ಕನ್ನಡ ಸಿನಿಮಾ ಹಾಗೂ ಧಾರಾವಾಹಿಗಳ ಶೂಟಿಂಗ್ ಸ್ಪಾಟ್ ಎಂದೇ ಹೇಳಲಾಗುವ ಮಂಡ್ಯ ಜಿಲ್ಲೆಯ ಮಹದೇವಪುರದಲ್ಲಿ ಹುಲಿ ಕಾಣಿಸಿಕೊಂಡಿದೆ. ಇದರಿಂದ ಸ್ಥಳೀಯ ಜನರು ಭಾರಿ ಆತಂಕಕ್ಕೆ ಒಳಗಾಗಿದ್ದಾರೆ.
ಮಂಡ್ಯ (ಜ.16): ಕನ್ನಡದ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿನ ಕೃಷಿ ಪ್ರಧಾನ ಹಾಗೂ ಹಳ್ಳಿಗಾಡಿನ ಹಿನ್ನೆಲೆಯುಳ್ಳ ದೃಶ್ಯಗಳ ಶೂಟಿಂಗ್ ಮಾಡುವ ನೈಸರ್ಗಿಕ ತಾಣವಾದ ಮಂಡ್ಯ ಜಿಲ್ಲೆಯ ಮಹದೇವಪುರದಲ್ಲಿ ಹುಲಿ ಕಾಣಿಸಿಕೊಂಡಿದೆ. ಇದರಿಂದ ಸ್ಥಳೀಯ ಜನರು ಭಾರಿ ಆತಂಕಕ್ಕೆ ಒಳಗಾಗಿದ್ದಾರೆ.
ಹೌದು, ಸಕ್ಕರೆ ನಾಡು ಮಂಡ್ಯದಲ್ಲಿ ಚಿರತೆ ಆಯ್ತು, ಈಗ ಹುಲಿ ಹಾವಳಿ ಶುರುವಾಗಿದೆ. ರಸ್ತೆಯಲ್ಲಿ, ಹೊಲ-ಗದ್ದೆಗಳಲ್ಲಿ ಹುಲಿ ಒಬ್ಬಂಟಿಯಾಗಿ ಘರ್ಜಿಸುತ್ತಾ ಓಡಾಡುವುದನ್ನು ಸಿಸಿಟಿವಿ ಹಾಗೂ ಮೊಬೈಲ್‌ಗಳಲ್ಲಿ ಸೆರೆ ಹಿಡಿದ ಜನರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಜನನಿಬಿಡ ಹಾಗೂ ಸದಾ ವಾಹನಗಳು ಸಂಚಾರ ಮಾಡುವ ಸ್ಥಳದಲ್ಲಿ ಹುಲಿ ಪ್ರತ್ಯಕ್ಷ ಆಗಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದು, ಬೈಕ್‌ಗಳಲ್ಲಿ ಸಂಚಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ರೈತರು ಕೂಡ ತಮ್ಮ ಜಮೀನುಗಳತ್ ತೆರಳಲು ಭಯ ಪಡುತ್ತಿದ್ದಾರೆ.
undefined
ಬಿಗ್‌ಬಾಸ್ ವಿನ್ನರ್ ಶಶಿಗೆ ಗಾಯ: ಮೆಹಬೂಬಾ ಸಿನಿಮಾ ರಿಯಲಿಸ್ಟಿಕ್ ಫೈಟ್ ವೇಳೆ ಅವಘಡ
ಮತ್ತೊಂದೆಡೆ ಕನ್ನಡ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಹಳ್ಳಿ ಸೊಗಡಿನ ಮತ್ತು ಕೃಷಿ ಪ್ರಧಾನ ದೃಶ್ಯಗಳ ಚಿತ್ರೀಕರಣಕ್ಕೆ ಹೆಚ್ಚಾಗಿ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ ಮಹದೇವಪುರ ಗ್ರಾಮವನ್ನು ಹಾಗೂ ಸುತ್ತಲಿನ ಭತ್ತ ಹಾಗೂ ಕಬ್ಬಿನ ತೋಟಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಈಗ ಮಹದೇವಪುರದಲ್ಲಿಯೇ ಹುಲಿ ಕಾಣಿಸಿಕೊಂಡಿದ್ದರಿಂದ ಶೂಟಿಂಗ್ ಮಾಡುವುದಕ್ಕೆ ಹೋಗುವವರಿಗೂ ಆತಂಕ ಶುರುವಾಗಿದೆ. ಜೊತೆಗೆ, ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಮಹದೇವಪುರ ಗ್ರಾಮದಲ್ಲಿ ಒಬ್ಬಂಟಿಯಾಗಿ ಜನರು ಅಥವಾ ರೈತರು ಸಂಚಾರ ಮಾಡದಂತೆ ಸೂಚನೆ ನೀಡಲಾಗುತ್ತಿದೆ.
ಸೀತಾರಾಮ: ಲವ್‌ಗೆ ಸಪೋರ್ಟ್ ಮಾಡೋ ಗೆಳೆಯಾ ಅಂದ್ರೆ, ಲವರ್ ಫ್ರೆಂಡ್‌ನ ಬುಟ್ಟಿಗಾಕೊಂಡ ಅಶೋಕ!
ಮಹದೇವಪುರ ಗ್ರಾಮದ ಜಮೀನೊಂದರಲ್ಲಿ ಹುಲಿ ಕಾಣಿಸಿಕೊಂಡಿದ್ದು, ಜಮೀನಿನಲ್ಲಿ ಹುಲಿ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೊತೆಗೆ, ಹುಲಿ ರಸ್ತೆ ದಾಟುವಾಗಲೂ ಬೈಕ್ ಸವಾರರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಜಾಗೃತಿ ಮೂಡಿಸಿದ್ದಾರೆ.ಇನ್ನು ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ಜಮೀನೊಂದರಲ್ಲಿ ಹುಲಿಯ ಹೆಜ್ಜೆಯನ್ನು ಪತ್ತೆ ಮಾಡಿದ್ದು, ಹುಲಿ ಸೆರೆಗಾಗಿ ಬೋನು ಅಳವಡಿಕೆ ಮಾಡುವುದಕ್ಕೆ ಮುಂದಾಗಿದ್ದಾರೆ.