ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ ಹಾಕಿಲ್ಲ ಎಂಬ ಕಾರಣಕ್ಕೆ ಪಡಿತರ ನೀಡಲು ನಿರಾಕರಿಸಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ನಗರದ ಶಂಕರ್ ಮಠ ಹತ್ತಿರವಿರುವ ಸರ್ಕಾರಿ ನೌಕರರ ಸಹಕಾರ ಸಂಘದಲ್ಲಿ ನಡೆದಿದೆ.
ತುಮಕೂರು (ಜೂ.25) : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ ಹಾಕಿಲ್ಲ ಎಂಬ ಕಾರಣಕ್ಕೆ ಪಡಿತರ ನೀಡಲು ನಿರಾಕರಿಸಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ನಗರದ ಶಂಕರ್ ಮಠ ಹತ್ತಿರವಿರುವ ಸರ್ಕಾರಿ ನೌಕರರ ಸಹಕಾರ ಸಂಘದಲ್ಲಿ ನಡೆದಿದೆ.
ಸ್ಥಳೀಯರಾದ ಆರ್‌ಡಿ ಬಾಬುಗೆ ಪಡಿತರ ನೀಡಲು ನಿರಾಕರಣೆ. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿದ್ದಾನೆಂಬ ಆರೋಪ. ನೀವು ಕಾಂಗ್ರೆಸ್‌ನವರು ನಿಮಗೆ ಪಡಿತರ ಇಲ್ಲ ಎನ್ನುತ್ತಿರುವ ಸೊಸೈಟಿ ಸಿಬ್ಬಂದಿ. ಮತ ನಮ್ಮ ಹಕ್ಕು. ಮತಕ್ಕೂ ಪಡಿತರ ವಿತರಣೆಗೆ ಏನು ಸಂಬಂಧ ಎಂದು ಪ್ರಶ್ನಿಸಿರುವ ಬಾಬು. ಆದರೆ ಡೊಂಟ್ ಕೇರ್ ಅಂತಿರೋ ಸೊಸೈಟಿ ಸಿಬ್ಬಂದಿ. ಇದರಿಂದ ಕೆಲಕಾಲ ಸೊಸೈಟಿ ಸಿಬ್ಬಂದಿ ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಹಿಂದಿನಿಂದಲೂ ಸೊಸೈಟಿ ವಿರುದ್ಧ ಹಲವು ದೂರುಗಳು ಕೇಳಿಬರುತ್ತಿವೆ. ಈಗಾಗಲೇ ಹಲವು ದೂರುಗಳಿದ್ದರೂ ಪದೇಪದೆ ಸೊಸೈಟಿ ಹೀಗೆ ಮಾಡುತ್ತಿದೆ. ಬಿಜೆಪಿ ಪಕ್ಷದ ಸೊಸೈಟಿಯಂತೆ ವರ್ತಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Tumakuru: ತೋಟದ ಒಂಟಿ ಮನೆ ಮೇಲೆ ಕಳ್ಳರ ದಾಳಿ, ಮನೆ ದರೋಡೆ: ದಂಪತಿ ಮೇಲೆ ಹಲ್ಲೆ
ಸೊಸೈಟಿ ಹಾಗೂ ಸ್ಥಳೀಯರ ನಡುವೆ ವಾಗ್ವಾದ ಹಿನ್ನೆಲೆ ತಿಪಟೂರು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ತಿಪಟೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ