Latest Videos

'ನಾನು ದರ್ಶನ್ ಗೆಳೆಯರು ಆದರೆ..,' ಪೊಲೀಸರ ಮುಂದೆ ಹಾಸ್ಯ ನಟ ಚಿಕ್ಕಣ್ಣ ಹೇಳಿದ್ದೇನು?

By Ravi JanekalFirst Published Jun 17, 2024, 7:51 PM IST
Highlights

ಅಂದು ದರ್ಶನ್ ಕರೆ ಮಾಡಿ ಊಟಕ್ಕೆ ಬರುವಂತೆ ಕರೆದಿದ್ರು. ಒಟ್ಟಿಗೆ ಊಟ ಮಾಡೋಣ ಬಾ ಚಿಕ್ಕಣ್ಣ ಅಂತಾ ಕರೆದಿದ್ರು. ಹಾಗಾಗಿ ಊಟ ಮಾಡಲೆಂದು ನಾನು ಸ್ಟೋನಿ ಬ್ರೂಕ್ ರೆಸ್ಟೊರೆಂಟ್‌ಗೆ ಹೋಗಿದ್ದೆ ಎಂದು ರೇಣುಕಾ ಸ್ವಾಮಿ ಕೊಲೆಗೆ ಮುನ್ನ ರೆಸ್ಟೊರೆಂಟ್‌ ನಲ್ಲಿ ದರ್ಶನ್ ಜೊತೆಗೆ ಇದ್ದ ಕಾರಣವನ್ನು ಹಾಸ್ಯನಟ ಚಿಕ್ಕಣ್ಣ ಪೊಲೀಸ್ ಠಾಣೆಗೆ ತೆರಳಿ ತಿಳಿಸಿದರು.

ಬೆಂಗಳೂರು (ಜೂ.17): ಅಂದು ದರ್ಶನ್ ಕರೆ ಮಾಡಿ ಊಟಕ್ಕೆ ಬರುವಂತೆ ಕರೆದಿದ್ರು. ಒಟ್ಟಿಗೆ ಊಟ ಮಾಡೋಣ ಬಾ ಚಿಕ್ಕಣ್ಣ ಅಂತಾ ಕರೆದಿದ್ರು. ಹಾಗಾಗಿ ಊಟ ಮಾಡಲೆಂದು ನಾನು ಸ್ಟೋನಿ ಬ್ರೂಕ್ ರೆಸ್ಟೊರೆಂಟ್‌ಗೆ ಹೋಗಿದ್ದೆ ಎಂದು ರೇಣುಕಾ ಸ್ವಾಮಿ ಕೊಲೆಗೆ ಮುನ್ನ ರೆಸ್ಟೊರೆಂಟ್‌ ನಲ್ಲಿ ದರ್ಶನ್ ಜೊತೆಗೆ ಇದ್ದ ಕಾರಣವನ್ನು ಹಾಸ್ಯನಟ ಚಿಕ್ಕಣ್ಣ ಪೊಲೀಸ್ ಠಾಣೆಗೆ ತೆರಳಿ ತಿಳಿಸಿದರು.

ರೇಣುಕಾ ಸ್ವಾಮಿ ಕೊಲೆಗೆ ಮುನ್ನ ಅಂದು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಕಾರಣಕ್ಕೆ ಚಿಕ್ಕಣ್ಣ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದ ಸಂಬಂಧ ಪ್ರತಿಕ್ರಿಯಿಸಿದರು, ದರ್ಶನ್ ನಾನು ಗೆಳೆಯರು ಸಾಮಾನ್ಯವಾಗಿ ಹಾಗಾಗ ಊಟಕ್ಕೆ ಸೇರುತ್ತಿದ್ದೆವು. ಅಂದು ಕೂಡ ಊಟಕ್ಕೆ ಕರೆದಿದ್ದರಿಂದ ರೆಸ್ಟೊರೆಂಟ್‌ಗೆ ತೆರಳಿ ದರ್ಶನ್‌ರೊಂದಿಗೆ ಊಟ ಮಾಡಿಕೊಂಡು ಅಲ್ಲಿಂದ ಹೊರಟೆ. ಬಳಿಕ ಅಲ್ಲಿ ಏನಾಯ್ತು ಅನ್ನೋದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆಯಾಗಲಿ, ಇನ್ಯಾವುದೇ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಪ್ರಕರಣದ ಬಗ್ಗೆ ನನಗೆ ಗೊತ್ತಾಗಿದ್ದೇ ನ್ಯೂಸ್ ನಲ್ಲಿ ನೋಡಿದಾಗ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಕೊಲೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ತನಿಖಾಧಿಕಾರಿಗಳ ಎದುರು ಹಾಸ್ಯ ನಟ ಚಿಕ್ಕಣ್ಣ ಸ್ಪಷ್ಟಪಡಿಸಿದ್ದಾರೆ.

ದರ್ಶನ್ ಬಂಧನ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ ಚಿಕ್ಕಣ್ಣನಿಗೆ ನೋಟಿಸ್: ಹಾಸ್ಯ ನಟನಿಗೆ ಢವ ಢವ ಶುರು!

ಘಟನೆ ಹಿನ್ನೆಲೆ:

ಪ್ರೇಯಸಿಗೆ ಅಶ್ಲೀಲ ಸಂದೇಶ ಕಳಿಸಿದ್ದಕ್ಕಾಗಿ ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಅದಕ್ಕೂ ಮುನ್ನ ಜೂ.8 ಶನಿವಾರದಂದ ದರ್ಶನ್ ಗ್ಯಾಂಗ್ ಆರ್‌ಆರ್ ನಗರದ ಸ್ಟೋನಿ ಬ್ರೂಕ್ (Stonny Brook Pub)ನಲ್ಲಿ ಪಾರ್ಟಿ ಮಾಡಿದ್ದರು. ಅದೇ ಪಾರ್ಟಿಯಲ್ಲಿ ಹಾಸ್ಯನಟ ಚಿಕ್ಕಣ್ಣ ಸಹ ಭಾಗಿಯಾಗಿದ್ದರು. ಹೀಗಾಗಿ ಚಿಕ್ಕಣ್ಣಗೂ ಪೊಲೀಸರು ನೋಟಿಸ್ ಕಳುಹಿಸಿ ಸ್ಥಳಕ್ಕೆ ಚಿಕ್ಕಣ್ಣರನ್ನ ಕರೆತಂದು ಮಹಜರು ನಡೆಸಿದ್ದ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು.

click me!