
ಮಡಿಕೇರಿ(ಜು.10) ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಬಹುತೇಕ ಎಲ್ಲಾ ರಸ್ತೆಗಳಲ್ಲಿ ಸೈನ್ ಬೋರ್ಡ್ ಹಾಕಲಾಗುತ್ತದೆ. ತಿರುವು, ಇಳಿಜಾರು, ಕಡಿದಾದ ರಸ್ತೆ ಸೇರಿದಂತೆ ವಾಹನ ಸವಾರರಿಗೆ ಸ್ಪಷ್ಟ ಮಾಹಿತಿ ನೀಡುವ ಮೂಲಕ ಅವಘಡಗಳನ್ನು ತಪ್ಪಿಸಲಾಗುತ್ತದೆ. ಈ ಪೈಕಿ ಅವಸರವೇ ಅಪಘಾತಕ್ಕೆ ಕಾರಣ, ನಿಧಾನವಾಗಿ ಚಲಿಸಿ ಮುಂದೆ ತಿರುವು ಇದೆ, ರಸ್ತೆ ಕಿರಿದಾಗುತ್ತಿದೆ ಸೇರಿದಂತೆ ಹಲವು ಸೂಚನಾ ಫಲಕ ನೀವು ನೋಡಿರುತ್ತೀರಿ. ಆದರೆ ಕೊಡಗಿನಲ್ಲಿ ತುರ್ತು ಅಪಘಾತ ಮಾಡಿ ಅನ್ನೋ ಸೂಚನಾ ಫಲಕವನ್ನು ಅಳವಡಿಸಲಾಗಿತ್ತು. ಈ ಸೂಚನಾ ಫಲಕ ಭಾರಿ ವೈರಲ್ ಆಗಿ ಮುಖಭಂಗ ಅನುಭವಿಸುತ್ತಿದ್ದಂತೆ ಇಲಾಖೆ ಬದಲಾಯಿಸಿ ಹೊಸ ಫಲಕ ಅಳವಡಿಸಿದೆ.
ಇಂಗ್ಲೀಷ್‌ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲೀಷ್‌ಗೆ ಭಾಷಾಂತರಿಸುವ ವೇಳೆ ನಡೆದಿರುವ ಹಲವು ಎಡವಟ್ಟುಗಳ ಸೂಚನಾ ಫಲಕ, ಹೆಸರು, ವಿಳಾಸಗಳು ನಗೆಪಾಟಲಿಗೀಡಾಗಿದೆ. ಈ ಪೈಕಿ ಕೊಡಗಿನಲ್ಲಿ ಅಳವಡಿಸಿದ್ದ ರಸ್ತೆ ಸೂಚನಾ ಫಲಕ ಭಾರಿ ವೈರಲ್ ಆಗಿತ್ತು. ಮಡಿಕೇರಿ ಕೊಡಗು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಬಳಿ ಈ ಸೂಚನಾ ಫಲಕ ಅಳವಡಿಸಲಾಗಿತ್ತು.
ಜುಲೈ ತಿಂಗಳ ಆರಂಭದಲ್ಲೇ ತುಂಬಿ ಹರಿದ ಮಿನಿ ನಯಾಗರ ಖ್ಯಾತಿಯ ಚಿಕ್ಲಿಹೊಳೆ ಜಲಾಶಯ
ಕರ್ನಾಟಕ ಸರ್ಕಾರ ರಾಷ್ಟ್ರೀಯ ಹೆದ್ದಾರಿ ವಿಭಾಗ ಮಂಗಳೂರು ಇಲಾಖೆಯ ಈ ಸೂಚನಾ ಫಲಕದಲ್ಲಿ ಕನ್ನಡದಲ್ಲಿ ಅವಸರವೇ ಅಪಘಾತಕ್ಕೆ ಕಾರಣ ಎಂದು ಬರೆಯಲಾಗಿದೆ. ಆದರೆ ಇಂಗ್ಲೀಷ್‌ಗೆ ಭಾಷಾಂತರಿಸುವ ವೇಳೆ ಅರ್ಜೆಂಟ್ ಮೇಕ್ ಆ್ಯನ್ ಆಕ್ಸಿಡೆಂಟ್( ತುರ್ತು ಅಪಘಾತ ಮಾಡಿ) ಎಂದು ಬರೆಯಲಾಗಿದೆ.
ಈ ಕುರಿತು ಸ್ಥಳೀಯ ಮಾಧ್ಯಮಗಳು, ಕೊಡಗು ಜಿಲ್ಲೆಯ ಸೋಶಿಯಲ್ ಮೀಡಿಯಾ ಖಾತೆಗಳು ಸೂಚನಾ ಫಲಕದ ಫೋಟೋ ಹಂಚಿಕೊಂಡಿತ್ತು. ಈ ಫೋಟೋ ಭಾರಿ ವೈರಲ್ ಆಗಿತ್ತು. ಹಲವರು ಈ ಫೋಟೋಗೆ ಕಮೆಂಟ್ ಮಾಡಿದ್ದರು. ಇದಕ್ಕಿಂತ ಗೂಗಲ್ ಟ್ರಾನ್ಸಲೇಶನ್ ಮಾಡಬಹುದಿತ್ತು ಎಂದು ಸೂಚಿಸಿದ್ದರು. ಈ ರೀತಿ ಭಾಷಾಂತರ ಮಾಡಿ ಆಭಾಸ ಮಾಡಿ ನಗೆಪಾಟಲೀಗಾಡುವುದಕ್ಕಿಂತ ಕನ್ನಡದಲ್ಲೇ ಬರೆದರೆ ಸಾಕು ಎಂದು ಹಲವರು ಸಲಹೆ ನೀಡಿದ್ದರು.
'ಸೆಕ್ಸ್ ಮಸಾಜ್‌ಗೆ ಕುಶಾಲನಗರದ ಹುಡುಗಿ ಬೇಕಾ?' ಎಂದು ವಂಚಿಸುತ್ತಿದ್ದ ಹಾಸನ ಜಿಲ್ಲೆಯ ಖತರ್ನಾಕ್ ಗ್ಯಾಂಗ್ ಅಂದರ್!
ಈ ಫೋಟೋ ಭಾರಿ ವೈರಲ್ ಆಗುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಳಿಕ ಈ ಬೋರ್ಡ್ ಬದಲಾಯಿಸಿದ್ದಾರೆ. ಇದೀಗ ಸ್ಪೀಡ್ ಥ್ರಿಲ್ಸ್ ಬಟ್ ಕಿಲ್ಸ್ ಎಂದು ಬರೆದಿರುವ ಬೋರ್ಡ್ ಹಾಕಲಾಗಿದೆ. ಅಧಿಕಾರಿಗಳ ಎಡವಟ್ಟಿನಿಂದ ಜಿಲ್ಲೆಯ ಜನ ತೀವ್ರ ಮುಜುಗರ ಅನುಭವಿಸುವಂತಾಗಿತ್ತು. ಕೊನೆಗೂ ಎಚ್ಚೆತ್ತ ಇಲಾಖೆ ಸರಿಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ