Road Accident: ರಾಜ್ಯದಲ್ಲಿ ಐದು ಪ್ರತ್ಯೇಕ ಅಪಘಾತ: ಮೂವರ ದುರ್ಮರಣ

Kannadaprabha News   | Asianet News
Published : Jan 03, 2022, 09:25 AM ISTUpdated : Jan 03, 2022, 09:27 AM IST
Road Accident: ರಾಜ್ಯದಲ್ಲಿ ಐದು ಪ್ರತ್ಯೇಕ ಅಪಘಾತ: ಮೂವರ ದುರ್ಮರಣ

ಸಾರಾಂಶ

*  ಕೊಲ್ಹಾರ ಯುಕೆಪಿ ಬಳಿ ಕೃಷ್ಣಾ ನದಿ ಬ್ರಿಡ್ಜ್‌ ಮೇಲೆ ನಡೆದ ಘಟನೆ *  ಗೂಡ್ಸ್‌ ಆಟೋ ಮತ್ತು ಮಜ್ಡಾ ವಾಹನದ ನಡುವೆ ಡಿಕ್ಕಿ: ವ್ಯಕ್ತಿ ಸಾವು *  ರಸ್ತೆ ಅಪಘಾತದಲ್ಲಿ ಯುವಕ ಸಾವು 

ಕೊಲ್ಹಾರ(ಡಿ.03):  ಗೂಡ್ಸ್‌ ಹಾಗೂ ಟಂಟಂ ನಡುವೆ ಡಿಕ್ಕಿ(Collision) ಸಂಭವಿಸಿ ಓರ್ವ ಮಹಿಳೆ ಮೃತಪಟ್ಟು(Death) 5 ಜನ ಮಹಿಳೆಯರು ಗಾಯಗೊಂಡಿರುವ ಘಟನೆ ಪಟ್ಟಣದ ಯುಕೆಪಿ ಬಳಿ ಕೃಷ್ಣಾ ನದಿ(Krishna River) ಬ್ರಿಡ್ಜ್‌ ಮೇಲೆ ಶನಿವಾರ ಸಂಜೆ ನಡೆದಿದೆ. ಬಾಗಲಕೋಟೆ(Bagalkot) ಜಿಲ್ಲೆಯ ಬೀಳಗಿ(Bilagi) ತಾಲೂಕಿನ ಹೊನ್ನಿಹಾಳ ಗ್ರಾಮದ ಲಕ್ಷ್ಮೀಬಾಯಿ ಮಲ್ಲಪ್ಪ ಸಾಳಗುಂದಿ (37) ಮೃತ ಮಹಿಳೆ. ಸಮೀಪದ ಹಳ್ಳದ ಗೆಣ್ಣೂರ ಗ್ರಾಮಕ್ಕೆ ಉಳ್ಳಾಗಡ್ಡಿ ಅಗಿಗಳನ್ನು ಹಚ್ಚುವ ಕೂಲಿ ಕೆಲಸಕ್ಕೆ ಹೋಗಿ ಬರುವಾಗ ಎದುರುಗಡೆಯಿಂದ ಬಂದ ಗೂಡ್ಸ್‌ ವಾಹನ ಬ್ರಿಡ್ಜ್‌ ಮೇಲೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. 

ಅಪಘಾತದ ವೇಳೆ ಗಾಯಗೊಂಡವರನ್ನು ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಡಿವೈಎಸ್‌ ಪಿ ಅರುಣಕುಮಾರ ಕೋಳೂರ, ನಿಡಗುಂದಿ ಸಿ ಪಿ ಆಯ್‌ ಸೋಮಶೇಖರ್‌ ಜುಟ್ಟಲ್‌ , ಕೊಲ್ಹಾರ ಪಿ ಎಸ್‌ ಆಯ್‌ ಸಿದ್ದಪ್ಪ ಯಡಹಳ್ಳಿ ಭೇಟಿ ನೀಡಿದ್ದಾರೆ. ಈ ಸಂಬಂಧ ಕೊಲ್ಹಾರ ಪೊಲೀಸ್‌(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Heavy Fog: 11 ವಾಹನ ನಡುವೆ ಸರಣಿ ಅಪಘಾತ: ಇಬ್ಬರ ದುರ್ಮರಣ

ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ-ನಾಲ್ವರಿಗೆ ಗಾಯ

ಹೊನ್ನಾವರ(Honnavar): ತಾಲೂಕಿನ ಕಾಸರಕೋಡ ಸಮೀಪ ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ಭಟ್ಕಳದಿಂದ(Bhatkal) ಹೊನ್ನಾವರ ಕಡೆಗೆ ಬರುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ(National Highway 66) ಕಾಸರಕೋಡ ಇಕೋ ಬೀಚ್‌ ಕ್ರಾಸ್‌ ಹತ್ತಿರ ರಸ್ತೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಡಿವೈಡರ್‌ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ(Accident) ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಪ್ರಯಾಣಿಕರಾದ ಮಂಡ್ಯ ಜಿಲ್ಲೆ ಧೀರಜ್‌ಕುಮಾರ, ಚಿತ್ರದುರ್ಗ ನೆಹರುನಗರದ ರಾಘವೇಂದ್ರ, ಶ್ರೀನಿವಾಸ ಹಾಗೂ ಕಾರು ಚಾಲಕ ಚಿತ್ರದುರ್ಗ ಜಿಲ್ಲೆಯ ನೆಹರುನಗರದ ಶಶಿಕುಮಾರ ಗಾಯಗೊಂಡವರು. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹೊನ್ನಾವರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಅಪಘಾತ: ಯುವಕ ಸಾವು

ಶಿವಮೊಗ್ಗ(Shivamogga): ರಸ್ತೆ ಅಪಘಾತದಲ್ಲಿ ಯುವಕ ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಗಿನ ಜಾವ ನಗರದ ಹೊರಭಾಗದಲ್ಲಿರುವ ಅಬ್ಬಲಗೆರೆಯ ಮೂಡಲಕೆರೆ ಬಳಿ ನಡೆದಿದೆ. ಶಬ್ಬೀರ್‌ (25) ಮೃತಪಟ್ಟ ಯುವಕ. ಶಿವಮೊಗ್ಗದ ಕಡೆ ಬರುವಾಗ ಅಪಘಾತ ಸಂಭವಿಸಿದೆ. ತಲೆಗೆ ತೀವ್ರ ಹೊಡೆತ ಬಿದ್ದ ಪರಿಣಾಮ ಶಬ್ವೀರ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಟಿಪ್ಪುನಗರದ ನಿವಾಸಿ ಶಬ್ಬೀರ್‌ ಮೂಲತಃ ಹಾಸನದವರು ಎನ್ನಲಾಗಿದೆ.

ಗೂಡ್ಸ್‌ ಆಟೋ ಮತ್ತು ಮಜ್ಡಾ ವಾಹನದ ನಡುವೆ ಡಿಕ್ಕಿ: ವ್ಯಕ್ತಿ ಸಾವು

ಮಲೇಬೆನ್ನೂರು: ಗೂಡ್ಸ್‌ ಆಟೋ ಮತ್ತು ಮಜ್ಡಾ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟು,ಮತ್ತೊಬ್ಬ ವ್ಯಕ್ತಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದಲ್ಲಿ ಸಂಭವಿಸಿದೆ. ಹರಿಹರದ ಗಂಗಾನಗರ ವಾಸಿ ಮಹಮ್ಮದ್‌ ಅಲಿ(18) ಮೃತರು. ಘಟನೆಯಲ್ಲಿ ಗಾಯಗೊಂಡಿರುವ ಹುಸೇನ್‌ ಎಂಬುವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಲೆಬೆನ್ನೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Bengaluru Road Accident :  ಊಟಕ್ಕೆ ತೆರಳಿದ್ದ ಕೌಶಿಕ್-ಸುಷ್ಮಾಗೆ ಮೃತ್ಯುವಾದ ಟ್ಯಾಂಕರ್

ಬೈಕ್‌ ಅಪಘಾತ: ಇಬ್ಬರು ಗಂಭೀರ

ಭಟ್ಕಳ: ಚಲಿಸುತ್ತಿದ್ದ ಬೈಕೊಂದಕ್ಕೆ ನಾಯಿ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಬಿದ್ದು, ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ಮಧ್ಯಾಹ್ನ ಬೆಳ್ನಿಯಲ್ಲಿ ನಡೆದಿದೆ.

ಬೈಕ್‌ ಸವಾರ ಮಂಜುನಾಥ ಸುಕ್ರ ಗೊಂಡ ಹಾಗೂ ಅವರ ತಾಯಿ ದುರ್ಗಿ ಸುಕ್ರ ಗೊಂಡ ಗಂಭೀರ ಗಾಯಗೊಂಡವರಾಗಿದ್ದಾರೆ. ಅವರು ಭಾನುವಾರ ಮಧ್ಯಾಹ್ನ ಆರು ವರ್ಷದ ಬಾಲಕ ಅಖಿಲ್‌ ಗೊಂಡ ಎಂಬಾತನೊಂದಿಗೆ ಸಂಶುದ್ದೀನ್‌ ವೃತ್ತದಿಂದ ಮಾವಿನಕುರ್ವೆಯ ತಲಗೋಡಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ನಾಯಿ ಅಡ್ಡ ಬಂದಿದ್ದು, ನಿಯಂತ್ರಣ ತಪ್ಪಿ ಬೈಕ್‌ ಅಪಘಾತವಾಗಿದೆ. 

ಈ ಸಂದರ್ಭದಲ್ಲಿ ಬಾಲಕ ಅಖಿಲ್‌ಗೂ ಸಹ ಸಣ್ಣಪುಟ್ಟ ಗಾಯವಾಗಿದೆ. ಗಂಭೀರ ಗಾಯಗೊಂಡ ತಾಯಿ, ಮಗನನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ(Treatment) ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಒಯ್ಯಲಾಗಿದೆ. ಅಪಘಾತದ ಬಗ್ಗೆ ಗ್ರಾಮೀಣ ಠಾಣೆಯ ಪೊಲೀಸರು(Police) ಮಾಹಿತಿ ಪಡೆದಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ