ಪ್ರತಿ ಜಿಲ್ಲೆಯಲ್ಲಿ ಗೋಶಾಲೆ, ಗೋಮೂತ್ರದಿಂದ ಸೋಪು, ಶಾಂಪು ತಯಾರಿ: ಸಚಿವ ಚವ್ಹಾಣ್‌!

Published : Jan 01, 2022, 08:12 AM IST
ಪ್ರತಿ ಜಿಲ್ಲೆಯಲ್ಲಿ ಗೋಶಾಲೆ, ಗೋಮೂತ್ರದಿಂದ ಸೋಪು, ಶಾಂಪು ತಯಾರಿ: ಸಚಿವ ಚವ್ಹಾಣ್‌!

ಸಾರಾಂಶ

*ಗೋ ಆಧಾರಿತ ಕೃಷಿ, ಗೋ ಉತ್ಪನ್ನಗಳ ತಯಾರಿಗೆ ಆದ್ಯತೆ *ಪ್ರತಿ ಜಿಲ್ಲೆಯಲ್ಲಿ 50-100 ಎಕರೆಯ ಗೋಶಾಲೆ ನಿರ್ಮಾಣ *ಪಶು ಸಂಗೋಪನೆ ಇಲಾಖೆಯಲ್ಲಿನ 458 ಹುದ್ದೆಗಳಿಗೆ ನೇಮಕಾತಿ

ಬೆಂಗಳೂರು (ಜ. 1): ರಾಜ್ಯದಲ್ಲಿ ಪಶು ಆರೈಕೆ ಹಾಗೂ ಗೋ ಸಂರಕ್ಷಣೆಗಾಗಿ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದ್ದು, ರಾಜ್ಯದ ಗೋಶಾಲೆಗಳಲ್ಲಿ ಗೋಮೂತ್ರದಿಂದ ಸೋಪು (Gomutra), ಶಾಂಪು ತಯಾರಿಕೆ ಹಾಗೂ ಸಗಣಿಯಿಂದ ಆಯಿಲ್‌ ಪೇಂಟ್‌ ತಯಾರಿ ಸೇರಿದಂತೆ ಗೋ ಆಧಾರಿತ ಕೃಷಿ ಮತ್ತು ಗೋ ಉತ್ಪನ್ನಗಳ (Cow Products) ತಯಾರಿಕೆಗೆ ಚಿಂತನೆ ನಡೆಸಿದ್ದೇವೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ (Prabhu Chauhan) ಹೇಳಿದ್ದಾರೆ.

ರಾಜ್ಯದಲ್ಲಿ ಗೋಶಾಲೆಗಳ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಪ್ರತಿ ಜಿಲ್ಲೆಯಲ್ಲಿ 50ರಿಂದ 100 ಎಕರೆ ವಿಸ್ತೀರ್ಣದ ಗೋಶಾಲೆ ನಿರ್ಮಾಣಕ್ಕಾಗಿ 50 ಲಕ್ಷ ರು. ಮಂಜೂರು ಮಾಡಲಾಗಿದೆ. ಅದರಲ್ಲಿ ತಲಾ 26 ಲಕ್ಷ ಬಿಡುಗಡೆ ಮಾಡಲಾಗಿದೆ. ಪ್ರತಿ ಗೋಶಾಲೆಗೆ 2 ಕೋಟಿ ರು. ಅನುದಾನ ನೀಡುವ ಗುರಿ ಹೊಂದಿದ್ದೇವೆ. ಕೇವಲ ಗೋಶಾಲೆ ನಿರ್ಮಿಸುವುದು ಮಾತ್ರವಲ್ಲದೆ ಅವುಗಳನ್ನು ಸ್ವಾವಲಂಬಿ ಮಾಡಲು ಗುಜರಾತ್‌, ಮಹಾರಾಷ್ಟ್ರ, ಉತ್ತರ ಪ್ರದೇಶ ಮಾದರಿ ಅನುಸರಿಸಲಾಗುವುದು ಎಂದರು.

ಗುಜರಾತ್‌, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ರಾಜ್ಯಗಳ ಪ್ರವಾಸ ಮಾಡಿ ವಾಪಸಾಗಿರುವ ಅವರು ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು. ಗೋಶಾಲೆಯಲ್ಲಿ ಗೋವುಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು, ಜೊತೆಗೆ ಸಗಣಿ, ಗೋಮೂತ್ರದಿಂದ ಸುಮಾರು ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಿ ಗೋಶಾಲೆಗಳನ್ನು ಸ್ವಾವಲಂಬಿಯಾಗಿಸಿ ಸರ್ಕಾರದ ಅನುದಾನ ಇಲ್ಲದೆ ನಡೆಯುವಂತೆ ಮೂರು ರಾಜ್ಯಗಳಲ್ಲಿ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದ ಕೆಲವು ಗೋಶಾಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ

ಇದೇ ರೀತಿಯಲ್ಲಿ ರಾಜ್ಯದಲ್ಲೂ ಗೋಮೂತ್ರ ಹಾಗೂ ಸಗಣಿಯಿಂದ ಉತ್ಪನ್ನ ತಯಾರಿ, ಗೋಬರ್‌ ಗ್ಯಾಸ್‌ ಉತ್ಪಾದನೆ ಸೇರಿದಂತೆ ಹಲವು ಚಟುವಟಿಕೆ ಮೂಲಕ ಗೋಶಾಲೆಗಳನ್ನು ಸ್ವಾವಲಂಬಿ ಮಾಡಲು ಚಿಂತಿಸಲಾಗಿದೆ. ಇದಕ್ಕಾಗಿ ರಾಜ್ಯದ ಕೆಲವು ಗೋಶಾಲೆಗಳನ್ನು ಪ್ರಾಯೋಗಿಕವಾಗಿ ಆಯ್ಕೆಮಾಡಿ ಗೋ ಆಧಾರಿತ ಕೃಷಿ, ಗೊಬ್ಬರ ತಯಾರಿಕೆ ಮತ್ತು ಕೇಂದ್ರದ ಗೋಬರ್‌ ಧನ್‌ ಯೋಜನೆಯಡಿ ಬಯೋಗ್ಯಾಸ್‌ ತಯಾರಿಕೆ ಕುರಿತು ಮಾದರಿಗಳನ್ನು ಸೃಷ್ಟಿಸಿ ಪರೀಕ್ಷೆ ನಡೆಸಲಾಗುವುದು. ಸಾಧಕ-ಬಾಧಕಗಳ್ನು ಗಮನಿಸಿ ಉಳಿದ ಗೋಶಾಲೆಗಳಿಗೆ ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದರು.

458 ಖಾಲಿ ಹುದ್ದೆಗಳ ನೇಮಕಕ್ಕೆ ಸಿಎಂ ಸಮ್ಮತಿ

ಪಶು ಸಂಗೋಪನೆ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ನೇಮಕಕ್ಕೆ ಸತತ ಪ್ರಯತ್ನ ನಡೆಸಿದ ಫಲವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು 458 ಖಾಲಿ ಹುದ್ದೆಗಳ ನೇಮಕಕ್ಕೆ ಅನುಮತಿ ನೀಡಿದ್ದಾರೆ ಎಂದು ಪ್ರಭು ಚವ್ಹಾಣ್‌ ತಿಳಿಸಿದರು. ಇಲಾಖೆಯಲ್ಲಿ 1,083 ಹುದ್ದೆಗಳು ಖಾಲಿ ಇವೆ. ಪ್ರಸ್ತುತ 400 ಹುದ್ದೆ ಭರ್ತಿ ಹಾಗೂ 58 ಬ್ಯಾಕ್‌ಲಾಗ್‌ ಹುದ್ದೆ ಭರ್ತಿಗೆ ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ. 468 ಹುದ್ದೆಗಳ ಭರ್ತಿಗೆ ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಲಿದ್ದು, ಇಲಾಖೆ ಉಸಿರಾಡುವಂತಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು. 

ಇದನ್ನೂ ಓದಿ:

1) Deemed Forests: ರಾಜ್ಯದಲ್ಲಿ ಡೀಮ್ಡ್ ಅರಣ್ಯ ಮರು ಸಮೀಕ್ಷೆ‌ ನಡೆಸಲು ಡೀಸಿಗಳಿಗೆ ಸಿಎಂ ಸೂಚನೆ!

2) Free Hindu Temples: ದೇವಾಲಯಗಳನ್ನು ಸಂಘ ಪರಿವಾರದ ಕಾರ‍್ಯಕರ್ತರಿಗೆ ಹಂಚಲು ಹೊರಟಿದೆ: ಡಿಕೆಶಿ!

3) Covid 19 in Bengaluru: ಆರು ತಿಂಗಳ ನಂತರ ಗರಿಷ್ಠ ಕೇಸ್: 656 ಮಂದಿಗೆ ಸೋಂಕು, ಐದು ಸಾವು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು