
ಬೆಂಗಳೂರು (ಫೆ.15) : ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ದಾಸರಹಳ್ಳಿ ವಾರ್ಡ್‌ನಲ್ಲಿ ಅದಿಚುಂಚನಗಿರಿ ಪೀಠಾಧಿಪತಿ ಬಾಲಗಂಗಾಧರ ಸ್ವಾಮೀಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಫೆ.16ರಂದು ಉದ್ಘಾಟನೆಯಾಗಲಿದೆ ಎಂದು ಎಂದು ಸಚಿವ ವಿ.ಸೋಮಣ್ಣ ಹೇಳಿದರು.
ಹಳೆಯ ಆಸ್ಪತ್ರೆ ಜಾಗಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ಅವರು ಆಶೀರ್ವದಿಸಿದ್ದರು. ಅವರ ಪ್ರೇರಣೆ ಮತ್ತು ಸ್ಪೂರ್ತಿಯಿಂದ .106 ಕೋಟಿ ವೆಚ್ಚದಲ್ಲಿ 300 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ನಿರ್ಮಿಸಲಾಗಿದೆ. ಆಸ್ಪತ್ರೆಯನ್ನು ಫೆ.16ರಂದು ಸಂಜೆ 5ಕ್ಕೆ ಅದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗಾ ಸ್ವಾಮೀಜಿ, ಪಟ್ಟನಾಯಕನ ಹಳ್ಳಿಯ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಚಂದ್ರಶೇಖರ ಸ್ವಾಮೀಜಿ ಮತ್ತು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಲೋಕಾರ್ಪಣೆ ಮಾಡುವರು ಎಂದು ಸುದ್ದಿಗಾರರಿಗೆ ತಿಳಿಸಿದರು.
ವಿಧಾನಸಭೆ: ಮನೆ ವಿಚಾರಕ್ಕೆ ಸಿದ್ದು-ಸೋಮಣ್ಣ ನಡುವೆ ವಾಗ್ವಾದ
ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಮಾಜಿ ಕಾರ್ಪೋರೇಟರ್‌ಗಳಾದ ಮೋಹನ್ ಕುಮಾರ್, ದಾಸೇಗೌಡ, ಬಿಜೆಪಿ ಮುಖಂಡರಾದ ರಾಜಪ್ಪ, ಶ್ರೀಧರ್ ಇದ್ದರು.
ಆಸ್ಪತ್ರೆ ಕಟ್ಟಡದ ವಿಸ್ತೀರ್ಣವು ಒಟ್ಟು 14,886.50 ಚ.ಮೀ ವಿಸ್ತೀರ್ಣದಲ್ಲಿದೆ. ತಳಮಹಡಿ, ಮೊದಲ ಮಹಡಿ, ಎರಡನೇ ಮಹಡಿ, ಮೂರನೇ ಮಹಡಿ ಮತ್ತು ನಾಲ್ಕನೇ ಮಹಡಿ ನಿರ್ಮಿಸಲಾಗಿದೆ. ಹೊರರೋಗಿ ವಿಭಾಗದಲ್ಲಿ ನೇತ್ರತಜ್ಞ, ಇಎನ್‌ಟಿ, ದಂತತಜ್ಞ, ಕಾರ್ಡಿಯಾಕ್, ಫಿಸಿಯೋಥೆರಪಿ, ಆರ್ಥೋಪೆಡಿಕ್, ಒಬಿಜಿ, ಪೀಡಿಯಾಟ್ರಿP್ಸ…, ಹದಿಹರೆಯ ವಿಭಾಗ ಮತ್ತು ಟೆಲಿಮೆಡಿಸಿನ್ ಇದೆ. ಒಳರೋಗಿಗಳಿಗೆ ಔಷಧಿ, ಶಸ್ತಚಿಕಿತ್ಸೆ, ಪೀಡಿಯಾಟ್ರಿP್ಸ…, ನವಜಾತ ಆರೈಕೆ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ, ಮೂಳೆ ಚಿಕಿತ್ಸೆ, ನೇತ್ರ ಶಸ್ತ ಚಿಕಿತ್ಸೆ, ಹೃದಯ ತಪಾಸಣೆ, ಕೀಮೋಥೆರಪಿ, ರೇಡಿಯೋಲಾಜಿ ಸೇವೆಯಿದೆ. ಐಸಿಯು 13 ಹಾಸಿಗೆ, ಎನ್‌ಐಸಿಯು 8 ಹಾಸಿಗೆ, ಎಚ್‌ಡಿಯು 9 ಹಾಸಿಗೆ, ಒಳರೋಗಿ ಹಾಸಿಗೆ 270 ಹಾಸಿಗೆ ಇದೆ. ಜತೆಗೆ ಕೌನ್ಸೆಲಿಂಗ್, ವರ್ಚುವಲ್ ಕ್ಲಿನಿಕ್‌ಗಳಿವೆ.
BBMP: ಬಾಕಿ ಪಾವತಿಗಾಗಿ ಮತ್ತೆ ಬೀದಿಗೆ ಇಳಿದ ಪಾಲಿಕೆ ಗುತ್ತಿಗೆದಾರರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ