ಹುಲಿ ಉಗುರು ಧರಿಸಿದ ಪ್ರಕರಣ; ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಪೆಂಡೆಂಟ್ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

Published : Oct 27, 2023, 12:57 PM ISTUpdated : Oct 27, 2023, 01:00 PM IST
ಹುಲಿ ಉಗುರು ಧರಿಸಿದ ಪ್ರಕರಣ; ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಪೆಂಡೆಂಟ್ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

ಸಾರಾಂಶ

ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೊಗಳು ವೈರಲ್‌ ಆಗಿರುವ ಹಿನ್ನೆಲೆ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ರನ್ನು ವಿಚಾರಣೆಗೊಳಪಡಿಸಿದ ಬೆಳಗಾವಿ ಅರಣ್ಯ ಇಲಾಖೆ ಅಧಿಕಾರಿಗಳು. 

ಬೆಳಗಾವಿ (ಅ.27): ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೊಗಳು ವೈರಲ್‌ ಆಗಿರುವ ಹಿನ್ನೆಲೆ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ರನ್ನು ವಿಚಾರಣೆಗೊಳಪಡಿಸಿದ ಬೆಳಗಾವಿ ಅರಣ್ಯ ಇಲಾಖೆ ಅಧಿಕಾರಿಗಳು. 

ಅರಣ್ಯಾಧಿಕಾರಿಗಳು ಮನೆಗೆ ಬಂದಾಗ ನಿವಾಸದಲ್ಲಿರದಿದ್ದ ಮೃಣಾಲ್. ಮೃಣಾಲ್ ಬರುವಿಕೆಗಾಗಿ ಮನೆಯಲ್ಲೇ ಕಾದುಕುಳಿತಿದ್ದ ಅರಣ್ಯಾಧಿಕಾರಿಗಳು. ಇದೀಗ ಮನೆಗೆ ಬಂದ ಮೃಣಾಲ್ ಪುತ್ರಿಯ ಜೊತೆಗೆ ಸಮಯ ಕಳೆಯಲು ಬಿಡದೇ ಅರಣ್ಯಾಧಿಕಾರಿಗಳಿಂದ ತೀವ್ರ ವಿಚಾರಣೆ. ನಿನ್ನೆಯಷ್ಟೇ ಭದ್ರಾವತಿಯಿಂದ ಬೆಳಗಾವಿಯ ಮನೆಗೆ ಬಂದಿರುವ ಮೃಣಾಲ್ ಪುತ್ರ ಐರಾ. ನಿನ್ನೆಯಷ್ಟೇ ಪುತ್ರಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದ ಹೆಬ್ಬಾಳ್ಕರ್ ಕುಟುಂಬ. ಇಂದು ‌ಪುತ್ರಿ ಜೊತೆಗೆ ಸಮಯ ಕಳೆಯಲಾಗದೇ ಮೃಣಾಲ್‌‌ಗೆ ವಿಚಾರಣೆ ಎದುರಿಸುವ ಪರಿಸ್ಥಿತಿ ಬಂದೊದಗಿದೆ. ಬೆಳಗಾವಿಯ ಕುವೆಂಪು ನಗರದ ಮನೆಯಲ್ಲಿ  ಮೃಣಾಲ್‌ ಬಳಿ ಇರುವ ಹುಲಿ ಉಗುರಿನ ಮಾಹಿತಿ ಕೇಳುತ್ತಿರುವ ‌ಅರಣ್ಯ ಇಲಾಖೆ ಅಧಿಕಾರಿಗಳು..

ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಅರಣ್ಯಾಧಿಕಾರಿಗಳು: ನನ್ನ ಮಗ ಹಾಕಿದ್ದು ಒರಿಜಿನಲ್ ಅಲ್ಲ, ಪ್ಲಾಸ್ಟಿಕ್ ಉಗುರು ಎಂದ ಹೆಬ್ಬಾಳ್ಕರ

ನನ್ನ ಮಗನಿಗೆ ಯಾರೋ ಗಿಫ್ಟ್ ಕೊಟ್ಟಿದ್ದು ಎಂದಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್. ಹಾಗಾದರೆ ಗಿಫ್ಟ್ ಕೊಟ್ಟಿದ್ದು ಯಾರು? ಅದು ಒರಿಜಿನಲ್ಲೋ, ಡುಪ್ಲಿಕೇಟ್ ಈ ಬಗ್ಗೆ ತೀವ್ರ ವಿಚಾರಣೆ ನಡೆಸಿರುವ ಅರಣ್ಯಾಧಿಕಾರಿಗಳು. ಮದುವೆ ವೇಳೆ ಧರಿಸಿದ್ದ ಹುಲಿ ಉಗುರು ಪೆಂಡೆಂಟ್ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ!
ದತ್ತಪೀಠ ವಿಚಾರದಲ್ಲಿ ರಾಜ್ಯ ಸರ್ಕಾರ ನ್ಯಾಯ ಒದಗಿಸಲಿ: ಸಿ.ಟಿ.ರವಿ ಆಗ್ರಹ