ನಮ್ಮದೇ ಸರ್ಕಾರ ಇದ್ರೂ ಮಾದಿಗ ಒಳಮೀಸಲಾತಿ ನೀಡಲಾಗುತ್ತಿಲ್ಲ:-ಕೆಎಚ್ ಮುನಿಯಪ್ಪ ಬೇಸರ

Published : Nov 06, 2023, 08:46 PM IST
ನಮ್ಮದೇ ಸರ್ಕಾರ ಇದ್ರೂ ಮಾದಿಗ ಒಳಮೀಸಲಾತಿ ನೀಡಲಾಗುತ್ತಿಲ್ಲ:-ಕೆಎಚ್ ಮುನಿಯಪ್ಪ ಬೇಸರ

ಸಾರಾಂಶ

ನಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದಿಗ ಸಮುದಾಯದ ಮುಖಂಡರ ಸಭೆ ಮಾಡ್ತಾರೆ. ಒಳ ಮೀಸಲಾತಿ ಕುರಿತು ಚರ್ಚೆ ಮಾಡ್ತಾರೆ ಎಂದು ಸಚಿವ ಕೆಎಚ್ ಮುನಿಯಪ್ಪ ಹೇಳಿದರು.

ಬೆಂಗಳೂರು (ನ.6): ನಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದಿಗ ಸಮುದಾಯದ ಮುಖಂಡರ ಸಭೆ ಮಾಡ್ತಾರೆ. ಒಳ ಮೀಸಲಾತಿ ಕುರಿತು ಚರ್ಚೆ ಮಾಡ್ತಾರೆ ಎಂದು ಸಚಿವ ಕೆಎಚ್ ಮುನಿಯಪ್ಪ ಹೇಳಿದರು.

ಇಂದು ಬೆಂಗಳೂರಿನಲ್ಲಿ ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಮಾದಿಗ ಸಮುದಾಯ ನಿರಂತರ ಹೋರಾಟ ಮಾಡುತ್ತಿರುವ ವಿಚಾರ ಸಂಬಂಧ ಮಾತನಾಡಿದ ಸಚಿವರು, ಒಳ ಮೀಸಲಾತಿ ಸಮುದಾಯಕ್ಕೆ ಅಗತ್ಯ ಅಂತ ಗೊತ್ತಿದ್ರೂ ಒಟ್ಟಿಗೆ ಇಚ್ಛಾಶಕ್ತಿ ಪ್ರದರ್ಶನ ಆಗ್ತಿಲ್ಲ. ಒಳ ಮೀಸಲಾತಿ ಬೇಕು ಅಂತ ನಮ್ಮವರೇ ಒತ್ತಡ ತರಬೇಕಿತ್ತು. ಆ ಕೆಲಸವನ್ನು ನಮ್ಮ ಸರ್ಕಾರದಲ್ಲೇ ಯಾಕೆ ಯಾರೂ ಮಾಡಿಲ್ಲ ಅಂತ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಒಳಮೀಸಲಿಗೆ ಸಿದ್ದು ಅಧಿವೇಶನ ಕರೆಯಲಿ: ಕೇಂದ್ರ ಸಚಿವ ನಾರಾಯಣಸ್ವಾಮಿ ಸವಾಲ್‌

ಮಾದಿಗ ಸಮುದಾಯ ಒಳ ಮೀಸಲಾತಿಗಾಗಿ ನಿರಂತರ ಹೋರಾಟ ಮಾಡುತ್ತ ಬಂದಿದೆ. ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿ ಹಂಚಿಕೆ ಮಾಡಿತ್ತು. ಆದ್ರೆ ವೈಜ್ಞಾನಿಕವಾಗಿ ಒಳ ಮೀಸಲಾತಿ ಹಂಚಿಕೆ ಮಾಡಿಲ್ಲ. ಇದು ಸುಪ್ರೀಂಕೋರ್ಟ್ ನಲ್ಲಿ ನಿಲ್ಲೋದಿಲ್ಲ. ಯಾಕೆಂದರೆ ಮೀಸಲಾತಿ ಪ್ರಮಾಣ 50% ಮೀರುವ ಹಾಗಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಾರಿ ಕಂಡುಕೊಳ್ಳಬೇಕು. ತಮ್ಮ ಸಮುದಾಯದ ನಾಯಕರ ಬಗ್ಗೆ ಸಭೆಯಲ್ಲಿ ಶಾಸಕಿ ರೂಪಾ ಶಶಿಧರ್ ಬೇಸರ ವ್ಯಕ್ತಪಡಿಸಿದರು.

ಸದಾಶಿವ ಆಯೋಗ ಜಾರಿಗೆ ಮಾಜಿ ಸಚಿವ ಆಗ್ರಹ:

ನಮ್ಮ ಸರ್ಕಾರವೇ ಅಧಿಕಾರದಲ್ಲಿದೆ ಆರನೇ ಗ್ಯಾರಂಟಿಯಾಗಿ ಸದಾಶಿವ ಆಯೋಗ ಜಾರಿ ಮಾಡಿ ಮಾದಿಗರಿಗೆ ಒಳ ಮೀಸಲಾತಿ ಕೊಡಲಿ ಎಂದು ಮಾಜಿ ಸಚಿವ ಎಚ್ ಆಂಜನೇಯ ಆಗ್ರಹಿಸಿದರು.

ನಾವು ಈಗಲೂ ಮಾತನಾಡಿದ್ರೆ ಆಗಲ್ಲ. ನಾವು ಹೋರಾಟಗಾರು. ನಾವು ಹೋರಾಟ ಮಾಡುವ ಸಮಯ ಬಂದಿದೆ. ಕಾಂಗ್ರೆಸ್ ಪಕ್ಷ ಹೇಗೆ ಕರೆಂಟ್ ಫ್ರೀ 2 ಸಾವಿರ ಫ್ರೀ ಅಂತ ಕೊಟ್ಟಿದೆಯೋ? ಅದೇ ರೀತಿ ಮುನಿಯಪ್ಪಗೂ ಫ್ರೀ ಸಿದ್ದರಾಮಯ್ಯ ಫ್ರೀ ಅಂತ ಗ್ಯಾರಂಟಿ ಕೊಟ್ಟಿದೆಯಲ್ಲಾ. ಅದೇ ರೀತಿ ಕೊಟ್ಟ ಮಾತಿನಂತೆ, ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಮಾಡಲೇಬೇಕು ಸರ್ಕಾರ. ನಮ್ಮ ಮಾದಿಗ ಸಮುದಾಯದ ಒಬ್ಬರು AC, DYSp ಇಲ್ಲ. ಮೆರಿಟ್ ಇಲ್ಲದ ಕಾರಣ ಯಾರೂ ಕೂಡ ಸೆಲೆಕ್ಟ್ ಆಗ್ತಾ ಇಲ್ಲ. ಅಧಿಕಾರಕ್ಕೆ ಯಾರೂ ಕೂಡ ಅಂಟಿಕೊಳ್ಳಬೇಡಿ. ಅಧಿಕಾರ ಹೋದ್ರು ಪರವಾಗಿಲ್ಲ, ಸಮುದಾಯಕ್ಕಾಗಿ ಹೋರಾಟ ಮಾಡ್ರಿ. ನಮ್ಮ ಮಾದಿಗ ಸಮುದಾಯಕ್ಕಾಗಿ ಸರ್ಕಾರ 10 ಸಾವಿರ ಕೋಟಿ ಹಣ ಕೊಡಲಿ. ಈ ಹಣವನ್ನ ಸಮುದಾಯದ ಎಲ್ಲರಿಗೆ ಹಂಚಿಕೆ ಮಾಡಿ. ಬಿಡಿಎ ಸೈಟ್ ಕೊಡಿ, ಮನೆ ಕಟ್ಟಿಸಿಕೊಡಿ, ಬೋರ್ವೆಲ್ ಹಾಕಿಸಿ ಕೊಡಿ ಎಂದು ಒತ್ತಾಯಿಸಿದರು. 

ಎಸ್ಟಿ ಒಳಮೀಸಲು: ಆಕ್ಷೇಪಣೆಗೆ ಸರ್ಕಾರಕ್ಕೆ 2 ವಾರದ ಗಡುವು, ಹೈಕೋರ್ಟ್‌

ಪಾಕೆಟ್‌ನಲ್ಲಿ ಹಣ ಇಟ್ಟು ಹಂಚಿಕೆ ಮಾಡಿ ಕ್ಷೇತ್ರದಲ್ಲಿ ನನ್ನ ಸೋಲಿಸಿದರು. ವಿಧಾನಸಭೆ ಸೋಲಿನ ಬಗ್ಗೆ ಮಾಜಿ ಸಚಿವ ಆಂಜನೇಯ ಬೇಸರ ವ್ಯಕ್ತಪಡಿಸಿದರು. ಮುಂದುವರಿದು, ಆದ್ರೆ ನಾನು ಸೋಲುವವರ ಲಿಸ್ಟ್ ನಲ್ಲಿ‌ ಇಲ್ಲ. ನಾನು ಯಾವತ್ತೂ ಗೆಲ್ಲುವವರ ಲಿಸ್ಟ್ ನಲ್ಲಿರೋದು. ಮತ್ತೆ ಗೆಲ್ತೇನೆ ಎನ್ನುವ ಮೂಲಕ ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುವ ಕುರಿತು ಸುಳಿವು ನೀಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಬೃಹತ್‌ ಪ್ರತಿಭಟನೆ
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ