'ಇನ್ಸ್ ಪೆಕ್ಟರ್ ಸಸ್ಪೆಂಡ್ ಮಾಡಿಸುತ್ತೇನೆ' ಎಂದ ಮಂಗಳೂರಿನ ಕಾಂಗ್ರೆಸ್ ಮುಖಂಡ ಅಂದರ್!

By Ravi Janekal  |  First Published Aug 15, 2023, 11:44 AM IST

ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಲ್ಲದೇ ಠಾಣಾಧಿಕಾರಿಯನ್ನೇ ವರ್ಗಾವಣೆ ಮಾಡುವ ಬೆದರಿಕೆ ಹಾಕಿದ ಮಂಗಳೂರಿನ ಕಾಂಗ್ರೆಸ್ ಮುಖಂಡನನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ.


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಆ.15): ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಲ್ಲದೇ ಠಾಣಾಧಿಕಾರಿಯನ್ನೇ ವರ್ಗಾವಣೆ ಮಾಡುವ ಬೆದರಿಕೆ ಹಾಕಿದ ಮಂಗಳೂರಿನ ಕಾಂಗ್ರೆಸ್ ಮುಖಂಡನನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ.

Tap to resize

Latest Videos

ಉರ್ವಾ ಠಾಣೆಯ ಇನ್ಸ್ಪೆಕ್ಟರ್ ಸಸ್ಟೆಂಡ್ ಮಾಡಿಸ್ತೇನೆ ಅಂತ ಕೈ ಮುಖಂಡ ಪುನೀತ್ ಶೆಟ್ಟಿ(puneeth shetty) ಬೆದರಿಕೆ ಹಾಕಿದ್ದಲ್ಲದೇ, ಏನು ನ್ಯಾಯಾಧೀಶರನ್ನು ಠಾಣೆಗೆ ಕರೆಸಬೇಕಾ ಉರ್ವಾ ಠಾಣೆಗೆ? ಎಂದು ಬೆದರಿಕೆ ಹಾಕಿದ್ದ. ಯುವ ಕಾಂಗ್ರೆಸ್ ಹಾಗೂ ಇಂಟಕ್ ನ ಮುಖಂಡನಾಗಿರುವ ಪುನೀತ್ ಶೆಟ್ಟಿ ಉರ್ವಾ ಪೊಲೀಸ್ ಠಾಣೆ ಎಎಸ್ಸೈ ವೇಣುಗೋಪಾಲ್ ಗೆ ಬೆದರಿಕೆ ಹಾಕಿದ್ದ. ಹೀಗಾಗಿ ಎಎಸ್ಸೈ ದೂರಿನ ಹಿನ್ನೆಲೆ ಆರೋಪಿ ಕಾಂಗ್ರೆಸ್ ಮುಖಂಡ ಪುನೀತ್ ಶೆಟ್ಟಿ ಬಂಧನವಾಗಿದೆ. ಪರವಾನಿಗೆ ಹೊಂದಿದ ಪಿಸ್ತೂಲ್ ಸಹಿತ 6 ಸಜೀವ ಗುಂಡುಗಳು ವಶವಾಗಿದ್ದು, ಕೃತ್ಯಕ್ಕೆ ಬಳಸಿದ ಸೆಲ್ ಫೋನ್ ಹಾಗೂ ಕಾರು ಸ್ವಾದೀನ ಪಡಿಸಿಕೊಳ್ಳಲಾಗಿದೆ. ಹಲವು ಪೊಲೀಸ್ ಠಾಣೆಗಳಲ್ಲಿ ಆರೋಪಿ ಆಗಿರುವ ಪುನೀತ್ ಶೆಟ್ಟಿ ವಿರುದ್ದ ರೌಡಿ ಶೀಟ್ ಕೂಡ ಇದೆ‌. 

ಮಂಗಳೂರು: ಬಿಜೆಪಿ ಶಾಸಕರ ಪ್ರತಿಭಟನೆಗೆ ಮಣಿದ ಸರ್ಕಾರ: ಅಮಾನತು ಆದೇಶ ವಾಪಾಸ್!

ಘಟನೆ ನಡೆದಿದ್ದೇನು?

ಅಪಘಾತ ಪ್ರಕರಣ ಸಂಬಂಧ ತನಗೆ ಸಂಬಂಧಿಸಿ ಕಾರು ಚಾಲಕನ ಪರವಾಗಿ ಪುನೀತ್ ಶೆಟ್ಟಿ ವಕಾಲತ್ತು ವಹಿಸಿದ್ದಾನೆ. ಹೀಗಾಗಿ ಉರ್ವಾ ಠಾಣೆಯ ಎಎಸ್ಸೈ ವೇಣುಗೋಪಾಲ್(ASI Venugopal Urwa police station) ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ತುಳುವಿನಲ್ಲಿ ಮಾತನಾಡಿದ ಪುನೀತ್ ಶೆಟ್ಟಿ, ನಾನು ಪುನೀತ್ ಶೆಟ್ಟಿ ಮಾತನಾಡುವುದು ನಿಮಗೆ ಕಾರನ್ನು ಯಾಕೆ ತಂದು ಹಾಜರು ಮಾಡಬೇಕು? ಎಂದು ಪ್ರಶ್ನೆ ಮಾಡಿದ್ದಲ್ಲದೇ ಎಫ್ಐಆರ್ ಯಾಕೆ ದಾಖಲಿಸಿಲ್ಲ ಅಂತ ಪ್ರಶ್ನಿಸಿದ್ದಾನೆ. ಈ ವೇಳೆ ಎಎಸ್ಸೈ ಕೋರ್ಟ್ ಅನುಮತಿ ಪಡೆದು ಎಫ್ಐಆರ್ ದಾಖಲಿಸ್ತೀವಿ ಅಂದಾಗ, ಏನು ನ್ಯಾಯಾಧೀಶರನ್ನು ಠಾಣೆಗೆ ಕರೆಸಬೇಕಾ ಉರ್ವಾ ಠಾಣೆಗೆ? ಎಂದು ಉಡಾಫೆಯಾಗಿ ಪ್ರಶ್ನಿಸಿದ್ದಾನೆ.

ಮಂಗಳೂರು: ಡಿಸಿ ಕಚೇರಿ ಮೆಟ್ಟಿಲಲ್ಲಿ ಕೂತ ಬಿಜೆಪಿ ಶಾಸಕರು: ಹಕ್ಕುಚ್ಯುತಿ ವಿರುದ್ದ ಧರಣಿ!

ಮುಂದುವರಿದು ನೀವು ಏನು ಮಾತನಾಡುತ್ತಿರಿ, ನಿಮ್ಮ ಮೇಲೆ ಕೇಸ್ ಮಾಡ್ತೇನೆ. ನಿಮಗೆ ಆಗದಿದ್ದರೆ ನಾನೇ ಅವನನ್ನು ನಾಳೆ ಕಮಿಷನರ್ ಮುಂದೆ ಚಡ್ಡಿಯಲ್ಲಿ ಕೂರಿಸುತ್ತೇನೆ. ನೀವು ಅವನನ್ನು ಅರೆಸ್ಟ್ ಮಾಡಿ, ಈಗ ನಾನು ಕಮಿಷನ‌ರ್ ಕುಲ್ ದೀಪ್ ಗೆ ಫೋನ್ ಮಾಡುವೆ. ನೀವು ಅರೆಸ್ಟ್ ಮಾಡದಿದ್ರೆ ಸೋಮವಾರದೊಳಗೆ ಏನು ಮಾಡಬೇಕು ಅದನ್ನು ನಾನು ಮಾಡುತ್ತೇನೆ. ಅವನನ್ನು ಅರೆಸ್ಟ್ ಮಾಡದಿದ್ದರೆ ಉರ್ವಾ ಸ್ಟೇಷನ್ ಇನ್ ಚಾರ್ಜ್ ಮನೆಗೆ ಕಳುಹಿಸುವ ಕೆಲಸ ನಾನು ಮಾಡುತ್ತೇನೆ. ಉರ್ವಾ ಸ್ಟೇಷನ್ ಇನ್ಸ್ಪೆಕ್ಟರ್ ಸಸ್ಪೆಂಡ್ ಮಾಡಿಸುತ್ತೇನೆ' ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೇ ಅವನ ಕೈ ಕಾಲು ಮುರಿಸ್ತೇನೆ, ಏನು ಅವನು ಇನ್ಸ್ಪೆಕ್ಟರ್ ಸಂಬಂಧದವನಾ?' ಎಂದು ಥ್ರೆಟ್ ಮಾಡಿದ್ದಾನೆ. ಕಾರು-ಬೈಕ್ ಅಪಘಾತ ಕೇಸ್ ನಲ್ಲಿ ಪೊಲೀಸರಿಗೆ ಬೆದರಿಕೆ ಹಾಕಿದ್ದು, ಅಪಘಾತ ಎಸಗಿದ ಬೈಕ್ ಚಾಲಕನ ಅರೆಸ್ಟ್ ಮಾಡಿ ಅಂತ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ದ.ಕ ಜಿಲ್ಲೆಯ ಹಲವು ಕಾಂಗ್ರೆಸ್ ನಾಯಕರ ಜೊತೆ ಪುನೀತ್ ಶೆಟ್ಟಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

click me!