ಕಾರವಾರ ಬಳಿ ಚತುಷ್ಪಥ ಸುರಂಗ ಮಾರ್ಗವನ್ನು ಸೆ. 29ರಂದು ತೆರೆದು ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಸವಾಲು ಹಾಕಿರುವುದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸುರಂಗ ಕಲಹ ಮುಂದುವರಿದಂತಾಗಿದೆ.
ಕಾರವಾರ (ಸೆ.23): ಕಾರವಾರ ಬಳಿ ಚತುಷ್ಪಥ ಸುರಂಗ ಮಾರ್ಗವನ್ನು ಸೆ. 29ರಂದು ತೆರೆದು ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಸವಾಲು ಹಾಕಿರುವುದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸುರಂಗ ಕಲಹ ಮುಂದುವರಿದಂತಾಗಿದೆ.
ಸುರಂಗ ಮಾರ್ಗವನ್ನು ಬಂದ್ ಮಾಡಿರುವುದರಿಂದ ಜನತೆಗೆ ತೊಂದರೆಯಾಗುತ್ತಿದೆ ಎಂದು ಹೇಳಿರುವ ವಿಧಾನ ಪರಿಷತ್ ಸದಸ್ಯ ಸೆ. 29ರಂದು ಸುರಂಗ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಹೇಳಿದ್ದಾರೆ.
undefined
ಈ ಹಿಂದೆ ಒಂದು ಸುರಂಗ ಮಾರ್ಗವನ್ನು ಸಂಸದ ಅನಂತಕುಮಾರ ಹೆಗಡೆ ಲೋಕಾರ್ಪಣೆಗೊಳಿಸಿದರೆ, ಇನ್ನೊಂದು ಸುರಂಗ ಮಾರ್ಗವನ್ನು ಶಾಸಕರಾಗಿ ಆಯ್ಕೆಯಾದ ನಂತರ ಸತೀಶ ಸೈಲ್ ಲೋಕಾರ್ಪಣೆಗೊಳಿಸಿದ್ದರು. ಅದಾದ ತಿಂಗಳಲ್ಲೆ ಸುರಂಗ ಮಾರ್ಗಕ್ಕೆ ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲ ಎಂದು ಸೈಲ್, ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೇರಿ ಸುರಂಗ ಮಾರ್ಗದಲ್ಲಿ ಸಂಚಾರವನ್ನು ತಡೆಹಿಡಿದಿದ್ದರು.
ಉತ್ತರಕನ್ನಡ: ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ, ಓರ್ವನ ಬಂಧನ
ಸುರಂಗ ಮಾರ್ಗ ಬಂದ್ ಮಾಡಿದ್ದರಿಂದ ಈಗ ಜನತೆಗೆ 4 ಕಿಮೀ ಹೆಚ್ಚುವರಿಯಾಗಿ ಸಂಚಾರ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ಕೆರಳಿರುವ ಉಳ್ವೇಕರ್, ಏನೇ ಆಗಲಿ ಸುರಂಗ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಹೇಳಿದ್ದಾರೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕಲಹಕ್ಕೆ ಕಾರಣವಾಗಿದೆ. ಈ ನಡುವೆ ಸಂಸದ ಅನಂತಕುಮಾರ್ ಹೆಗಡೆ ತಟಸ್ಥವಾಗಿದ್ದಾರೆ. ಮುಂದೇನಾಗಲಿದೆ ಎಂಬ ಕುತೂಹಲ ಜನರಲ್ಲಿ ಉಂಟಾಗಿದೆ.
ಉತ್ತರಕನ್ನಡ: ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಮಹಾರುದ್ರ ಯಾಗ..!