ಜಾಮಿಯಾ ಮಸೀದಿಗೆ ಬಿಗಿ ಭದ್ರತೆ: ಸಂಕೀರ್ತನ ಯಾತ್ರೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ

Published : Dec 02, 2022, 11:40 PM IST
ಜಾಮಿಯಾ ಮಸೀದಿಗೆ ಬಿಗಿ ಭದ್ರತೆ: ಸಂಕೀರ್ತನ ಯಾತ್ರೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ

ಸಾರಾಂಶ

ಪಟ್ಟಣದಲ್ಲಿ ಭಾನುವಾರ ನಡೆಯಲಿರುವ ಹನುಮಮಾಲೆ ಹಾಗೂ ಸಂಕೀರ್ತನ ಯಾತ್ರೆಯಲ್ಲಿ ಸಾವಿರಾರು ಮಂದಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪಟ್ಟಣದ ಜಾಮಿಯಾ ಮಸೀದಿ ಸೇರಿದಂತೆ ಇತರೆಡೆ ಬಿಗಿ ಭದ್ರತೆಗೊಳಿಸಲು ಕಟ್ಟೆಚ್ಚರ ವಹಿಸಲಾಗಿದೆ. 

ಶ್ರೀರಂಗಪಟ್ಟಣ (ಡಿ.02): ಪಟ್ಟಣದಲ್ಲಿ ಭಾನುವಾರ ನಡೆಯಲಿರುವ ಹನುಮಮಾಲೆ ಹಾಗೂ ಸಂಕೀರ್ತನ ಯಾತ್ರೆಯಲ್ಲಿ ಸಾವಿರಾರು ಮಂದಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪಟ್ಟಣದ ಜಾಮಿಯಾ ಮಸೀದಿ ಸೇರಿದಂತೆ ಇತರೆಡೆ ಬಿಗಿ ಭದ್ರತೆಗೊಳಿಸಲು ಕಟ್ಟೆಚ್ಚರ ವಹಿಸಲಾಗಿದೆ. ಪಟ್ಟಣವು ಅತಿ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಡಿ.4 ರಂದು ಬೆಳಗ್ಗೆ 6 ಗಂಟೆಯಿಂದ ಡಿ.5 ರ ಬೆಳಗ್ಗೆ 6 ಗಂಟೆಯವರೆಗೆ ಶ್ರೀರಂಗಪಟ್ಟಣ ಪುರಸಭಾ ವ್ಯಾಪ್ತಿಯ ಶ್ರೀರಂಗಪಪಟ್ಟಣ ಹಾಗೂ ಗಂಜಾಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದ ಅಂಗಡಿ-ಬಾರ್‌ಗಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟ, ಸಾಗಾಣಿಕೆ ಮತ್ತು ಶೇಖರಣೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಚ್‌.ಎನ್‌. ಗೋಪಾಲಕೃಷ್ಣ ಆದೇಶ ಹೊರಡಿಸಿದ್ದಾರೆ.

ಪಟ್ಟಣದಲ್ಲಿ ಕಟ್ಟೆಚ್ಚರ: ಈಗಾಗಲೇ ಜಾಮಿಯಾ ಮಸೀದಿ ಸುತ್ತಲೂ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿ ಅಲ್ಲಲ್ಲಿ ಸೀಸಿ ಕ್ಯಾಮರಾಗಳನ್ನು ಅಳವಡಿಸಿ ಪೊಲೀಸರನ್ನು ನಿಯೋಜನೆಗೊಳಿಸಲಾಗುತ್ತಿದೆ. ಇದಲ್ಲದೆ ಜನವಸತಿ ಸ್ಥಳಗಳಲ್ಲಿ ಶ್ವಾನದಳಗಳ ಮೂಲಕ ತಪಾಸಣೆ ನಡೆಸಲಾಗುತ್ತಿದೆ. ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ಕುವೆಂಪು ವೃತ್ತ, ಖಾಸಗಿ ಬಸ್‌ ನಿಲ್ದಾಣ, ಸಾರಿಗೆ ಬಸ್‌ ನಿಲ್ದಾಣ, ಶ್ರೀರಂಗನಾಥ ದೇವಾಲಯ, ಶ್ರೀ ನಿಮಿಷಾಂಬ ದೇವಾಲಯ ಸೇರಿದಂತೆ ಹೆಚ್ಚು ಜನ ಸೇರುವ ಸ್ಥಳಲ್ಲಿ ಪರಿಶೀಲನೆ ಮಾಡಿ ಬಾರಿ ಬಂದೋಬಸ್‌್ತ ಮಾಡಲು ಪೂರ್ವ ಸಿದ್ದತೆಗಳನ್ನು ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ಸಿದ್ದತೆಗೊಳಿಸಲಾಗುತ್ತಿದೆ.

ಮದ್ದೂರಿನಲ್ಲಿ ಘೋರ ದುರಂತ: 3 ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ ತಾಯಿ

ಹಿಂದು ಜಾಗರಣಾ ವೇದಿಕೆ ಸಮಿತಿಯಿಂದ ಪಟ್ಟಣ ಹಾಗೂ ಗಂಜಾಂ ವೃತ್ತಗಳಲ್ಲಿ ಶ್ರೀ ಆಂಜನೇಯ ಹಾಗೂ ಶ್ರೀರಾಮನ ಕಟೌಟ್‌, ಬ್ಯಾನರ್‌, ಬಂಟಿಂಗ್ಸ್‌ಗಳನ್ನು ಕಾರ್ಯಕರ್ತರು ಕಟ್ಟಿಸಿದ್ದತೆ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಪಟ್ಟಣದ ಪ್ರವೇಶದ್ವಾರದಲ್ಲಿ ಸ್ವಾಗತ ಕಮಾನು ಗೇಟ್‌ ನಿರ್ಮಿಸಿ ಎಲ್ಲಾ ವೃತ್ತಗಳಲ್ಲಿ ಕೇಸರಿಮಯವಾಗಿದ್ದು, ಪೊಲೀಸರು ಸಹ ಭಾರಿ ಬಿಗಿ ಭದ್ರತೆಗೊಳಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಕಾಪಾಡಲು ಎಚ್ಚರ ವಹಿಸಿದ್ದಾರೆ.

ಪೋಸ್ಟರ್‌ ಬಿಡುಗಡೆ: ಪಟ್ಟಣದಲ್ಲಿ ಡಿ.4 ರಂದು ನಡೆಯಲಿರುವ ಹನುಮ ಮಂದಿರ ನಿರ್ಮಾಣ ಸಂಕೀರ್ತನಾ ಯಾತ್ರೆ ಭಿತ್ತಿಪತ್ರ ಹಾಗೂ ಪೋಸ್ಟರ್‌ಗಳನ್ನು ಶ್ರೀಲಕ್ಷ್ಮಿ ದೇವಾಲಯದ ಅರ್ಚಕರಾದ ಕೃಷ್ಣ ಭಚ್‌, ಶ್ರೀಕ್ಷಣಾಂಭಿಕ ದೇವಸ್ಥಾನದ ಅರ್ಚಕ ರಾಘವೇಂದ್ರ ಗುರುಗಳು ಬಿಡುಗಡೆ ಮಾಡಿದರು. ಪಟ್ಟಣದ ಮೂಡಲ ಬಾಗಿಲು ಶ್ರೀಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಹಿಂದೂಪರ ಕಾರ್ಯಕರ್ತರೊಂದಿಗೆ ಪೋಸ್ಟರ್‌ ಬಿಡುಗಡೆ ಮಾಡಿದ ಗುರುಗಳು, ಇದೇ ನ.27 ರಿಂದ ಮಾಲಾಧಾರಣೆ ಕಾರ್ಯ ಆರಂಭಗೊಳ್ಳಲಿದೆ ಎಂದರು.

ಡಿ.4ರಂದು ಗಂಜಾಂನ ಶ್ರೀನಿಮಿಷಾಂಬ ದೇವಾಲಯದ ಬಳಿಯ ಆಂಜನೇಯ ಸ್ವಾಮಿ ದೇಗುಲದಿಂದ ಮೂಡಲ ಬಾಗಿಲು ಆಂಜನೇಯ ದೇವಾಲಯ ಪುರ್ನ ನಿರ್ಮಾಣ ಸಂಕಲ್ಪ ಯಾತ್ರೆಯು ಆರಂಭಗೊಳ್ಳಲಿದೆ. ಬಳಿಕ ಪಟ್ಟಣದ ಮುಖ್ಯ ರಸ್ತೆ ಮಾರ್ಗವಾಗಿ ಶ್ರೀ ಮೂಡಲ ಬಾಗಿಲು ಆಂಜನೇಯನಿಗೆ ನಮಸ್ಕರಿಸಿ ಶ್ರೀರಂಗನಾಥಸ್ವಾಮಿ ದೇಗುಲದ ಆವರಣದಲ್ಲಿ ಯಾತ್ರೆಯು ಅಂತ್ಯಗೊಳ್ಳಲಿದೆ ಎಂದರು. ಸಂಕೀರ್ತನ ಯಾತ್ರೆಯಲ್ಲಿ ಪಟ್ಟಣ ಸೇರಿದಂತೆ ಜಿಲ್ಲೆ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಹನುಮ ಮಾಲಾಧಾರಿಗಳು ಭಾಗವಹಿಸಲಿದ್ದಾರೆ ಎಂದರು.

Mandya: ಕುಮಾರಸ್ವಾಮಿ ಹೇಳಿಕೆ ಓಟಿನ ರಾಜಕಾರಣ: ಎಚ್‌.ಸಿ.ಮಹದೇವಪ್ಪ

ಇದೇ ವೇಳೆ ಶ್ರೀಆಂಜನೇಯಸ್ವಾಮಿಗೆ ಜೈಕಾರ ಹಾಕಿದ ಹಿಂದೂಪರ ಸಂಘಟನೆಗಳ ಮುಖಂಡರು, ಕಟ್ಟುವೆವು ನಾವು ಮಂದಿರ ಕಟ್ಟುವೆವು ಎಂಬ ಘೋಷಣೆಯೊಂದಿಗೆ ಹರ್ಷೋದ್ಘಾರ ವ್ಯಕ್ತಪಡಿಸಿದರು. ಪಟ್ಟಣದ ಜಾಮಿಯಾ ಮಸೀದಿ ಈ ಹಿಂದೆ ಶ್ರೀಮೂಡಲ ಬಾಗಿಲು ಅಂಜನೆಯಸ್ವಾಮಿ ದೇಗುಲವಾಗಿತ್ತು. ಟಿಪ್ಪು ಸುಲ್ತಾನ್‌ ಹಾಗೂ ಹೈದರಾಲಿ ಆಳ್ವಿಕೆಯ ಕಾಲದಲ್ಲಿ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಿರುವುದಾಗಿ ಆರೋಪ ವ್ಯಕ್ತಪಡಿಸಿ ತೀವ್ರ ಆಕ್ರೋಶವನ್ನು ಹಿಂದೂಪರ ಮುಖಂಡರುಗಳು ಹೊರ ಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ