ಮುಷ್ಕರ ನಡುವೆ ಮತ್ತೆ 7000 ಬಸ್‌ ಸಂಚಾರ

Kannadaprabha News   | Asianet News
Published : Apr 18, 2021, 09:44 AM ISTUpdated : Apr 18, 2021, 10:20 AM IST
ಮುಷ್ಕರ ನಡುವೆ ಮತ್ತೆ 7000 ಬಸ್‌ ಸಂಚಾರ

ಸಾರಾಂಶ

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರಿದಿದೆ. ಇದರ ಮಧ್ಯೆಯೂ 7000 ಬಸ್‌ಗಳು ಸಂಚಾರ ಆರಮಭಿಸಿವೆ. ವಿವಿಧ ಬೇಡಿಕೆ ಈಡೇರಿಕೆಗಾಗಿ ಬಸ್‌ ಮುಷ್ಕರ ಆರಂಭವಾಗಿ 10 ದಿನಗಳು ಕಳೆದಿದ್ದು ಕೆಲ ಬಸ್‌ಗಳು ಸಂಚಾರ ನಡೆಸುತ್ತಿವೆ. 

 ಬೆಂಗಳೂರು (ಏ.18):  ಕಳೆದ 11 ದಿನಗಳಿಂದ ಮುಷ್ಕರ ನಿರತರಾಗಿರುವ ಸಾರಿಗೆ ನೌಕರರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿರುವ ಪರಿಣಾಮ ದಿನದಿಂದ ದಿನಕ್ಕೆ ಸೇವೆಗೆ ಹಾಜರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶನಿವಾರ ರಾತ್ರಿ 8 ಗಂಟೆ ವೇಳೆಗೆ ಎಲ್ಲ ನಿಗಮಗಳು ಸೇರಿ 6,968 ಬಸ್‌ಗಳು ಕಾರ್ಯಾಚರಣೆಗೊಂಡಿವೆ.

ಶುಕ್ರವಾರ 5500 ಬಸ್‌ ಸಂಚರಿಸಿದ್ದವು. ಇದರ ಸಂಖ್ಯೆ ಒಂದೇ ದಿನದಲ್ಲಿ 1500ರಷ್ಟುಹೆಚ್ಚಿದೆ.

ಈವರೆಗೂ ತರಬೇತಿ ನಿರತ ಮತ್ತು ಪ್ರೊಬೆಷನರಿ ಸೇವೆಯಲ್ಲಿದ್ದ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗುತ್ತಿತ್ತು. ಇದೀಗ ಖಾಯಂ ನೌಕರರನ್ನು ವಜಾಗೊಳಿಸುವುದಾಗಿ ಸಾರಿಗೆ ಇಲಾಖೆಯ ಎಲ್ಲ ನಿಗಮಗಳು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದವು. ಇದರಿಂದ ಉದ್ಯೋಗ ಕಳೆದುಕೊಳ್ಳು ಭೀತಿಗೊಳಗಾಗಿದ್ದ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಸಾರಿಗೆ ಮುಷ್ಕರ ಬೆಂಬಲಿಸಲು ಈಗ ಶಾಸಕರಿಗೆ ಮನವಿ ..

 ಶನಿವಾರ ರಾತ್ರಿ ವೇಳೆಗೆ ಕೆಎಸ್‌ಆರ್‌ಟಿಸಿ 3,383, ಎನ್‌ಇಕೆಎಸ್‌ಆರ್‌ಟಿಸಿ 1349, ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ 1,181 ಮತ್ತು ಬಿಎಂಟಿಸಿಯ 1,155 ಬಸ್‌ಗಳು ಸೇರಿದಂತೆ 6,968 ಬಸ್‌ಗಳು ಸಂಚರಿಸಿವೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶುಕ್ರವಾರ ನಾಲ್ಕು ನಿಗಮಗಳಿಂದ ಒಟ್ಟು 5,504 ಬಸ್‌ಗಳು ಸಂಚರಿಸಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್