ದಾವಣಗೆರೆಯ ಗುತ್ತಿಗೆದಾರರಿಗೆ ಸೇರಿದ 1.5 ಕೋಟಿ ಹಣವನ್ನು ಪೊಲೀಸರ ಸೋಗಿನಲ್ಲಿ ದೋಚಿದ್ದ ಹನ್ನೊಂದು ಮಂದಿ ಸುಲಿಗೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 11 ಮಂದಿ ಬಂಧಿತರಾಗಿದ್ದು, ಆರೋಪಿಗಳಿಂದ 30 ಲಕ್ಷ ಜಪ್ತಿ ಮಾಡಲಾಗಿದೆ. ದಾವಣಗೆರೆಯ ವೆಂಕಟರೆಡ್ಡಿ ಎಂಬುವರ ಬಳಿ ಆರೋಪಿಗಳು ದರೋಡೆ ಮಾಡಿದ್ದರು.
ಬೆಂಗಳೂರು(ಅ.31): ಕೆಲ ದಿನಗಳ ಹಿಂದೆ ದಾವಣಗೆರೆಯ ಗುತ್ತಿಗೆದಾರರಿಗೆ ಸೇರಿದ 1.5 ಕೋಟಿ ಹಣವನ್ನು ಪೊಲೀಸರ ಸೋಗಿನಲ್ಲಿ ದೋಚಿದ್ದ ಹನ್ನೊಂದು ಮಂದಿ ಸುಲಿಗೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ಗಣೇಶ್, ಹರಿಹರದ ದಾದಾಫಿರ್, ಮಜೀದ್ ಪಾಷಾ, ಅಬ್ದುಲ್ ಖಲೀಲ್, ಆರ್.ಟಿ ನಗರದ ಮತೀನ್ ಪಾಷಾ, ವಾಜಿದ್ ಪಾಷಾ, ಅನ್ಸರ್ ಬಾಷಾ ಮೊಹಮದ್ ಹಾಗೂ ರಫೀಕ್ ಸೇರಿ 11 ಮಂದಿ ಬಂಧಿತರಾಗಿದ್ದು, ಆರೋಪಿಗಳಿಂದ 30 ಲಕ್ಷ ಜಪ್ತಿ ಮಾಡಲಾಗಿದೆ. ದಾವಣಗೆರೆಯ ವೆಂಕಟರೆಡ್ಡಿ ಎಂಬುವರ ಬಳಿ ಆರೋಪಿಗಳು ದರೋಡೆ ಮಾಡಿದ್ದರು.
‘ಕಾವೇರಿ’ ವೆಬ್‌ಸೈಟ್ ಹಗರಣ: ಸಿಸಿಬಿಯಿಂದ ಕಂಪ್ಯೂಟರ್ ವಶ
ಗುತ್ತಿಗೆ ವ್ಯವಹಾರ ಸಂಬಂಧ ಬೆಂಗಳೂರಿನಲ್ಲಿರುವ ವ್ಯಕ್ತಿಯೊಬ್ಬರಿಗೆ ಅವರು ಒಂದೂವರೆ ಕೋಟಿ ಹಣ ಕೊಡುವುದಾಗಿ ಹೇಳಿದ್ದರು. ಅದರಂತೆ ಸೆ.26ರಂದು ಕಿಶೋರ್ ಎಂಬಾತನ ಮೂಲಕ ಬೆಂಗಳೂರಿನ ಸ್ನೇಹಿತನಿಗೆ ಹಣ ತಲುಪಿಸಲು ನಿರ್ಧರಿಸಿದ್ದರು. ಆದರೆ, ಈ ವಿಷಯ ತಿಳಿದ ರೆಡ್ಡಿ ಕಾರು ಚಾಲಕ ಆರೋಪಿ ಗಣೇಶ್, ಮಾಲೀಕರ ಹಣ ದೋಚಲು ಯೋಜಿಸಿದ್ದ. ಈ ಕೃತ್ಯಕ್ಕೆ ಆತನಿಗೆ ಸ್ನೇಹಿತರು ಸಾಥ್ ಕೊಟ್ಟಿದ್ದಾರೆ.
ತನ್ನ ಗೆಳೆಯ ದಾದಾಪೀರ್‌ಗೆ ಮಾಹಿತಿ ನೀಡಿ ಹಣ ಲಪಟಾಯಿಸಲು ಗಣೇಶ್ ಸಂಚು ರೂಪಿಸಿದ್ದಾನೆ. ಸೆ.26ರಂದು ಕಿಶೋರ್ ದಾವಣೆಗೆರೆಯಿಂದ .1.50 ಕೋಟಿ ಬೆಂಗಳೂರಿಗೆ ಕಾರಿನಲ್ಲಿ ತೆಗೆದುಕೊಂಡು ಬರುತ್ತಿದ್ದರು. ಆಗ ಗೊರೆಗುಂಟೆಪಾಳ್ಯ ಜಂಕ್ಷನ್ ಬಳಿ ಪೊಲೀಸರ ಸೋಗಿನಲ್ಲಿ ಸಹಚರರ ಜತೆ ಬಂದ ದಾದಾಫಿರ್ ಕಿಶೋರ್ ಕಾರನ್ನು ಅಡ್ಡಗಟ್ಟಿಹಣ ದೋಚಿ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸುವರ್ಣನ್ಯೂಸ್ ಇಂಪ್ಯಾಕ್ಟ್: ಬಂಧನದ ಭೀತಿಯಲ್ಲಿ 9 ಸಬ್ ರಿಜಿಸ್ಟ್ರಾರ್!