2024ರ ನವೆಂಬರ್‌ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ನಂತರ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವವರು ಶಸ್ತ್ರತ್ಯಾಗ ಮಾಡಿ ಶರಣಾಗುವಂತೆ ಕರೆ ನೀಡಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ
ಬೆಂಗಳೂರು(ಜ.09): ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸತತ ಎರಡು ದಶಕಕ್ಕೂ ಹೆಚ್ಚಿನ ಕಾಲ ಸಶಸ್ತ್ರವಾಗಿ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿದ್ದ 6 ಮಂದಿ ನಕಲೀಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಬುಧವಾರ ಶರಣಾದರು.
ಶರಣಾದ ನಕ್ಸಲರಿಗೆ ಮುಖ್ಯಮಂತ್ರಿಗಳು ಸಂವಿಧಾನ ಪುಸ್ತಕ ಮತ್ತು ಗುಲಾಬಿ ನೀಡುವ ಮೂಲಕ ಅವರ ಶರಣಾಗತಿಯನ್ನು ಅಂಗೀಕರಿಸಿದರು. ಆ ಮೂಲಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವವರು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶರಣಾದಂತಾಗಿದೆ.
ಶರಣಾದ ನಕ್ಸಲರ ಕುಟುಂಬಗಳಲ್ಲೀಗ ಸಂತಸ: ಕುಟುಂಬಸ್ಥರಲ್ಲಿ ಚಿಗುರೊಡೆದ ಹೊಸ ಕನಸು!
2024ರ ನವೆಂಬರ್‌ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ನಂತರ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವವರು ಶಸ್ತ್ರತ್ಯಾಗ ಮಾಡಿ ಶರಣಾಗುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ನಕ್ಸಲ್ ಪುನರ್ವಸತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕರ ವೇದಿಕೆ ಸದಸ್ಯರು ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿ ಮತ್ತಿತರ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಸಕ್ರಿಯರಾಗಿದ್ದ ನಕ್ಸಲೀಯರೊಂದಿಗೆ ಮಾತುಕತೆ ನಡೆಸಿ ಸಮಾಜದ ಮುಖ್ಯವಾಹಿನಿ ಯೊಂದಿಗೆ ಬರುವಂತೆ ಮಾತುಕತೆ ನಡೆಸಿದರು. ಅವರ ಮಾತುಕತೆ ಫಲವಾಗಿ ಪ್ರಮುಖ ನಕಲ್ ನಾಯಕಿ ಮುಂಡಗಾರು ಲತಾ ಸೇರಿ ಒಟ್ಟು 6 ಮಂದಿ ಶರಣಾಗತಿಗೆ ಒಪ್ಪಿಗೆ ಸೂಚಿಸಿದ್ದರು. ಅದರಂತೆ ಬುಧವಾರ ಸಂಜೆ 6 ಗಂಟೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಆಗಮಿಸಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾದರು.
ಇವರೇ ಶಸ್ತ್ರ ಕೆಳಗಿಳಿಸಿ ಶರಣಾದ 6 ಮಂದಿ ನಕ್ಸಲೀಯರು
ಮುಂಡಗಾರು ಲತಾ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮುಂಡಗಾರು ಗ್ರಾಮದ ಲತಾ ಅವರದ್ದು ದೊಡ್ಡ ಕುಟುಂಬ ಲತಾ ಅವರು ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪಿಯುಸಿ ಓದುವಾಗ ತಮ್ಮ ವ್ಯಾಸಂಗ ಮೊಟಕುಗೊಳಿಸಿದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟ ಸಮಿತಿಯ ಮುಂಚೂಣಿ ನಾಯಕಿಯಾಗಿದ್ದರು. ಬಳಿಕ ನಕ್ಸಲ್ ಹೋರಾಟಕ್ಕೆ ಧುಮುಕಿ ಸಕ್ರಿಯರಾಗಿದ್ದರು.
ಸುಂದರಿ ಕುತ್ಲೂರು
ಸುಂದರಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲೂರು ಗ್ರಾಮದವರು. ಬಡತನ ಹಾಗೂ ಶಾಲೆ ದೂರವಿದ್ದುದರಿಂದ 3ನೇ ತರಗತಿಯ ಬಳಿಕ ಶಾಲೆ ಬಿಟ್ಟರು. ಇವರ ಕುಟುಂ ಬವೂ ಸಹ ಕುದುರೆ ಮುಖ ರಾಷ್ಟ್ರೀಯ ಉದ್ಯಾನ ಯೋಜನೆ ಯಿಂದಾಗಿ ತನ್ನ ಎಲ್ಲವನ್ನು ಕಳೆದು ಕೊಳ್ಳುವ ಅಪಾಯವನ್ನು ಎದುರಿಸುತ್ತಿ ದ್ದರು. ಪ್ರಜಾಸತ್ತಾತ್ಮಕ ಚಳವಳಿ ಫಲ ನೀಡದೆಂದು ಕಂಡಾಗ ಆಗಿನ ಹಲವು ಯುವಜನರಂತೆ ಸುಂದರಿಯೂ ಸಹ ಆಯುಧ ಕೈಗೆತ್ತಿಕೊಂಡರು. 2004ರಲ್ಲಿ ನಕ್ಸಲ್ ಸಂಘಟನೆ ಸೇರಿದರು.
ವನಜಾಕ್ಷಿ
ವನಜಾಕ್ಷಿ ಅವರು ಕಳಸ ಸಮೀಪದ ಬಾಳೆಹೊಳೆ ಗ್ರಾಮದವರು. ಇವರು ಎಸ್‌ಎಸ್‌ಎಲ್‌ಸಿ ಬಳಿಕ ಓದು ನಿಲ್ಲಿಸಿದರು. 1992 ಮತ್ತು 1997ರಲ್ಲಿ ಬಾಳೆಹೊಳೆ ಗ್ರಾಮ ಪಂಚಾಯತಿ ಸದಸ್ಯೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇವರ ಕುಟುಂಬಕ್ಕೆ ಬಲಾಡ್ಯರಿಂದ ತಮ್ಮ ತುಂಡು ಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ತಾಯಿ ಮಾನಸಿಕ ಅಸಸತೆಗೆ ಗುರಿ ಯಾಗಿ, ತಮ್ಮ ಆತ್ಮಹತ್ಯೆಗೆ ಶರಣಾದ. 2000 ಇಸವಿಯಲ್ಲಿ ಮಾವೋವಾದಿ ದಳದ ಸದಸ್ಯೆಯಾದರು.
ಜಯಣ್ಣ ಅರೋಲಿ
ಜಯಣ್ಣ ಆರೋಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅರೋಲಿ ಗ್ರಾಮದವರು. ಜಯಣ್ಣ 2ನೇ ವರ್ಷದ ಪದವಿವರೆಗೂ ಓದಿರುವ ದಲಿತ ಯುವಕ. ಕಾಲೇ ಜಿನಲ್ಲಿ ಇರುವಾ ಗಲೇ ಆ ಭಾಗದಲ್ಲಿ ನಡೆಯುತ್ತಿದ್ದ ಮಾವೋವಾದಿ ಚಳವಳಿಯ ಕಡೆ ಆಕರ್ಷಿತರಾದರು. ಭಾಸ್ಕರ್ ಅವರ ಎನ್‌ಕೌಂಟರ್‌ನಿಂದ ನೊಂದಿದ್ದರು. ತನ್ನ 24ನೇ ವಯಸ್ಸಿನಲ್ಲಿ 2000ರಲ್ಲಿ ದಳದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. 2018 ಮತ್ತೆ ಸಶಸ್ತ್ರ ಚಳವಳಿಗೆ ಮರಳಿದರು.
ಕಂಪ್ಲೀಟ್ ಕರ್ನಾಟಕ: ನಕ್ಸಲ್ ಯುಗಾಂತ್ಯ, ಬಿಬಿಎಂಪಿ ಕಚೇರಿಯಲ್ಲಿ 2ನೇ ದಿನವೂ ಇಡಿ ತಲಾಶ್!
ಕೆ. ವಸಂತ್
ಕೆ. ವಸಂತ್ ಅವರು ತಮಿಳುನಾಡಿನ ರಾಣಪೇಟ್‌ನ ವೆಲ್ಲೂರು ಜಿಲ್ಲೆಯ ಆರ್ಕಾಟ್ ನಿವಾಸಿ. ಇವರು ಬಿ.ಟೆಕ್ ಪದವೀಧರ', ಸಮಾಜಮುಖಿ ಚಿಂತನೆಗಳಿಂದ ಪ್ರಭಾವಿತರಾದ ಇವರು ಹೋರಾಟ ಗಳನ್ನು ಗಮನಿಸುತ್ತಾ ಬೆಳೆದರು. 2010 ರಲ್ಲಿ ಪದವಿ ಮುಗಿಸಿದ ತಕ್ಷಣವೇ ಸಶಸ್ತ್ರ ಹೋರಾಟದ ಭಾಗವಾಗಿ ಅಂದಿನಿಂ ದಲೂ ಕೇರಳ ಕರ್ನಾಟಕಗಳಲ್ಲಿರುವ ದಳದ ಸದಸ್ಯರಾಗಿದ್ದರು. ಮಿತ ಭಾಷೆ ಆಗಿರುವ ವಸಂತ್ ತನ್ನ ಆದರ್ಶ ಬಿಟ್ಟು ಕೊಡದೆ ಹೋರಾಟದ ಮಾರ್ಗ ಬದಲಿಸಿ ಮುಖ್ಯವಾಹಿನಿಗೆ ಬಂದಿದ್ದಾರೆ.
ಎಂ.ಡಿ. ಜೀಶಾ
ಜೀಶಾ ಕೇರಳದ ವಯನಾಡ್ ಜಿಲ್ಲೆಯ ಮಕ್ಕಿಮಲದ ಆದಿವಾಸಿ ಮಹಿಳೆ. ಇವರು ತಂಡ ದಲ್ಲಿನ ಎಲ್ಲರಿಗಿಂ ತಲೂ ತುಂಬಾ ಚಿಕ್ಕವರು. ಇವರು ಎಂಟನೇ ತರಗತಿ ಯವರೆಗೂ ವಿದ್ಯಾ ಭ್ಯಾಸ ಮಾಡಿ ದ್ದಾರೆ. 2018ರಲ್ಲಿ ಕೇರಳದಲ್ಲಿ ಸಶಸ್ತ್ರ ಹೋರಾಟದ ಭಾಗವಾಗಿದ್ದರು. ತಮ್ಮ ಸಂಗಡಿಗರೊಂದಿಗೆ ಹಲವು ರಾಜ್ಯಗಳಲ್ಲಿ ಓಡಾಟ ನಡೆಸಿ ಬಳಿಕ 2023ರಲ್ಲಿ ತಂಡದ ಇತರೆ ಸದಸ್ಯರೊಂದಿಗೆ ಕೇರಳದಿಂದ ಕರ್ನಾಟಕಕ್ಕೆ ಬಂದವರು. ಇವರು ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾರೆ.