ಆರೋಪಿಗೆ ಕಾಲಿಗೆ ಫೈರ್ ಮಾಡಿದ ಪೊಲೀಸರೇ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ!

By Ravi Janekal  |  First Published Nov 6, 2023, 9:13 PM IST

ಆರೋಪಿ ಪೂರ್ಣೇಶ್ ಹೆಂಡ್ತಿಗೂ ಕೂಡ ಹೊಡೆದು ತವರಿಗೆ ಕಳಿಸಿದ್ದನಂತೆ. ಹಾಗಾಗಿ, ಓರ್ವ ಮಗನಿದ್ದರೂ ಆಕೆ ಕೂಡ ಗಂಡನನ್ನ ನೋಡೋದಕ್ಕೆ ಬಂದಿಲ್ಲ. ಇದೀಗ, ವಾರದಿಂದ ನೋಡಿಕೊಂಡ ಪೊಲೀಸರೇ ಆಪರೇಷನ್ ಮಾಡಿಸಿ, ಪೋಷಕರ ಸ್ಥಾನದಲ್ಲಿ ನಿಂತು ಹಾರೈಕೆ ಮಾಡುತ್ತಿದ್ದಾರೆ. ಸಿಪಿಐ, ಪಿಎಸ್‍ಐ, ಪೇದೆಗಳು ಇಂದಿಗೂ ಆತನ ಹಾರೈಕೆಯಲ್ಲಿದ್ದಾರೆ


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
 
ಚಿಕ್ಕಮಗಳೂರು (ನ.6): ಕಾಫಿನಾಡ ಖಾಕಿಗಳಿಗೆ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಪೂರ್ಣೇಶ್, ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದವನು. ಈತ ಒಂದು ರೀತಿ ಖಾಂಡ್ಯದ ರೌಡಿ. ಈತನ ಮೇಲೆ 4 ಹಾಫ್ ಮರ್ಡರ್, 3 ಅಸಾಲ್ಟ್, ಪೊಲೀಸ್ ಮೇಲೆ ಅಟ್ಯಾಕ್ ಸೇರಿದಂತೆ 9 ಕೇಸ್‌ಗಳಿವೆ. 307 ಕೇಸಲ್ಲಿ ವಾರಂಟ್ ಕೂಡ ಇಶ್ಯು ಆಗಿತ್ತು. ಆದ್ರೆ, 2012ರಿಂದ ಕಾಡಲ್ಲಿ, ಕಾಡಿನ ಮರಗಳ ಮೇಲೆ ಮಲಗಿ ಪೊಲೀಸರ ಕೈಗೆ ಸಿಗದೆ ಆಟ ಆಡಿಸ್ತಿದ್ದ. ಲಾಸ್ಟ್ ವೀಕ್ ಮನೆಯಲ್ಲಿರೋ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ಪೊಲೀಸರ ಮೇಲೆ ಲಾಂಗ್ ಬೀಸಿದ ಅಂತ ಕಾಲಿಗೆ ಮಂಡಿಗೆ ಫೈರಿಂಗ್ ಮಾಡಿದ್ದರು. ಆದ್ರೆ, ಫೈರಿಂಗ್ ಆದ ಮೇಲೆ ಆತನನ್ನ ನೋಡಿಕೊಳ್ಳಲು ಅವರ ಮನೆಯವರು ಯಾರೂ ಬಾರದ ಕಾರಣ ಓರ್ವ ಇನ್ಸ್‌ಪೆಕ್ಟರ್, ಓರ್ವ ಪಿ.ಎಸ್.ಐ. ಹಾಗೂ ನಾಲ್ವರು ಪೇದೆಗಳೇ ಆತನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ.

ಮಾನವೀತೆ ಮೆರೆದ ಖಾಕಿ:

Tap to resize

Latest Videos

undefined

ಊರಿಗೆ, ಮನೆಯವರಿಗೂ ಬೇಡವಾಗಿದ್ದ ಅವನು ಪೊಲೀಸರಿಗೆ ಬೇಕಾಗಿದ್ದ. ಫೈರಿಂಗ್ ಆಗಿದೆ ಅಂತ ಗೊತ್ತಾದ ಮೇಲೂ ಪೋಷಕರು, ಸಂಬಂಧಿಕರು, ಹೆಂಡ್ತಿ-ಮಕ್ಕಳು ಯಾರೂ ಬಂದಿಲ್ಲ. ಶೂಟ್ ಮಾಡಿ ಆಸ್ಪತ್ರೆಗೆ ಸೇರಿಸಿದ್ದ ಪೊಲೀಸರಿಗೆ ವೈದ್ಯರು ವೆಸಲ್ ಕಟ್ ಆಗಿದೆ ಅಂತ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ರೆಫರ್ ಮಾಡಿದ್ದರು. ಮನೆಯವರಿಗೆ ವಿಷಯ ತಿಳಿದರೂ ಯಾರೂ ಬಾರದ ಕಾರಣ ಸಿಪಿಐ, ಪಿಎಸ್‍ಐ ಹಾಗೂ ನಾಲ್ವರು ಪೇದೆಗಳೇ ಆಂಬುಲೆನ್ಸ್‍ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ರು. ಆತನನ್ನ ಬೆಂಗಳೂರಿನ ಆಸ್ಪತ್ರೆಗೂ ಕರೆದೊಯ್ದಿರು ಪೋಷಕರು, ಸಂಬಂಧಿಕರು ಹೆಂಡ್ತಿ-ಮಕ್ಕಳು ಯಾರು ಬಂದಿಲ್ಲ. 

ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನ ಶಾಂತಿಯುತ ತೆರೆ; ಪೊಲೀಸ್ ಬಿಗಿಭದ್ರತೆ, ಮಳೆ ನಡುವೆ ಭಕ್ತರಿಂದ ದತ್ತಪಾದುಕೆ ದರ್ಶನ

ಆರೋಪಿ ಪೂರ್ಣೇಶ್ ಹೆಂಡ್ತಿಗೂ ಕೂಡ ಹೊಡೆದು ತವರಿಗೆ ಕಳಿಸಿದ್ದನಂತೆ. ಹಾಗಾಗಿ, ಓರ್ವ ಮಗನಿದ್ದರೂ ಆಕೆ ಕೂಡ ಗಂಡನನ್ನ ನೋಡೋದಕ್ಕೆ ಬಂದಿಲ್ಲ. ಇದೀಗ, ವಾರದಿಂದ ನೋಡಿಕೊಂಡ ಪೊಲೀಸರೇ ಆಪರೇಷನ್ ಮಾಡಿಸಿ, ಪೋಷಕರ ಸ್ಥಾನದಲ್ಲಿ ನಿಂತು ಹಾರೈಕೆ ಮಾಡುತ್ತಿದ್ದಾರೆ. ಸಿಪಿಐ, ಪಿಎಸ್‍ಐ, ಪೇದೆಗಳು ಇಂದಿಗೂ ಆತನ ಹಾರೈಕೆಯಲ್ಲಿದ್ದಾರೆ. ಒಟ್ಟಾರೆ, ಎಂಟ್ಹತ್ತು ವರ್ಷಗಳಿಂದ ಹುಡುಕ್ತಿದ್ದ ಆರೋಪಿ ಪೊಲೀಸರ ಕೈಗೆ ಸಿಕ್ಕಾಗ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಮತ್ತೆ ಲಾಂಗ್ ಬೀಸಿದ ಅಂತ ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿದ್ರು. ಆದರೀಗ, ಕಾಫಿನಾಡ ಖಾಕಿಗಳಿಗೆ ಫೈರಿಂಗ್ ಮಾಡಿದ ತಪ್ಪಿಗೆ ಈಗ ನಾವೇ ನೋಡ್ಕೊಬೇಕು ಅನ್ನಿಸಿದೆ. ಆದ್ರೆ, ಅನಿವಾರ್ಯ ಆತ ಪೋಲಿಸ ಕಸ್ಟಡಿಯಲ್ಲಿ ಇರೋ ಆರೋಪಿ. ಪೋಷಕರು ಇದ್ರು ಕೂಡ ಆರೈಕೆ ಮಾಡಬೇಕಿತ್ತು. ಈಗ ಕಾಯೋದ್ರ ಜೊತೆ ಆರೈಕೆ ಮಾಡೋ ಸ್ಥಿತಿ ಬಂದಿದೆ.

ದರ್ಗಾದಲ್ಲಿ ದತ್ತಮಾಲಾ ಅಭಿಯಾನ: ಚಿಕ್ಕಮಗಳೂರು ಜಿಲ್ಲಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್

click me!