ಕರ್ನಾಟಕ ಮತ್ತೆ ಲಾಕ್‌ಡೌನ್ ಆಗುತ್ತಾ? ಬಗ್ಗೆ ಸಚಿವ ಅಶೋಕ್ ಹೇಳಿದ್ದು ಹೀಗೆ!

By Suvarna News  |  First Published Apr 18, 2021, 3:41 PM IST

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ಎನ್ನುವ ಸುದ್ದಿಗೆ ಸಚಿವ ಅಶೋಕ್ ಸ್ಪಷ್ಟನೆ ಕೊಟ್ಟಿದ್ದಾರೆ.


ಬೆಂಗಳೂರು, (ಏ.18): ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ವ್ಯಾಪಕವಾಗಿ ಹರಡಿದೆ. ಪ್ರತಿದಿನದ ಸೋಂಕು ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ವರದಿಯಾಗುತ್ತಿವೆ. 

ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳು (ಐಸಿಯು) ಭರ್ತಿಯಾಗಿದ್ದು ರೋಗಿಗಳು ಬೆಡ್​ ಸಿಗದೆ ಪರದಾಡುತ್ತಿದ್ದಾರೆ. ಮತ್ತೊಂದೆಡೆ ಚಿತಾಗಾರಗಳಲ್ಲಿ ಶವಗಳನ್ನು ಹೊತ್ತು ಆಂಬುಲೆನ್ಸ್​ಗಳು ಪಾಳಿಯಲ್ಲಿ ನಿಂತಿವೆ. 

Tap to resize

Latest Videos

undefined

ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ಮಾಡಲಾಗುತ್ತಾ ಎನ್ನುವ ಚರ್ಚೆಗಳು ನಡೆದಿವೆ. ಇನ್ನು ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಕೊರೋನಾ ಕಾಟ: ಲಾಕ್‌ಡೌನ್‌ನಿಂದ ಪ್ರಯೋಜನವಿಲ್ಲ ಎಂದ ಬಿಜೆಪಿ ಸಂಸದ

 ಬೆಂಗಳೂರು ನಗರದಲ್ಲಿ ಟಫ್‌ ರೂಲ್ಸ್ ಜಾರಿ ಮಾಡಲೇಬೇಕು. ಆದ್ರೆ ಲಾಕ್​ಡೌನ್ ಮಾಡೋದಿಲ್ಲ ಅಂತ ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.

ಕೊರೋನಾ ಸೋಂಕು ಹೆಚ್ಚಳವಾಗ್ತಿರೋ ಹಿನ್ನೆಲೆ ಇಂದು (ಭಾನವಾರ) ಅಶೋಕ್, ಬಿಬಿಎಂಪಿ ವ್ಯಾಪ್ತಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬೆಂಗಳೂರಿನ ಕುಮಾರಕೃಪಾದಲ್ಲಿ ನಡೆದ ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ‌, ಆರೋಗ್ಯ ಇಲಾಖೆ ಪ್ರಧಾನ‌ ಕಾರ್ಯದರ್ಶಿ ಜಾವೇದ್ ಆಕ್ತರ್ ಭಾಗಿಯಾಗಿದ್ರು.

ಬಳಿಕ ಮಾತನಾಡಿದ ಅವರು, ದಿನನಿತ್ಯದ ಜೀವನಕ್ಕೆ ಯಾವುದೇ ತೊಂದರೆಯಾಗದೇ ವ್ಯವಸ್ಥೆಯನ್ನ ನಾವು ನಿರ್ಮಾಣ ಮಾಡಬೇಕು. ಕೆಲವೊಂದು ಕ್ಷೇತ್ರದಲ್ಲಿ ಎಸಿಗಳಲ್ಲೇ ಕಾರ್ಯನಿರ್ವಹಿಸುವವರಿಗೆ ಕಠಿಣ ಕ್ರಮ ಆಗಬೇಕಿದೆ ಎಂದರು.

click me!