Odisha Train accident: ಬೆಂಗಳೂರಿನ ಮೂರು ಪ್ರಮುಖ ರೈಲುಗಳು ಕ್ಯಾನ್ಸಲ್

By Sathish Kumar KH  |  First Published Jun 3, 2023, 5:38 PM IST

ಒಡಿಶಾದಲ್ಲಿ ನಿನ್ನೆ ರೈಲು ದುರಂತ ನಡೆದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಒಡಿಶಾ ಮಾರ್ಗವಾಗಿ ಹೋಗಬೇಕಿದ್ದ ಮೂರು ರೈಲುಗಳನ್ನು ರದ್ದುಗೊಳಿಸಿ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ.


ಬೆಂಗಳೂರು (ಜೂ.03): ಇಡೀ ದೇಶವೇ ಬೆಚ್ಚಿ ಬೀಳಿಸುವಂತಹ ರೈಲು ದುರಂತ ಒಡಿಶಾದಲ್ಲಿ ನಿನ್ನೆ (ಶುಕ್ರವಾರ) ಸಂಜೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಶನಿವಾರ ಹೊರಡಬೇಕಿದ್ದ ಮೂರು ರೈಲುಗಳನ್ನು ಕ್ಯಾನ್ಸಲ್‌ ಮಾಡಿ ಕೇಂದ್ರ ಸಚಿವಾಲಯ ಆದೇಶ ಹೊರಡಿಸಿದೆ.

ಒಡಿಸ್ಸಾದಲ್ಲಿ ರೈಲುಗಳ ಅಪಘಾತದ ಪರಿಣಾಮ ಕರ್ನಾಟಕದ ಮೇಲೂ ಬೀರಿದೆ. ಇನ್ನು ಒಡಿಶಾದ ಬಾಲಸೋರ್‌ ಮಾರ್ಗವಾಗಿ ಸಂಚಾರ ಮಾಡಬೇಕಿದ್ದ ಒಟ್ಟು 33 ರೈಲುಗಳ ಸಂಚಾರವನ್ನು ಕೇಂದ್ರ ಸರ್ಕಾರದ ರೈಲ್ವೆ ಸಚಿವಾಲಯ ಸ್ಥಗಿತಗಿಳಿಸಿದೆ. ಇನ್ನು ಈ ಪಟ್ಟಿಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಹೊರಡಬೇಕಿದ್ದ ಮೂರು ರೈಲುಗಳ ಸಂಚಾರವೂ ಕೂಡ ಸ್ಥಗಿತಗೊಳಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ. ಇಂದು ವಿವಿಧ ಭಾಗಗಳಿಂದ ಒಡಿಸ್ಸಾ ಮಾರ್ಗವಾಗಿ ತೆರಳಬೇಕಿದ್ದ ರೈಲುಗಳ ಸಂಚಾರ ಕ್ಯಾನ್ಸಲ್ ಮಾಡಲಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

Tap to resize

Latest Videos

Odisha Train Accident ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯ ಅಂತ್ಯ, ಭೀಕರ ಅಪಘಾತಕ್ಕೆ 261 ಬಲಿ!

33 ರೈಲುಗಳ ಪೈಕಿ ಬೆಂಗಳೂರಿನ 3 ರೈಲುಗಳು ಸ್ಥಗಿತ:  ಬೆಂಗಳೂರು, ತೆಲಂಗಾಣ, ಹೈದರಾಬಾದ್, ಚೆನ್ನೈ ಸೇರಿದಂತೆ 33 ರೈಲುಗಳು ಕ್ಯಾನ್ಸಲ್ ಮಾಡಲಾಗಿದೆ. ಈ ಪೈಕಿ ಬೆಂಗಳೂರಿಂದ ತೆರಳಬೇಕಿದ್ದ 3 ರೈಲುಗಳ ಸಂಚಾರ ಕ್ಯಾನ್ಸಲ್ ಆಗಿದ್ದು, ಪ್ರಯಾಣಿಕರು ರೈಲು ಕ್ಯಾನ್ಸಲ್‌ ಬಗ್ಗೆ ಮಾಹಿತಿ ಪಡೆದುಕೊಂಡಿ ತಮ್ಮ ಪ್ರಯಾಣವನ್ನು ಮುಂದೂಡಿಕೆ ಮಾಡಿದ್ದಾರೆ. ಇನ್ನು ಬದಲಿ ಮಾರ್ಗಗಳಲ್ಲಿ ಹೋಗುವುದಕ್ಕೂ ಅನನುಕೂಲ ಆಗಿದ್ದು, ಕೆಲವರು ವಿಮಾನದ ಮೂಲಕ ಹೋಗಲು ನಿರ್ಧರಿಸಿದರೆ, ಮತ್ತೆ ಬಹುತೇಕರು ತಮ್ಮ ಪ್ರಯಾಣವನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ರೈಲು ಬುಕಿಂಗ್‌ ಮಾಡಿದವರಿಗೆ ಇಲಾಖೆಯಿಂದ ಹಣವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

  • ಬೆಂಗಳೂರಿನ ಸ್ಥಗಿತಗೊಂಡ ಮೂರು ರೈಲುಗಳ ವಿವರ:
  • ಬೆಂಗಳೂರು - ಹೌರಾ (12864)
  • ಬೆಂಗಳೂರು - ಕಾಮಾಕ್ಯ (12551)
  • ಬೆಂಗಳೂರು - ಭಾಗಲ್‌ಪುರ (12253)
  • ಶುಕ್ರವಾರ ರಾತ್ರಿ ರದ್ದಾದ ರೈಲುಗಳು: 
  • ಬೆಂಗಳೂರು-ಗುವಾಹಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12509), 
  • ತಿರುವನಂತಪುರಂ - ಕೋಲ್ಕತ್ತಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (22641), 
  • ಮತ್ತು ಹೌರಾ-ತಿರುಪತಿ ಹಮ್‌ ಸಫರ್‌ ಎಕ್ಸ್‌ಪ್ರೆಸ್ (20889) ರೈಲುಗಳು ರದ್ದಾಗಿದ್ದವು.

Mysuru-Bengaluru Train: ರೈಲ್ವೆ ಪೊಲೀಸರ ನಿರ್ಲಕ್ಷ್ಯಕ್ಕೆ ರೈಲಿನಲ್ಲೇ ನರಳಿ ಪ್ರಾಣಬಿಟ್ಟ ಪ್ರಯಾಣಿಕ!

39 ರೈಲುಗಳು ಮಾರ್ಗ ಬದಲಾವಣೆ: ರೈಲು ಅಪಘಾತವಾಗಿರುವ ಕಾರಣ ಅನೇಕ ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಹಾಗೂ ಹಲವು ರೈಲುಗಳ ಮಾರ್ಗಗಳನ್ನು ಬೇರೆ ಮಾರ್ಗಕ್ಕೆ ಬಲಾಯಿಸಲಾಗಿದೆ. ಒಡಿಶಾದಲ್ಲಿ ಸಂಭವಿಸಿದ ಭಾರೀ ದುರಂತದ ನಂತರ, ರೈಲ್ವೆ ಅಧಿಕಾರಿಗಳು ಶನಿವಾರ 48 ರೈಲುಗಳನ್ನು ರದ್ದುಗೊಳಿಸಿದ್ದಾರೆ ಮತ್ತು 39 ರೈಲುಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಿದ್ದಾರೆ. ಮತ್ತು ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಅಪಘಾತದ ನಂತರ 10 ರೈಲುಗಳನ್ನು ಅಲ್ಪಾವಧಿಗೆ ನಿಲ್ಲಿಸಲಾಗಿದೆ ಎಂದು ರೈಲ್ವೆ ಇಲಾಖೆ ಶನಿವಾರ ತಿಳಿಸಿದೆ. ಈ ಹಿನ್ನೆಲೆ ನೀವು ಈ ಯಾವುದಾದರೂ ರೈಲುಗಳಲ್ಲಿ ಸಂಚರಿಸುತ್ತಿದ್ದರೆ ಅಥವಾ ಈ ಮಾರ್ಗದಲ್ಲಿ ರೈಲಿನಲ್ಲಿ ಸಂಚರಿಸುವ ಪ್ಲ್ಯಾನ್‌ ಮಾಡಿದ್ದರೆ ಸರಿಯಾದ ಮಾಹಿತಿ ಪಡೆದುಕೊಂಡು ಟ್ರಾವೆಲ್‌ ಮಾಡಿ.

click me!