ಮೇ 18ಕ್ಕೆ ನನ್ನ ಹುಟ್ಟು ಹಬ್ಬ, ಅಂದೇ ಎಚ್‌ಡಿಕೆ ಸಿಎಂ ಆಗ್ತಾರೆ ಅಂದಿದ್ದ ಗೌಡರು, ಆಗಿದ್ದೇ ಬೇರೆ!

By Ravi JanekalFirst Published May 18, 2023, 3:12 PM IST
Highlights

ಮಾಜಿ ಪ್ರಧಾನಿ, ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷರು, ದೇಶದ ಹಿರಿಯ ಮುತ್ಸದ್ಧಿ ರಾಜಕಾರಣಿಯಾಗಿರುವ ಎಚ್‌ಡಿ ದೇವೇಗೌಡರು ಇಂದು 91ನೇ ವಸಂತಕ್ಕೆ ಕಾಲಿಟ್ಟಿರುವ ಹಿನ್ನೆಲೆ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ, ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ

ಬೆಂಗಳೂರು (ಮೇ.18) ಮಾಜಿ ಪ್ರಧಾನಿ, ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷರು, ದೇಶದ ಹಿರಿಯ ಮುತ್ಸದ್ಧಿ ರಾಜಕಾರಣಿಯಾಗಿರುವ ಎಚ್‌ಡಿ ದೇವೇಗೌಡರು ಇಂದು 91ನೇ ವಸಂತಕ್ಕೆ ಕಾಲಿಟ್ಟಿರುವ ಹಿನ್ನೆಲೆ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ, ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.  ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ದೇವೇಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

‘ದೇಶಕ್ಕೆ ನಿಮ್ಮ ಕೊಡುಗೆ ಅಪಾರ, ಆರೋಗ್ಯದಿಂದ ಇನ್ನು ಹೆಚ್ಚು ಕಾಲ ಬದುಕಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

Latest Videos

ಬಸವರಾಜ ಬೊಮ್ಮಾಯಿಯವರು ಟ್ವೀಟ್ ಮಾಡಿ, ‘ಹಿರಿಯ ಮುತ್ಸದ್ಧಿ ನಾಯಕರು, ಮಾಜಿ ಪ್ರಧಾನ ಮಂತ್ರಿ ಶ್ರೀ ಹೆಚ್.ಡಿ ದೇವೇಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು, ಭಗವಂತನ ಕೃಪಾಶೀರ್ವಾದ ತಮ್ಮ ಮೇಲೆ ಸದಾ ಇರಲಿಯೆಂದು ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ.

ವಾಜಪೇಯಿ, ಕೆಸಿಆರ್ ಎಲ್ಲ ನಿಖಿಲ್‌ನಂತೆ ಮೊದಲ ಚುನಾವಣೆಯಲ್ಲಿ ಸೋತವರೇ: ಎಚ್ಡಿಕೆ

ಹೆಚ್'ಡಿ.ಕುಮಾರಸ್ವಾಮಿಯವರು ಟ್ವೀಟ್ ಮಾಡಿ, ಜನತಾದಳ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಹಾಗೂ ನನ್ನ ಪೂಜ್ಯ ತಂದೆಯವರಾದ ಶ್ರೀ ಹೆಚ್​ ಡಿ ದೇವೇಗೌಡ ಅವರಿಗೆ 91ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು ಹಾಗೂ ನನ್ನ ಭಕ್ತಿಪೂರ್ವಕ ಪ್ರಣಾಮಗಳು. ನನ್ನ ಶಕ್ತಿ, ಪ್ರೇರಣೆ, ದಾರಿದೀಪ ಆಗಿರುವ ಅವರು, ಪಕ್ಷದ ಪಾಲಿನ ಮಹಾನ್ ಚೈತನ್ಯ. ದೇಶ ಮತ್ತು ಕನ್ನಡನಾಡಿಗೆ ಅವರ ಕೊಡುಗೆ ಅವಿಸ್ಮರಣೀಯ. ಅವರ ಅನುಭವಧಾರೆ ನಮಗೆಲ್ಲ ಅಮೃತಧಾರೆ. ಆ ಭಗವಂತ ಶ್ರೀಯುತರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ. ಅವರು ನಮ್ಮೆಲ್ಲರನ್ನು ಇನ್ನೂ ದೀರ್ಘಕಾಲ ಮುನ್ನಡೆಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ಟ್ವೀಟ್ ಮಾಡಿ, ‘ಹಿರಿಯ ಮುತ್ಸದ್ಧಿ , ಮಾಜಿ ಪ್ರಧಾನಮಂತ್ರಿಗಳಾದ, ಸನ್ಮಾನ್ಯ ಶ್ರೀ ಹೆಚ್​ಡಿ ದೇವೇಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನ ಅನುಗ್ರಹ ಸದಾ ಅವರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ. ನಾಡು, ನುಡಿ, ನೆಲ, ಜಲದ ಬಗೆಗೆ ಅವರಿಗಿರುವ ಕಾಳಜಿ ಹಾಗೂ ಜವಾಬ್ದಾರಿಯುತ ನಡೆ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೇಲಿ ಹೀನಾಯ ಸೋಲು: ಜೆಡಿಎಸ್‌ ಅಭ್ಯರ್ಥಿಗಳಿಗೆ ದೇವೇಗೌಡ ಪತ್ರ

ನನ್ನ ಹುಟ್ಟುಹಬ್ಬದಂದೇ ಎಚ್‌ಡಿಕೆ ಸಿಎಂ ಆಗುತ್ತಾರೆ ಎಂದಿದ್ದ ಗೌಡರು

ಅಂದುಕೊಂಡಂತೆ ಆಗಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಗೆದ್ದು ಇಂದು ಎಚ್‌ಡಿ ದೇವೇಗೌಡರ 91ನೇ  ಹುಟ್ಟುಹಬ್ಬದ ಸಂಭ್ರಮದ ದಿನದಂದೇ ಪುತ್ರ ಎಚ್‌ಡಿ ಕುಮಾರಸ್ವಾಮಿಯವರು ಅಧಿಕಾರವಹಿಸುಕೊಳ್ಳುವ ಒಂದು ಸುಂದರ ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾಗಬೇಕಿತ್ತು ಇಂದೇ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪದವಿ ಸ್ವೀಕರಿಸುತ್ತಿದ್ದರು. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಎಚ್‌ಡಿ ದೇವೇಗೌಡರು ಬಯಸಿದ್ದರು. ಹೀಗಾಗಿಯೇ ಚುನಾವಣಾ ಪ್ರಚಾರದಲ್ಲಿ, ಎಚ್‌ಡಿ ಕುಮಾರಸ್ವಾಮಿಯವರು ಮೇ18 ನನ್ನ ಹುಟ್ಟು ಹಬ್ಬದಂದೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದರು. ಪಂಚರತ್ನ ರಥಯಾತ್ರೆಗೆ ರಾಜ್ಯಾದ್ಯಂತ ಜನರು ತೋರಿಸಿದ ಪ್ರೀತಿ ಅಭೂತಪೂರ್ವ ಬೆಂಬಲ  ಈ ಬಾರಿ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ ಎಂದು ಸ್ವತಃ ದೇವೇಗೌಡರು ಆತ್ಮವಿಶ್ವಾಸದಿಂದ ಇದ್ದರು. ದೇವೇಗೌಡರ ಹುಟ್ಟುಹಬ್ಬಕ್ಕೆ ರಾಜ್ಯದ ಜನತೆ ಭರ್ಜರಿ ಗಿಫ್ಟ್ ಕೊಡಲಿದ್ದಾರೆಂದೇ ನಿರೀಕ್ಷೆ ಇತ್ತು. ಹುಸಿಯಾಯಿತು.

 

click me!