ಮುಸ್ಲಿಂರ ಮನೆಯಲ್ಲಿ ಎರಡು-ಮೂರು ಹೆಂಡ್ತಿ, ಅವರಲ್ಲಿ ಯಾರು ಯಜಮಾನಿ?: ಪ್ರತಾಪ್ ಸಿಂಹ ಪ್ರಶ್ನೆ

Published : Jun 03, 2023, 04:00 PM ISTUpdated : Jun 03, 2023, 04:42 PM IST
ಮುಸ್ಲಿಂರ ಮನೆಯಲ್ಲಿ ಎರಡು-ಮೂರು ಹೆಂಡ್ತಿ, ಅವರಲ್ಲಿ ಯಾರು ಯಜಮಾನಿ?: ಪ್ರತಾಪ್ ಸಿಂಹ ಪ್ರಶ್ನೆ

ಸಾರಾಂಶ

ಮುಸ್ಲಿಂರ ಮನೆಯಲ್ಲಿ ಎರಡು ಹೆಂಡ್ತಿ ಮೂರು ಹೆಂಡ್ತಿ ಇದ್ದಾರೆ. ಅವರಲ್ಲಿ ಯಾರು ಯಜಮಾನಿ ಆಗುತ್ತಾರೆ? ಅವರ ಮನೆಯೊಳಗೆ ಬೆಂಕಿ ಹಾಕುತ್ತಿದ್ದಿರಿ. ಕುಟುಂಬ ಒಡೆಯುವ ಕೆಲಸ ಆಗುತ್ತಿದೆ ಎಂದು ಪ್ರತಾಪ್ ಸಿಂಹ ಹೇಳಿಕೆ

ಮೈಸೂರು (ಜೂ.3): ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ವಿಚಾರವಾಗಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು ಚುನಾವಣೆಗೆ ಮೊದಲು ಕಾಂಗ್ರೆಸ್ ನವರು ಎದೆ ಬಡಿದು ಕೊಂಡು ಊರು ಊರಿಗೆ ಹೋಗಿ ತಮಟೆ ಬಾರಿಸಿದ್ದರು. ವಿದ್ಯುತ್ ಎಲ್ಲರಿಗೂ ಉಚಿತ ಅಂದಿದ್ದರು. ಕೆಎಸ್ ಆರ್ ಟಿಸಿ ಗೆ ಇನ್ನೂ ಮಾಹಿತಿ ಬಂದಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ತಲೆ ಮೇಲೆ ಟೋಪಿ ಹಾಕಿ ಕೊಂಡವರನ್ನು ಕಾಂಗ್ರೆಸ್ ನವರು ಎನ್ನುತ್ತಿದ್ದರು. ಈಗ ಕಾಂಗ್ರೆಸ್ ನವರನ್ನು ಜನರಿಗೆ ಟೋಪಿ ಹಾಕುವವರು ಎನ್ನುತ್ತಾರೆ. ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಿದ್ದಿರಿ. ಈಗ ಸರಾಸರಿ ತೆಗೆದು ಉಚಿತ ಕೊಡುತ್ತೇವೆ ಅಂತಾ ಹೇಳಿದ್ದರಿ. ಇದು ಮೋಸ ಅಲ್ವಾ? ಎಂದು ಪ್ರಶ್ನಿಸಿದ್ದಾರೆ.

ಯಾವುದು ಷರತ್ತು ಇಲ್ಲದೆ ಎಲ್ಲರಿಗೂ 200 ಯೂನಿಟ್  ವಿದ್ಯುತ್  ಉಚಿತವಾಗಿ ಕೊಡಲೇ ಬೇಕು. ಜನ್ ಧನ್ ಅಕೌಂಟ್ ಓಪನ್ ಆಗಿದೆ. ಅದಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿದೆ. ಹೀಗಿದ್ದರೂ ಗೃಹ ಲಕ್ಷ್ಮಿ ಜಾರಿ ಯಾಕೆ ಆಗುತ್ತಿಲ್ಲ. ಗೃಹ ಲಕ್ಷ್ಮಿ ಯೋಜನೆ ಮುಂದೂಡಲು ಕುಂಟು ನೆಪ ಹೇಳಲಾಗುತ್ತಿದೆ. ಮನೆ ಯಜಮಾನಿ ಯಾರು ಅಂತಾ ತೀರ್ಮಾನ ಮಾಡಬೇಕಂತೆ? ಮನೆಯೊಳಗೆ ಅತ್ತೆ - ಸೊಸೆ ಕೂತು ಈ ತೀರ್ಮಾನ ಮಾಡಲು ಸಾಧ್ಯನಾ? ಹಿಂದೂಗಳ ಮನೆಯಲ್ಲದರೂ ಅತ್ತೆ - ಸೊಸೆ ನಡುವೆ ಯಜಮಾನಿಗೆ ಪೈಪೋಟಿ ಇರುತ್ತೆ. ಆದರೆ, ಮುಸ್ಲಿಂರ ಮನೆಯಲ್ಲಿ ಎರಡು ಹೆಂಡ್ತಿ ಮೂರು ಹೆಂಡ್ತಿ ಇದ್ದಾರೆ. ಅವರಲ್ಲಿ ಯಾರು ಯಜಮಾನಿ ಆಗುತ್ತಾರೆ? ಅವರ ಮನೆಯೊಳಗೆ ಬೆಂಕಿ ಹಾಕುತ್ತಿದ್ದಿರಿ. ಕುಟುಂಬ ಒಡೆಯುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದ್ದಾರೆ.

6 ಕೆಜಿ ಅಕ್ಕಿಯನ್ನು ಕೇಂದ್ರ ಸರಕಾರ ಕೊಡುತ್ತಿದೆ. ಇದಕ್ಕೆ ನಾಲ್ಕು ಸೇರಿಸಿ 10 ಕೆಜಿ ಕೊಟ್ಟರೆ ಅದು ನಿಮ್ಮ ಗ್ಯಾರಂಟಿ ಹೇಗೆ ಆಗುತ್ತೆ? ಇದು ಮೋಸ ಅಲ್ವಾ? ಯುವ ನಿಧಿ ಹೆಸರಲ್ಲೂ ಸರಕಾರ ಜನರಿಗೆ ಮೋಸ ಮಾಡುತ್ತಿದೆ. ಮತಗಳ ಹಗಲು ದರೋಡೆ ಮಾಡಿ ಈಗ ಜನರಿಗೆ ಟೋಪಿ ಹಾಕುವ ಕೆಲಸ ಆಗುತ್ತಿದೆ. ಸುಭಿಕ್ಷ ರಾಜ್ಯ ಕರ್ನಾಟಕವನ್ನು ಕಾಂಗ್ರೆಸ್ ಭಿಕ್ಷಾ ರಾಜ್ಯ ಮಾಡುತ್ತಿದೆ. ಲೋಕಸಭಾ ಚುನಾವಣೆ ವರೆಗೂ ಜನರನ್ನು ಗ್ಯಾರಂಟಿ ಜಾರಿ ಹೆಸರಿನಲ್ಲಿ ಮಂಗ್ಯಾ ಮಾಡುತ್ತಾರೆ. ಕಾಂಗ್ರೆಸ್ ನೀತಿಗಳಿಂದ ರಾಜ್ಯ ದಿವಾಳಿ ಆಗುತ್ತಿದೆ. ಸದ್ಯದಲೇ ಎಲ್ಲಾ ರೀತಿಯ ತೆರಿಗೆ ಹೆಚ್ಚು ಮಾಡುತ್ತಾರೆ. ಆಸ್ತಿ ನೋಂದಣಿ, ಮದ್ಯದ ತೆರಿಗೆ ಹೀಗೆ ಎಲ್ಲವೂ ಹೆಚ್ಚಾಗುತ್ತದೆ.

ಕರ್ನಾಟಕಕ್ಕೆ ಶ್ರೀಲಂಕಾ, ಬಾಂಗ್ಲಾದೇಶದ ಸ್ಥಿತಿ ಬರುವ ಕಾಲ ದೂರವಿಲ್ಲ. ಕೇಜ್ರಿವಾಲ್ 2013ರಲ್ಲಿ ಕಳಪೆ ಫ್ರೀ ಯೋಜನೆ ತಂದಿದ್ದರು. ಈಗ ಅದನ್ನೆ ಕಾಂಗ್ರೆಸ್ ಸರಕಾರ ಮಾಡಿದೆ. ಇದು ಕರ್ನಾಟಕ ಮಾಡೆಲ್ ಅಲ್ಲ. ಇದನ್ನು ಹಲವರು ರಾಜ್ಯದಲ್ಲಿ ಮಾಡಿ ಜನರನ್ನು ಮಂಗ್ಯಾ ಮಾಡಲಾಗಿದೆ. ಕಾಂಗ್ರೆಸ್ ನ ಪ್ರಣಾಳಿಕೆ ಈಡೇರಿಸಲು ಕೇಂದ್ರ ಬಜೆಟ್ ಹಣ ತಂದರು ಆಗಲ್ಲ ಎಂದು ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.

ನುಡಿದಂತೆ ನಡೆದಿದ್ದೇವೆ, ವಿಪಕ್ಷಗಳಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ

ಕಾಂಗ್ರೆಸ್ ಸರ್ಕಾರ ಜನರಿಗೆ ಮೋಸ ಮಾಡಿದೆ: ಜೋಶಿ
5 ಗ್ಯಾರಂಟಿ ಯೋಜನೆ ಜಾರಿಗೊಳಿಸುವ ನೆಪದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಮೋಸ ಮಾಡಿದೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದ್ದಾರೆ. ಬಸ್ ಪ್ರೀ ವಿಚಾರ, ಅದು ಮಾತ್ರ ಕ್ಲಿಯರ್ ಆಗಿರೋ ಹಾಗೆ ಕಾಣುತ್ತದೆ. ಉಳಿದ ಎಲ್ಲ ಗ್ಯಾರಂಟಿ ಗೊಂದಲದ ಗೂಡಾಗಿವೆ. ನಮ್ಮ ಸರ್ಕಾರದ 5 ಕೆಜಿ ಅಕ್ಕಿಯನ್ನು ಸಿದ್ದರಾಮಯ್ಯ ನಂದು ಅಂತಾ ಕೊಡೋದು ಸಿದ್ದರಾಮಯ್ಯ ಸ್ಪೆಷಾಲಿಟಿ. ಭಾರತ ಸರ್ಕಾರದ 5 ಕೆಜಿ ಅಕ್ಕಿ ಕೊಡೋದು ಬಿಟ್ಟು,10 ಕೆಜಿ ಅಕ್ಕಿ ಕೊಡ್ತೀರಾ ತಿಳಿಸಿ ಎಂದಿದ್ದಾರೆ.

ಬಜರಂಗದಳ ನಿರುದ್ಯೋಗಿಗಳಿಗೂ ಫ್ರೀ ಎಂದು ಕಾಂಗ್ರೆಸ್ ಟ್ವೀಟ್ ವಿಚಾರಕ್ಕೆ ಸಂಬಂಧಿಸಿ, ಸಾಮಾನ್ಯವಾಗಿ ಕಾಂಗ್ರೆಸ್ ಹಿಂದುತ್ವದ ವಿರೋಧಿ ಪಾರ್ಟಿ. ಹಾಗಾಗಿ ಎಲ್ಲದರಲ್ಲೂ ಭಜರಂಗದಳ ತರ್ತಾರೆ. ಕಾಂಗ್ರೆಸ್ ಇಷ್ಟು ದಿನ ಎಲ್ಲ ಕಡೆ ನಿರುದ್ಯೋಗಿಗಳಾಗಿದ್ದರು. ಇದೀಗ ಕರ್ನಾಟಕದಲ್ಲಿ ಕೆಲಸ ಸಿಕ್ಕಿದೆ ಎಂದು ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಇಷ್ಟು ಅಹಂಕಾರ ಒಳ್ಳೆದಲ್ಲ. ಕಾಂಗ್ರೆಸ್ ಗೆ ಕೆಲವು ಕಡೆ ವಿರೋಧ ಪಕ್ಷದ ಅರ್ಹತೆಯೂ ಇಲ್ಲ ಎಂದ ಜೋಶಿ ವಾಗ್ದಾಳಿ‌ ನಡೆಸಿದ್ದಾರೆ.

ಸರ್ಕಾರಿ ನೌಕರರು ಸ್ವ ಇಚ್ಛೆಯಿಂದ ಗ್ಯಾರಂಟಿ ಸ್ಕೀಂ ತ್ಯಜಿಸಿದ್ದಾರೆ: ಡಿ.ಕೆ.ಶಿವಕುಮಾರ್‌

ಇನ್ನು ಎರಡು ಮೂರು ದಿನದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಆಗತ್ತೆ. ಮೊದಲ ಕ್ಯಾಬಿನೆಟ್ ನಲ್ಲಿ ಎಲ್ಲ ಘೋಷಣೆ ಅಂದಿದ್ದರು. ಇದೀಗ ಅನೇಕ ಗೊಂದಲ ಏರ್ಪಾಡು ಮಾಡಿದ್ದಾರೆ. ಮೊದಲು ನನಗೂ ಫ್ರೀ,ನಿನಗೂ ಫ್ರೀ ಎಂದಿದ್ರು. ಇದೀಗ ಅನೇಕ ಗೊಂದಲ ಉಂಟು ಮಾಡಿದ್ದಾರೆ. ಯುವನಿಧಿ 2022 -23 ಪಾಸ್ ಆದವರಿಗೆ ಮಾತ್ರ ಕೊಡೋದಾಗಿ ನೀವ ಹೇಳಿಲ್ಲ. ಸರ್ಕಾರ ಕೊಟ್ಟ ಹಾಗೆ ಆಗಿರಬೇಕು, ಸಿಕ್ಕಂಗೆ ಆಗಿರಬಾರದು ಅನ್ನೋ ತರಹ ಮಾಡಿದೆ. ಇದೊಂದು ಕಣ್ಣೊರೆಸೋ ತಂತ್ರ. ಎಲ್ಲದಕ್ಕಿಂತ ಹೆಚ್ಚಾಗಿ ಇದಕ್ಕೆ ಆರ್ಥಿಕ ವ್ಯವಸ್ಥೆ ಹೇಗೆ ಮಾಡ್ತೀವಿ ಎಂದು ಹೇಳಿಲ್ಲ. ಮೊದಲು ಈ ಕುರಿತು ಸ್ಪಷ್ಟಪಡಿಸಲಿ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!