Kodagu: ಬಿಗ್ ತ್ರಿ ಇಂಪ್ಯಾಕ್ಟ್: ಸಂತ್ರಸ್ಥರಿಗೆ ಮನೆ ಹಸ್ತಾಂತರಿಸಿದ ಜಿಲ್ಲಾಡಳಿತ

By Govindaraj S  |  First Published Dec 2, 2022, 10:26 PM IST

2018ರಲ್ಲಿ ಕೊಡಗಿನಲ್ಲಿ ನಡೆದ ಭೀಕರ ಭೂಕುಸಿತದಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ಥರ ಪೈಕಿ 74 ಕುಟುಂಬಗಳಿಗೆ ಮನೆಗಳು ನಿರ್ಮಾಣವಾಗಿದ್ದರೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ  ದೊರೆತ್ತಿರಲಿಲ್ಲ.


ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು 

ಕೊಡಗು (ಡಿ.02): 2018ರಲ್ಲಿ ಕೊಡಗಿನಲ್ಲಿ ನಡೆದ ಭೀಕರ ಭೂಕುಸಿತದಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ಥರ ಪೈಕಿ 74 ಕುಟುಂಬಗಳಿಗೆ ಮನೆಗಳು ನಿರ್ಮಾಣವಾಗಿದ್ದರೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ  ದೊರೆತ್ತಿರಲಿಲ್ಲ. ಆದರೆ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾರಿಸಿದ್ದ ಬಿಗ್ ತ್ರಿ ಬುಲೆಟ್‌ಗೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಶುಕ್ರವಾರ ಕೊನೆಗೂ ಮನೆಗಳನ್ನು ಹಸ್ತಾಂತರಿಸಿದ್ದಾರೆ. ಹೀಗಾಗಿ ಪ್ರಾಕೃತಿಕ ವಿಕೋಪದ‌ ನಿರಾಶ್ರಿತರಿಗೆ ಶುಕ್ರವಾರ ಹಬ್ಬದ ದಿನ. ಕಳೆದ ನಾಲ್ಕು ವರ್ಷಗಳಿಂದ ಸೂರಿಗಾಗಿ‌ ಚಾತಕ ಪಕ್ಷಿಯಂತೆ ಕಾದಿದ್ದ ಸುಮಾರು 74 ಕುಟುಂಬಗಳ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು. 

Tap to resize

Latest Videos

undefined

ನವೆಂಬರ್ ಕೊನೆ ವಾರದಲ್ಲಿ ನಿರಂತರ ಒಂದುವರೆ ಗಂಟೆಗಳ ಕಾಲ ಸುವರ್ಣ ನ್ಯೂಸ್ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಡಿಸೆಂಬರ್ 2 ರಂದೇ ಮನೆ ಕೊಡುವುದಾಗಿ ಜಿಲ್ಲಾಡಳಿತ ಮತ್ತು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಆಶ್ವಾಸನೆ ನೀಡಿದ್ದರು. ಕೊಟ್ಟ ಮಾತಿನಂತೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಶುಕ್ರವಾರ 74 ಫಲಾನುಭವಿಗಳಿಗೆ ಮನೆ ಹಸ್ತಾಂತರ ಮಾಡಿದರು. ಇದು ಸುವರ್ಣ ನ್ಯೂಸ್ ಬಿಗ್ ತ್ರಿ ಇಂಫ್ಯಾಕ್ಟ್. ಮನೆ ಹಸ್ತಾಂತರವಾಗುತ್ತಿದ್ದಂತೆ ಸಂತ್ರಸ್ಥರ ಖುಷಿಗೆ ಪಾರವೇ ಇರಲಿಲ್ಲ. ಹೊಸ ಮನೆಗಳಿಗೆ ತಳಿರು ತೋರಣ, ಬಾಳೆ ಕಂದುಗಳನ್ನು ಕಟ್ಟಿ ಹಬ್ಬದಂತೆ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದರು. 

Kodagu: ಕುಟುಂಬವನ್ನು ಏಕಾಏಕಿ ಮನೆಯಿಂದ ಹೊರಹಾಕಿದ ಮಾಲೀಕ: ಬೀದಿಗೆ ಬಿದ್ದ ಬಾಡಿಗೆದಾರ

ಅಷ್ಟೇ ಅಲ್ಲ ಮನೆಗಳ ಸಮೀಪವೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಒಂದು ವಾರದಲ್ಲಿ ಮನೆಕೊಡಿಸಿದ ಸುವರ್ಣ ನ್ಯೂಸ್ ಬಿಗ್ ತ್ರಿ ಗೆ ಧನ್ಯವಾದ ಹೇಳಿದರು. ಸುವರ್ಣ ನ್ಯೂಸ್ ನೀಡಿದ ಗಡುವಿಗೆ ಬೆಚ್ಚಿ ಬಿದ್ದ ಜಿಲ್ಲಾಡಳಿತ ಕಡೆಗೂ ಮನೆಗಳನ್ನ ಹಸ್ತಾಂತರಿಸಿತ್ತು. ಕಡೆಗೂ ಸೂರು ಸಿಕ್ಕಿತಲ್ಲಾ ಎಂಬ ಸಂಭ್ರಮದಿಂದಲೇ ಎಲ್ಲರೂ ಹೊಸ ಮನೆಗೆ ಪ್ರವೇಶ ಮಾಡಿದ್ರು. 74 ಕುಟುಂಬಗಳಿಗೆ ಇದುವರೆಗೂ ಮನೆ ಸಿಕ್ಕಿರಲಿಲ್ಲ. ಸರ್ಕಾರ ಮನೆ ಕಟ್ಟಿ ಕೊಟ್ರೂ ಹಸ್ತಾಂತರ ಮಾಡದೆ ಜಿಲ್ಲಾಡಳಿತ ಸತಾಯಿಸುತಿತ್ತು. ಹೀಗಾಗಿ ಸುವರ್ಣ ನ್ಯೂಸ್ ಬಿಗ್ ತ್ರಿ ಬುಲೆಟ್ ಹಾರಿಸಿತ್ತು. ಒಂದೇ ವಾರದಲ್ಲಿ ಮನೆ ನೀಡುವಂತೆ ಜಿಲ್ಲಾಡಳಿತಕ್ಕೆ ಗಡುವು ನೀಡಿತ್ತು. ಇದ್ರಿಂದ ಎಚ್ವೆತ್ತ ಕೊಡಗು ಜಿಲ್ಲಾಡಳಿತ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಫಲಾನುಭವಿಗಳಿಗೆ ಇಂದು ಮನೆ ಹಸ್ತಾಂತರ ಮಾಡಿದೆ. 

Kodagu: ಕೊರಗಜ್ಜ ದೈವಕೋಲಕ್ಕೆ ಅವಮಾನ: ಆರೋಪ

ಮನೆಗಳು ಸಿದ್ಧವಾಗಿದ್ದರೂ ಹಲವು ತಿಂಗಳಿನಿಂದ ಮನೆಗಳು ಸಿಗದೆ ಸಂತ್ರಸ್ಥರು ಎದ್ದುಬಿದ್ದು ಜಿಲ್ಲಾಡಳಿತವನ್ನು ಎಡತಾಗುತ್ತಿದ್ದರು. ಆದರೆ ಸುವರ್ಣ ನ್ಯೂಸ್ ಸುದ್ದಿ ಮಾಡುತ್ತಿದ್ದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಮನೆಗಳನ್ನು ಶುಕ್ರವಾರ ಹಸ್ತಾಂತರ ಮಾಡಲಾಯಿತು. ಮನೆಗಳನ್ನ ಪಡೆದ ನಿರಾಶ್ರಿತರು ಹರ್ಷ ವ್ಯಕ್ತಪಡಿಸಿದರು. ಒಟ್ನಲ್ಲಿ ಈ ಮೂಲಕ 2018ರ ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡು ಮನೆ ಸಿಗದೆ ಪರದಾಡುತ್ತಿದ್ದ 74 ಕುಟುಂಬಗಳಿಗೆ ಮನೆ ದೊರಕಿಸಿಕೊಟ್ಟ ಸಾರ್ಥಕತೆ ಸುವರ್ಣ ನ್ಯೂಸ್‌ನದು. ಸುಮಾರು 4 ವರ್ಷಗಳಿಂದ ಸ್ವಂತ ಸೂರಿಲ್ಲದೆ ಕೂಲಿ ಮಾಡಿ ಮನೆ ಬಾಡಿಗೆ ಕಟ್ಟುತ್ತಿದ್ದ ಸಂತ್ರಸ್ಥರು ಮನೆ ದೊರೆತ ಸಂಭ್ರಮ ವ್ಯಕ್ತಪಡಿಸಿ ಸುವರ್ಣ ನ್ಯೂಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ.

click me!