ನೇಹಾ ಕೊಲೆಯ ಹಿಂದೆ ಒಬ್ಬನೇ ವ್ಯಕ್ತಿಯಿಲ್ಲ. ಹಲವಾರು ವ್ಯಕ್ತಿಗಳ ಕೈವಾಡವಿದೆ. ಪ್ರಕರಣದ ಚಾರ್ಜ್ ಶೀಟ್‌ನಲ್ಲಿ ಒಬ್ಬನ ಹೆಸರಿರೋದು ಅನುಮಾನಕ್ಕೆಡೆ ಮಾಡಿದೆ ಎಂದು ನೇಹಾ ತಂದೆ ನಿರಂಜನ ಹಿರೇಮಠ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿ (ಜು.10): ನೇಹಾ ಕೊಲೆಯ ಹಿಂದೆ ಒಬ್ಬನೇ ವ್ಯಕ್ತಿಯಿಲ್ಲ. ಹಲವಾರು ವ್ಯಕ್ತಿಗಳ ಕೈವಾಡವಿದೆ. ಪ್ರಕರಣದ ಚಾರ್ಜ್ ಶೀಟ್‌ನಲ್ಲಿ ಒಬ್ಬನ ಹೆಸರಿರೋದು ಅನುಮಾನಕ್ಕೆಡೆ ಮಾಡಿದೆ ಎಂದು ನೇಹಾ ತಂದೆ ನಿರಂಜನ ಹಿರೇಮಠ ಆರೋಪ ಮಾಡಿದ್ದಾರೆ. ಸಿಐಡಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ದೋಷಾರೋಪ ಪಟ್ಟಿಯಲ್ಲಿ ಒಬ್ಬನದ್ದೇ ಹೆಸರಿರೋದು ಸಮಾಧಾನ ತಂದಿಲ್ಲ. ಕೊಲೆಯ ಹಿಂದೆ ಬೇರೆಯವರ ಷಡ್ಯಂತ್ರವೂ ಇದೆ . ಆದರೆ ಅದನ್ನು ಮರೆಮಾಚಲಾಗಿದೆ ಆರೋಪಿ ಫಯಾಜ್‌ಗೆ ವಸತಿಯಿಂದ ಹಿಡಿದು ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಒಬ್ಬನೇ ವ್ಯಕ್ತಿ ಕೊಲೆ ಮಾಡಲು ಸಾಧ್ಯವಿಲ್ಲ ಎಂದರು.
ಅನೇಕರು ಕೊಲೆಯಲ್ಲಿ ಶಾಮೀಲಾಗಿದ್ದಾರೆ . ಕಾಣದ ಕೈಗಳು ಕೆಲಸ ಮಾಡಿವೆ . ಸಿಐಡಿದವರು ಇದನ್ನು ಹೊರಗೆ ತರಬೇಕಾಗಿತ್ತು . ಮದುವೆ ನಿರಾಕರಣೆ ವಿಚಾರದಲ್ಲಿಯೂ ಸುಳ್ಳು ಹೇಳಲಾಗ್ತಿದೆ. ಆರೋಪಿ ಸರಳವಾಗಿ ಜಾಮೀನಿನ ಮೇಲೆ ಹೊರಬರಬೇಕೆಂಬುದು ಕೆಲವರ ಲೆಕ್ಕಾಚಾರ. ಸರ್ಕಾರವನ್ನೂ ದಿಕ್ಕು ತಪ್ಪಿಸಲಾಗ್ತಿದೆ. ಇದರಿಂದಾಗಿ ನನಗೆ, ನಮ್ಮ ಮಗಳ ಸಾವಿಗೆ ನ್ಯಾಯ ಸಿಗಲ್ಲ.ತನಿಖೆಯ ವೇಳೆಯೇ ದಿಕ್ಕು ತಪ್ಪಿಸೋ ಕೆಲಸ ನಡೆದಿದೆ. ನ್ಯಾಯಾಂಗದ ಮೇಲೆ ನನಗೆ ನಂಬಿಕೆ ಇದೆ. ನನಗೆ ಚಾರ್ಜ್ ಶೀಟ್ ಪ್ರತಿ ಸಿಕ್ಕ ಮೇಲೆ ಹೆಚ್ಚಿನ ಮಾಹಿತಿ ಕೊಡ್ತೇನೆ ಎಂದು ನೇಹಾ ತಂದೆ ನಿರಂಜನ ಹಿರೇಮಠ ತಿಳಿಸಿದರು.
undefined
ಪದೇ ಪದೇ ತೊಂದರೆ ಕೊಟ್ಟರೆ ವಿಷ ಕುಡಿಯುತ್ತೇನೆ: ‘ನಮ್ಮ ಸಮಾಜದ ವ್ಯಕ್ತಿಯ ಕೊಲೆಯಾಗಿದೆ. ಅವನನ್ನು ನೋಡಲು ಹೋಗುತ್ತಿದ್ದರೆ ಪೊಲೀಸರು ತಡೆಯುತ್ತಿದ್ದಾರೆ. ಪದೇ ಪದೇ ಈ ರೀತಿಯ ತೊಂದರೆ ಕೊಡುತ್ತಿದ್ದರೆ ನಾನು ವಿಷ ಸೇವಿಸುತ್ತೇನೆ’ ಎಂದು ಮೃತ ನೇಹಾ ಹಿರೇಮಠ ತಂದೆ, ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ ಘಟನೆ ಭಾನುವಾರ ನಡೆಯಿತು. ಇಲ್ಲಿನ ಲೋಹಿಯಾ ನಗರದಲ್ಲಿ ಶನಿವಾರ ರಾತ್ರಿ ಕೊಲೆಗೀಡಾಗಿದ್ದ ಆಟೋ ಚಾಲಕ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಪುತ್ರ ಆಕಾಶ ಮಠಪತಿ ಅವರ ಮರಣೋತ್ತರ ಪರೀಕ್ಷೆ ಭಾನುವಾರ ನಡೆಯಿತು. ಈ ವೇಳೆ ಕಿಮ್ಸ್ ಶವಾಗಾರಕ್ಕೆ ನಿರಂಜನ ಹಿರೇಮಠ ತೆರಳುತ್ತಿದ್ದ ವೇಳೆ ಅವರನ್ನು ಪೊಲೀಸರು ತಡೆದು, ನೀವು ಶವಾಗಾರಕ್ಕೆ ಹೋಗಬೇಡಿ ಎಂದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಆಡಳಿತದ ಮೇಲೆ ಹಿಡಿತ ತಪ್ಪಿದೆ: ಸಂಸದ ಗೋವಿಂದ ಕಾರಜೋಳ
ಈ ವೇಳೆ, ‘ನಾನು ಹೋಗುತ್ತೇನೆ’ ಎಂದು ನಿರಂಜನ, ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ನನ್ನ ಮೇಲೆ ಒತ್ತಡ ಹಾಕಿ ಪೊಲೀಸರು ಬಂಧನ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ, ಸುದ್ದಿಗಾರರ ಜೊತೆ ಮಾತನಾಡಿದ ನಿರಂಜನ್, ನಮ್ಮದೇ ಸಮಾಜದ ವ್ಯಕ್ತಿಯ ಕೊಲೆಯಾಗಿದೆ. ಈ ಕುರಿತು ನ್ಯಾಯ ಕೇಳುವುದು ತಪ್ಪಾ? ಈಗಾಗಲೇ ನನ್ನ ಮಗಳ ಕೊಲೆಯಾಗಿದೆ. ಇನ್ನು ಕೆಲವು ದಿನಗಳಲ್ಲಿ ನನ್ನ ಕೊಲೆಯಾದರೂ ಅಚ್ಚರಿಯಿಲ್ಲ. ಪೊಲೀಸರು ಕಾನೂನು ಕಾಪಾಡುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರ ಈ ಕಾರ್ಯವೈಖರಿ ಕುರಿತು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.