ದಸರಾ ವೇಳೆ ಕಳ್ಳತನ: ಐವರು ನೇಪಾಳಿಗರ ಸೆರೆ

Published : Oct 31, 2019, 08:44 AM IST
ದಸರಾ ವೇಳೆ ಕಳ್ಳತನ: ಐವರು ನೇಪಾಳಿಗರ ಸೆರೆ

ಸಾರಾಂಶ

ದಸರಾ ಹಬ್ಬದ ವೇಳೆ ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ದೋಚಿದ್ದ ನೇಪಾಳ ಮೂಲದ ಐವರು ಕಳ್ಳರನ್ನು ಮಾರತ್‌ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ನೇಪಾಳದ ಮಂಗಳ್‌ ಸಿಂಗ್‌, ಮನೋಜ್‌ ಬಹದ್ದೂರ್‌, ಸುದೇವ್‌ ದಾಮಿ, ವಿಶಾಲ್‌ ಮತ್ತು ವಿನೋದ್‌ ಕುಮಾರ್‌ ಬಂಧಿತ ಆರೋಪಿಗಳು. ಇವರಿಂದ .4.5 ಲಕ್ಷ ಮೌಲ್ಯದ 7.5 ಕೆ.ಜಿ ಬೆಳ್ಳಿ, ಒಂದು ಸೋನಿ ಟಿವಿ ಮತ್ತು ಒಂದು ಲ್ಯಾಪ್‌ಟಾಪ್‌ ವಶಪಡಿಸಿಕೊಳ್ಳಲಾಗಿದೆ. 

ಬೆಂಗಳೂರು(ಅ.31): ದಸರಾ ಹಬ್ಬದ ವೇಳೆ ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ದೋಚಿದ್ದ ನೇಪಾಳ ಮೂಲದ ಐವರು ಕಳ್ಳರನ್ನು ಮಾರತ್‌ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೇಪಾಳದ ಮಂಗಳ್‌ ಸಿಂಗ್‌, ಮನೋಜ್‌ ಬಹದ್ದೂರ್‌, ಸುದೇವ್‌ ದಾಮಿ, ವಿಶಾಲ್‌ ಮತ್ತು ವಿನೋದ್‌ ಕುಮಾರ್‌ ಬಂಧಿತ ಆರೋಪಿಗಳು. ಇವರಿಂದ 4.5 ಲಕ್ಷ ಮೌಲ್ಯದ 7.5 ಕೆ.ಜಿ ಬೆಳ್ಳಿ, ಒಂದು ಸೋನಿ ಟಿವಿ ಮತ್ತು ಒಂದು ಲ್ಯಾಪ್‌ಟಾಪ್‌ ವಶಪಡಿಸಿಕೊಳ್ಳಲಾಗಿದೆ. ಹನ್ನೆರಡು ವರ್ಷಗಳಿಂದ ಈ ನೇಪಾಳಿ ಗ್ಯಾಂಗ್‌ ನಗರದಲ್ಲಿ ಮನೆಗಳ್ಳತನ ಕೃತ್ಯದಲ್ಲಿ ತೊಡಗಿದ್ದು, ಅವರ ವಿರುದ್ಧ ಸಂಪಂಗಿರಾಮನಗರ, ಜೆ.ಬಿ.ನಗರ, ಮಲ್ಲೇಶ್ವರ, ಚಂದಾಪುರ ಸೇರಿದಂತೆ ಹಲವೆಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ದಿನಗಳ ಹಿಂದೆ ಸೆಕ್ಯೂರಿಟಿ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಆರೋಪಿಗಳು, ಹಣದಾಸೆಗೆ ಮನೆಗಳ್ಳತನ ಮಾಡುತ್ತಿದ್ದರು. ಹಗಲಿನಲ್ಲಿ ಮನೆಯ ಮುಂದಿನ ದೀಪ ಉರಿಯುವುದು, ಗೇಟ್‌ ಹಾಕಿರುವುದು, ಮನೆ ಮುಂದೆ ಪತ್ರಿಕೆ, ಹಾಲಿನ ಪ್ಯಾಕೆಟ್‌ ಬಿದ್ದಿರುವುದು, ರಂಗೋಲಿ ಹಾಕದಿರುವುದನ್ನು ನೋಡಿ ಯಾರೂ ಇಲ್ಲವೆಂದು ಖಚಿತಪಡಿಸಿಕೊಳ್ಳುತ್ತಿದ್ದರು. ಬಳಿಕ ರಾತ್ರಿ ವೇಳೆ ಬಂದು ಕಳ್ಳತನ ಮಾಡುತ್ತಿದ್ದರು.

ದಸರಾ ವೇಳೆ ಕಳ್ಳತನ: ಐವರು ನೇಪಾಳಿಗರ ಸೆರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!