ಮಸೀದಿ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನ ಆಚರಿಸಿದ ಮುಸಲ್ಮಾನ ಬಾಂಧವರು

By Ravi Janekal  |  First Published Aug 15, 2023, 11:09 AM IST

ಇಂದು ದೇಶಾದ್ಯಂತ ಜಾತಿ ಮತ ಧರ್ಮವೆನ್ನದೆ ಎಲ್ಲೆಡೆ 77ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗುತ್ತಿದೆ.ಅಂತೆಯೇ ತುಮಕೂರಿನ ಗೂಡ್‌ಶೆಡ್ ಕಾಲೋನಿ ಮುಸಲ್ಮಾನ ಬಾಂಧವರು ಮಸೀದಿ ಮೇಲೆ ತ್ರಿವರ್ಣಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚಣೆಯನ್ನ ಸಂಭ್ರಮದಿಂದ ಆಚರಿಸಿದರು.


ತುಮಕೂರು (ಆ.15) ಇಂದು ದೇಶಾದ್ಯಂತ ಜಾತಿ ಮತ ಧರ್ಮವೆನ್ನದೆ ಎಲ್ಲೆಡೆ 77ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗುತ್ತಿದೆ.ಅಂತೆಯೇ ತುಮಕೂರಿನ ಗೂಡ್‌ಶೆಡ್ ಕಾಲೋನಿ ಮುಸಲ್ಮಾನ ಬಾಂಧವರು ಮಸೀದಿ ಮೇಲೆ ತ್ರಿವರ್ಣಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚಣೆಯನ್ನ ಸಂಭ್ರಮದಿಂದ ಆಚರಿಸಿದರು.

ಗೂಡ್‌ಶೆಡ್ ಕಾಲೋನಿಯಲ್ಲಿರುವ ಮೀನಾ ಮಸೀದಿ. ಸ್ವಾತಂತ್ರ್ಯೋತ್ಸವ ದಿನಕ್ಕೆ ನಿನ್ನೆಯಿಂದಲೇ ಭರ್ಜರಿ ಸಿದ್ಧತೆ ನಡೆಸಿದ್ದ ಮಸೀದಿ ಆಡಳಿತ ಮಂಡಳಿ. ಅಂತೆಯೇ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧೀಜಿ,ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ ಬೆಳಗುವ ಮೂಲಕ ಮುಸ್ಲಿಂ ಬಾಂಧವರು ಧ್ವಜಾರೋಹಣ ಮಾಡಿದರು. ಈ ವೇಳೆ ಮಕ್ಕಳು ಕೈಯಲ್ಲಿ ಧ್ವಜ ಹಿಡಿದು ಧ್ವಜಾರೋಹಣ ವೇಳೆ ರಾಷ್ಟ್ರಗೀತೆ ಹಾಡಿ ಸಂಭ್ರಮಿಸಿದರು.

Tap to resize

Latest Videos

ದೇಶದ ಅಭಿವೃದ್ಧಿ ದೃಷ್ಟಿಯಿಂದ ಗ್ಯಾರಂಟಿ ಯೋಜನೆ ಜಾರಿ: ಸಿಎಂ

click me!