ಕಾವೇರಿ ಹೋರಾಟ: ಮಂಗಳವಾರ ಬೆಂಗಳೂರು ಬಂದ್: ಶಾಲೆ ಕಾಲೇಜುಗಳಿಗೆ ರಜೆ

Published : Sep 23, 2023, 01:24 PM ISTUpdated : Sep 24, 2023, 10:58 AM IST
ಕಾವೇರಿ ಹೋರಾಟ: ಮಂಗಳವಾರ ಬೆಂಗಳೂರು ಬಂದ್: ಶಾಲೆ ಕಾಲೇಜುಗಳಿಗೆ ರಜೆ

ಸಾರಾಂಶ

ತಮಿಳುನಾಡಿಗೆ ಕಾವೇರಿ ನದಿ ನೀರನ್ನು  ಹರಿಸುವುದನ್ನು ಖಂಡಿಸಿ ಸೆ.26 ಕ್ಕೆ ಬೆಂಗಳೂರು ನಗರ ಬಂದ್‌ಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಕರೆ ನೀಡಿದ್ದಾರೆ.

ಬೆಂಗಳೂರು (ಸೆ.23): ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುವುದನ್ನು ಖಂಡಿಸಿ ಸೆ.26 ಕ್ಕೆ ಬೆಂಗಳೂರು ನಗರ ಬಂದ್‌ಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಕರೆ ನೀಡಿದ್ದಾರೆ. ಸೆ.26 ಕ್ಕೆ ಬೆಂಗಳೂರು ನಗರ ಬಂದ್‌ಗೆ ಕರೆ ನೀಡಲಾಗಿದ್ದು, ಎಲ್ಲ ಸಂಘ ಸಂಸ್ಥೆಗಳ ನಿರ್ಧಾರದ ಮೇರೆಗೆ ಘೋಷಣೆ ಮಾಡಲಾಗಿದೆ. ಎಲ್ಲ ತಾಲೂಕುಗಳಲ್ಲಿ ಬಂದ್ ಮಾಡುವ ಮೂಲಕ ಬೆಂಬಲಿಸಬೇಕು ಎಂದು ತಿಳಿಸಿದ್ದಾರೆ.

ಬೆಂಗಳೂರು ಮಾತ್ರನಾ? ರಾಜ್ಯ ಬಂದ್‌ಗೆ ಕರೆ‌ ಕೊಡ್ತಾರಾ?: ಸೆ.26 ಕ್ಕೆ ಟೌನ್ ಹಾಲ್‌ನಿಂದ ಮೈಸೂರು ಬ್ಯಾಂಕ್ ಸರ್ಕಲ್‌ವರೆಗೆ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರು ಶಾಲೆಗಳಿಗೆ ರಜೆ ಘೋಷಿಸುವಂತೆ ಮನವಿ ಮಾಡಲಾಗಿದೆ. ಜೊತೆಗೆ ಬೆಂಗಳೂರಿನ ಐಟಿ ಕಂಪನಿಗಳು ಸ್ವಯಂ ಪ್ರೇರಿತವಾಗಿ ಕೆಲಸಕ್ಕೆ ಗೈರಾಗಿ ಬೆಂಬಲ ನೀಡಬೇಕು. ಇಂದು ಸರ್ಕಾರ ತಮಿಳುನಾಡಿಗೆ ನೀರನ್ನು ಹರಿಸ್ತಿದ್ದಾರೆ. ಈ ಕೂಡಲೇ ನೀರನ್ನ ಹರಿಸುವ ಕೆಲಸವನ್ನು ನಿಲ್ಲಿಸಬೇಕು. ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಬೆಂಗಳೂರು ನಗರವನ್ನು ಕಾವೇರಿ ನೀರಿನ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಈಗಾಗಲೇ ಮಂಡ್ಯದಲ್ಲಿ ಬಂದ್ ಮಾಡಿದ್ದಾರೆ. ಮಂಗಳವಾರ ಬೆಂಗಳೂರು ಬಂದ್ ನಿಶ್ಚಿತ ಎಂದು ಶಾಂತಕುಮಾರ್‌ ಹೇಳಿದರು.

ಕಾವೇರಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಜನತಾ ದಂಗೆ ಖಚಿತ: ಮಾಜಿ ಸಿಎಂ ಬೊಮ್ಮಾಯಿ

ಬಂದ್‌ಗೆ ಬೆಂಬಲ ಸೂಚಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ: ಸಿನಿಮಾ ರಂಗದವರನ್ನ ಜನಸಾಮಾನ್ಯರು ಬೆಳೆಸಿದ್ದಾರೆ. ಸಿನಿಮಾ ನಟರು ಸ್ವಯಂ ಪ್ರೇರಿತವಾಗಿ ಬಂದ್‌ಗೆ ಬರಬೇಕು. ಸಭೆಗೆ ಬಾರದೆ ಇರುವವರನ್ನ ಭೇಟಿಯಾಗಿ ಮಾತನಾಡುತ್ತೇವೆ. ಇಡೀ ಚಿತ್ರೋದ್ಯಮ ಒಂದು ದಿನ ಚಟುವಟಿಕೆ ನಿಲ್ಲಿಸಿ ಬೆಂಬಲ ನೀಡಬೇಕು ಎಂದು ಶಾಂತಕುಮಾರ್‌ ಹೇಳಿದ್ದಾರೆ.

ಬ್ರಿಟಿಷರ‌ ಕಾಲದಿಂದಲೂ  ರಾಜಕ್ಕೆ ಅನ್ಯಾಯ ಆಗ್ತಿದೆ: ನಾನು ದರ್ಶನ್ ಪುಟ್ಟಣ್ಣಯ್ಯ ಸಿಎಂ ಭೇಟಿ ಮಾಡಿದ್ವಿ. ಕಾವೇರಿ ನೀರಿನ ಸಮಸ್ಯೆ ಬಗೆಗೆ ವಿವರಿಸಿ ನೀರು ಬಿಡೋದು ಸರಿಯಲ್ಲ ‌ಎಂದಿದ್ದೆವೆ. ನನಗೂ ನೀರಿನ ಸಮಸ್ಯೆ ಬಗೆ ಅರಿವಿದೆ. ಮುಂದೆ 26 ತಾರೀಖು ಮತ್ತೆ ವಿಚಾರಣೆ ಇದೆ. ಅಂದು ಸರ್ಕಾರದ ನೀರು ಬೀಡೋದಿಲ್ಲ ಎಂದು ಸಮರ್ಥವಾಗಿ ವಾದ ಮಂಡಿಸಲಿದ್ದೇವೆ ಎಂದು ಸಿಎಂ ಹೇಳಿದ್ದಾರೆ. ಬ್ರಿಟಿಷರ‌ ಕಾಲದಿಂದಲೂ  ರಾಜಕ್ಕೆ ಅನ್ಯಾಯ ಆಗ್ತಿದೆ ಎಂದು ಸಿಎಂ ಭೇಟಿ ಬಳಿಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಾಪುರ ನಾಗೇಂದ್ರ ತಿಳಿಸಿದ್ದಾರೆ. 

ನಮ್ಮ ಸಂಸದರಲ್ಲಿ ಒಗ್ಗಟ್ಟಿನ ಕೊರತೆಯಿದೆ. ತಮಿಳುನಾಡಿನ ಸಂದಸರು ಎಲ್ಲರೂ ಒಂದಾಗಿ‌ ಹೋರಾಡುತ್ತಾರೆ. ಸುಪ್ರೀಂ ಆದೇಶಕ್ಕೆ ಸರ್ಕಾರ ಹೆದರುತ್ತದೆ. ವಿಶೇಷ ಅಧಿವೇಶನ ‌ಕರೆದು ನಿರ್ಣಯ ತೆಗದುಕೊಳ್ಳಿ. ಆಗ ನ್ಯಾಯಾಂಗ ನಿಂದನೆಯಾಗಲ್ಲ. ಕೇಂದ್ರ ಸರ್ಕಾರ ದೊಡ್ಡಣ್ಣನ ಸ್ಥಾನ ತುಂಬಬೇಕು. ಸಂಕಷ್ಟ ಸೂತ್ರ ಸರಿಯಾಗಿಲ್ಲ. ಸ್ಪಷ್ಟವಾಗಿ ಸೂತ್ರ ಮಾಡಬೇಕು. ರೈತರ ಹಿತಾದೃಷ್ಠಿಯಿಂದ ನೀರು ಬಿಡಬಾರದು. ನಿನ್ನೆ ರೈತ ಸಂಘದ ಮುಖಂಡರು ಸಭೆ ಮಾಡಿದ್ದೇವೆ. 

ಕಾವೇರಿ ವಿಚಾರದಲ್ಲಿ ನಾನು ಅಧಿವೇಶನದಲ್ಲೇ ಕಣ್ಣೀರು ಹಾಕಿದ್ದೆ: ಎಚ್‌.ಡಿ.ದೇವೇಗೌಡ

26 ರಂದು ಮತ್ತೆ ವಿಚಾರಣೆಯಲ್ಲಿ ಸರ್ಕಾರ ಯಾವ ನಿರ್ಧಾರ ತಗೆದುಕೊಳ್ಳಲಿದೆ ಎಂದು ನೋಡಿಕೊಂಡು ಸೆ.29 ರಂದು ರಾಜ್ಯ ಮತ್ತು‌ ರಾಷ್ಟ್ರೀಯ ಹೆದ್ದಾರಿ ತಡೆಯುತ್ತೆವೆ. 15 ಸಾವಿರ ರೈತರೊಂದಿಗೆ ನಮ್ಮ ಜಾನುವಾರುಗಳನ್ನ ಕರೆದಿಕೊಂಡು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯನ್ನ ತಡೆಯುತ್ತೇವೆ ಎಂದರು. ಸಿನ್ಮಾ ನಟರು ಡೈಲಾಗ್ ಹೊಡೆಯೋದನ್ನ ಬಿಟ್ಟು ನಾಡು ನೆಲ ನುಡಿಗಾಗಿ ಹೋರಾಟ ಮಾಡಬೇಕು. ಕಾವೇರಿ ಹೋರಾಟದಲ್ಲಿ ಅವರೆಲ್ಲ ಭಾಗಿಯಾಗಬೇಕು. ಬೆಂಗಳೂರು ಜನ ಎಚ್ಚೆತ್ತುಕೊಳ್ಳಬೇಕು. ಐಟಿಬಿಟಿ ಉದ್ಯೋಗಿಗಳು,ಸಾಹಿತಿಗಳು, ಚಿತ್ರನಟರು ಸೇರಿ ಎಲ್ಲರೂ ಬೆಂಬಲಿಸಲು ಬಡಗಲಾಪುರ ನಾಗೇಂದ್ರ ಕರೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Shivamogga: ಲಿಂಗನಮಕ್ಕಿಯಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ; ಕರಗಿದ ಜಲರಾಶಿ, ರಾಜ್ಯಕ್ಕೆ ಎದುರಾಗಲಿದೆಯೇ ಪವರ್ ಕಟ್ ಭೀತಿ?
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ