರೀ ಪ್ರತಿಭಟನೆ: ಅಕ್ರಮ ನುಸುಳುಕೋರರು, ಜನಸಂಖ್ಯಾ ಬದಲಾವಣೆ, ಚಿಂತಕ ಸೂಲಿಬೆಲೆ ಎಚ್ಚರಿಸಿದ್ದೇನು?
ಪೊಲೀಸರು ಮಾಡಬೇಕಾದ ಕೆಲಸ ಹಿಂದೂ ಕಾರ್ಯಕರ್ತರು ಮಾಡುತ್ತಿದ್ದಾರೆ; ಫ್ರೀಡಂ ಪಾರ್ಕ್‌ನಲ್ಲಿ ವಸಂತ್ ಗಿಳಿಯಾರ್ ಹೇಳಿದ್ದೇನು?