ಹಿಂದೂಗಳು ಬಾಬ್ರಿ ಮಸೀದಿ ಕೆಡವಿದ್ದು ಸೂಕ್ತ ಅಲ್ಲ: ನಿಡುಮಾಮಿಡಿ ಸ್ವಾಮೀಜಿ

By Sathish Kumar KHFirst Published Jan 16, 2024, 12:36 PM IST
Highlights

ದೇಶದಲ್ಲಿ 500 ವರ್ಷಗಳ ಹಿಂದೆ ರಾಜಕೀಯ ಕಾರಣಕ್ಕಾಗಿ ನಿರ್ಮಿಸಲಾಗಿದ್ದ ಬಾಬ್ರಿ ಮಸೀದಿಯನ್ನು ಹಿಂದೂಗಳು ಕೆಡವಿದ್ದು ಸೂಕ್ತವಲ್ಲ ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರ (ಜ.16): ದೇಶದಲ್ಲಿ 500 ವರ್ಷಗಳ ಹಿಂದೆ ರಾಮನ ದೇವಾಲಯವನ್ನ ಬಾಬರ್ ಕೆಡವಿ ಮಸೀದಿ ಕಟ್ಟಿದ್ದರು. ಅದು ಆಗಿನ ಕಾಲದ ರಾಜಕೀಯ ಅನಿವಾರ್ಯತೆಯಾಗಿತ್ತು. ಈ ಕಾರ್ಯದಲ್ಲಿ ಸಾಮಾನ್ಯ ವರ್ಗದ ಮುಸ್ಲಿಂರು ಭಾಗಿಯಾಗಿರಲಿಲ್ಲ. ಆದರೆ, ಈಗ ಹಿಂದೂ ಸಂಘಟನೆಗಳು ಬಾಬ್ರಿ ಮಸೀದಿ ಕೆಡವಿದ್ದು ಸೂಕ್ತ ಅಲ್ಲ ಎಂದು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲಸ್ವಾಮೀಜಿ ಅವರು, 500 ವರ್ಷಗಳ ಹಿಂದೆ ವಿಷ್ಣು ಅಥವಾ ರಾಮನ ದೇವಾಲಯವನ್ನ ಬಾಬರ್ ಕೆಡವಿ ಮಸೀದಿ ಕಟ್ಟಿದ್ದರು. ಮತ್ತೆ ಅದೇ ಸ್ಥಳದಲ್ಲಿ ದೇವಾಲಯವನ್ನ ಕಟ್ಟಬೇಕು ಎಂಬ ಎಲ್ಲರ ಭಾವನೆ ತಪ್ಪಲ್ಲ. ಅಂದು ಮಂದಿರವನ್ನ ಕೆಡವಿದ್ದು ಸಾಮಾನ್ಯ ಜನರಲ್ಲ ಧಾರ್ಮಿಕ ನಾಯಕರಲ್ಲ ರಾಜಕೀಯ ನಾಯಕರು ಆಗಿದ್ದರು ಅದನ್ನು ಆಳುವ ವರ್ಗದ ನಾಯಕರು ಮಾಡಿದ್ದು ವಿನಃ ಸಾಮಾನ್ಯ ವರ್ಗದ ಮುಸ್ಲಿಂರು ಭಾಗಿಯಾಗಿರಲಿಲ್ಲ ಎಂದರು.

ಹಿಂದು ಸಮಾಜವೆಂದ್ರೆ ಬೇವರ್ಸಿ ಸಮಾಜನಾ? 20% ಮತಕ್ಕಾಗಿ ಜೊಲ್ಲು ಸುರಿಸ್ತಾರೆ: ಅನಂತ್ ಕುಮಾರ್ ಹೆಗಡೆ

ಇನ್ನು ಬಾಬ್ರಿ ಮಸೀದಿತನ್ನು ಬಾಬರ್ ಕೆಡವಿದ್ದು, ಆ ಕಾಲದ ರಾಜಕೀಯ ಅನಿವಾರ್ಯತೆ ಅದಕ್ಕೆ ಕಾರಣವಾಗಿದೆ. ಆದರೆ, ನಾನು ಈಗಲೂ ಹೇಳ್ತೆನೆ  ಬಾಬ್ರಿ ಮಸೀದಿ ಕೆಡವಿದ್ದು ಸೂಕ್ತ ಅಲ್ಲ. ನ್ಯಾಯಾಲಯದ ಆದೇಶದಂತೆ ರಾಮಮಂದಿರ ಕಟ್ಟಿದೀವೆ. ಅದನ್ನು ಕೂಡಲ ಆತುರ ಆತುರವಾಗಿ ಕಟ್ಟುವ ಅವಶ್ಯಕತೆ ‌ಇರಲಿಲ್ಲ. ದ್ವೇಷ ಬೇಡ ಅನಗತ್ಯ ಸಂಘರ್ಷ ಬೇಡ ಶಾಂತಿ ನೆಮ್ಮದಿ ‌ಇದ್ದಾಗ ಮಾತ್ರ ದೇಶದ ಅಭಿವೃದ್ಧಿ ಆಗಲಿದೆ ಎಂದು ಪ್ರವಚನ ಮಾಡಿದ್ದಾರೆ.

ಸಿದ್ದರಾಮಯ್ಯ ಸೇರಿ ಎಲ್ಲ ಕಾಂಗ್ರೆಸ್‌ನವರಿಗೆ ಸಭ್ಯತೆ, ಸಂಸ್ಕೃತಿ ಪಾಠ ಮಾಡ್ತೇನೆ: ಸಂಸದ ಅನಂತ ಕುಮಾರ ಹೆಗಡೆ

ದೇಶವೇ ಸಂತದಿಂದಿರುವಾಗ ವಿವಾದಾತ್ಮಕ ಹೇಳಿಕೆ ಬೇಕಿತ್ತಾ?
ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ 500 ವರ್ಷಗಳ ಬಳಿಕ ರಾಮ ಮಂದಿರವನ್ನು ನಿರ್ಮಾಣ ಮಾಡಿ ಜ.22ಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈಗಾಗಲೇ ಅಯೋಧ್ಯೆ ನಗರವೇ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ನಾಳೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ. ಇಡೀ ಜಗತ್ತೇ ಆಯೋಧ್ಯೆ ನಗರದತ್ತ ಚಿತ್ತವನ್ನು ನೆಟ್ಟಿದೆ. 100 ಕೋಟಿಗೂ ಅಧಿಕ ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಜನ್ಮಭೂಮಿಯಲ್ಲಿ ಬೃಹತ್ ರಾಮ ಮಂದಿರ ನಿರ್ಮಾಣ ಮಾಡಲಾಗಿದ್ದು, ಹಿಂದೂಗಳ ಪವಿತ್ರ ಕ್ಷೇತ್ರವಾಗಿಯೂ ಮಾರ್ಪಾಡಾಗಲಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಸಂತಸದಿಂದ ಇರುವಾಗ ಬಾಗೇಪಲ್ಲಿಯ ನಿಡುಮಾಮಿಡಿ ಸ್ವಾಮೀಜಿ 30 ವರ್ಷಗಳ ಹಿಂದೆ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ ವಿಚಾರವನ್ನು ಪುನಃ ಮುನ್ನೆಲೆಗೆ ತಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸ್ವಾಮಿಜಿಯ ಹೇಳಿಕೆಗೆ ಪರ ವಿರೋಧ ಚರ್ಚೆಯೂ ವ್ಯಕ್ತವಾಗುತ್ತಿದೆ. 

click me!