ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಆರೋಪ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ರನ್ನು ಬೆಳಗಾವಿ ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆಗೊಳಪಡಿಸಿದ ಬೆನ್ನಲ್ಲೆ ಇತ್ತ ಹುಬ್ಬಳ್ಳಿಯಲ್ಲೂ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿ ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ವಿಚಾರಣೆ ನಡೆಸಿದ್ದಾರೆ.
ಬೆಳಗಾವಿ (ಅ.27): ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಆರೋಪ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ರನ್ನು ಬೆಳಗಾವಿ ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆಗೊಳಪಡಿಸಿದ ಬೆನ್ನಲ್ಲೆ ಇತ್ತ ಹುಬ್ಬಳ್ಳಿಯಲ್ಲೂ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿ ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ವಿಚಾರಣೆ ನಡೆಸಿದ್ದಾರೆ.
ಹುಬ್ಬಳ್ಳಿಯ ದುರ್ಗದಬೈಲ್ ಬಳಿ ಇರುವ ರಜತ್ ಉಳ್ಳಾಗಡ್ಡಿಮಠ ಅವರ ನಿವಾಸ. ಹುಲಿ ಉಗುರಿನ ಪೆಂಡೆಂಟ್ ಮಾದರಿಯ ಚೈನ್ ಧರಿಸಿದ್ಧ ರಜತ್ ಉಳ್ಳಾಗಡ್ಡಿಮಠ. ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆ ಮನೆಗೆ ಆಗಮಿಸಿದ ಅರಣ್ಯಾಧಿಕಾರಿಗಳು ಹುಲಿ ಉಗುರಿನ ಚೈನ್ ಕುರಿತು ಮಾಹಿತಿ ಕೆದಕಿದ ಅಧಿಕಾರಿಗಳು.
ಹುಲಿ ಉಗುರು ಧರಿಸಿದ ಪ್ರಕರಣ; ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಪೆಂಡೆಂಟ್ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು
ಇದು ಒರಿಜಿನಲ್ ಅಲ್ಲ, ಸಿಂಥೆಟಿಕ್ ಹುಲಿ ಉಗುರು:
ಹುಲಿ ಉಗುರು ಪೆಂಡೆಂಟ್ ವಿಚಾರದ ಕುರಿತು ರಜತ್ ಉಳ್ಳಾಗಡ್ಡಿ ಸ್ಪಷ್ಠೀಕರಣ ನೀಡಿದ್ದಾರೆ. ನನ್ನ ಬಳಿ ಇರುವ ಪೆಂಡೆಂಟ್ ನಿಜವಾದ ಹುಲಿ ಉಗುರಿನದ್ದಲ್ಲ. ಅದು ಸಿಂಥೆಟಿಕ್ ನಿಂದ ತಯಾರು ಮಾಡಲಾಗಿರುವ ಪೆಂಡೆಂಟ್. ಮದುವೆ ಸಂದರ್ಭದಲ್ಲಿ ನನಗೆ ಈ ಪೆಂಡೆಂಟ್ ಗಿಫ್ಟ್ ಮಾಡಲಾಗಿದೆ. ಫೋಟೋ ಶೂಟ್ ವೇಳೆ ನಾನು ಅದನ್ನ ಧರಿಸಿದ್ದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಪರಿಶೀಲನೆ ಮಾಡಲಿ ತನಿಖೆಗೆ ಸಹಕರಿಸುತ್ತೇನೆ ಎಂದಿದ್ದಾರೆ. ಯಾವ ಸಮಯದಲ್ಲಾದ್ರೂ ಪರಿಶೀಲನೆಗೆ ನಾನು ಸಹಕರಿಸುವೆ.
ನನ್ನ ಮಗನಿಗೆ ಹುಲಿ ಉಗುರು ಪೆಂಡೆಂಟ್ ಯಾರೋ ಗಿಫ್ಟ್ ಕೊಟ್ಟಿದ್ದಾರೆ. ಅದು ಒರಿಜಿನಲ್ ಉಗುರು ಅಲ್ಲ ಎಂದಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್. ಇತ್ತ ಅಳಿಯ ರಜತ್ ಉಳ್ಳಾಗಡಿ ಸಹ ಇದು ಒರಿಜಿನಲ್ ಅಲ್ಲ, ಸಿಂಥೆಟಿಕ್ ಉಗುರು. ಮದುವೆ ವೇಳೆ ಗಿಫ್ಟ್ ಬಂದಿದ್ದು ಎಂದಿದ್ದಾರೆ.