ಹತ್ಯೆಗೀಡಾದವನ ಬಂಧುಗಳ ಸಾಕ್ಷ್ಯ ನಿರ್ಲಕ್ಷಿಸುವಂತಿಲ್ಲ: ಹೈಕೋರ್ಟ್

Published : Oct 15, 2024, 12:01 PM IST
ಹತ್ಯೆಗೀಡಾದವನ ಬಂಧುಗಳ ಸಾಕ್ಷ್ಯ ನಿರ್ಲಕ್ಷಿಸುವಂತಿಲ್ಲ: ಹೈಕೋರ್ಟ್

ಸಾರಾಂಶ

ಕೊಲೆ ಪ್ರಕರಣದಲ್ಲಿ ಒಬ್ಬ ಪ್ರತ್ಯಕ್ಷ ಸಾಕ್ಷಿ, ಸತ್ತವರ ಕುಟುಂಬದ ಸದಸ್ಯನಾಗಿರುವ ಮಾತ್ರಕ್ಕೆ ಅಂತಹ ಸಾಕ್ಷಿಯ ಸಾಕ್ಷ್ಯವನ್ನು ತಿರಸ್ಕರಿಸಲಾಗುವುದಿಲ್ಲ. ಸತ್ತವರ ನಿಕಟ ಸಂಬಂಧಿಯಾಗಿರುವ ಪ್ರತ್ಯಕ್ಷದರ್ಶಿಯ ಸಾಕ್ಷ್ಯವು ಸಮಂಜಸ, ನಂಬಲರ್ಹ ಮತ್ತು ವಿಶ್ವಾಸಾರ್ಹವಾಗಿದ್ದರೆ, ಅದನ್ನು ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ 

ವೆಂಕಟೇಶ್ ಕಲಿಪಿ

ಬೆಂಗಳೂರು(ಅ.15): ಪ್ರತ್ಯಕ್ಷ ಸಾಕ್ಷಿಯೊಬ್ಬ ಕೊಲೆಯಾದವನ ನಿಕಟ ಸಂಬಂಧಿ ಎಂಬ ಕಾರಣಕ್ಕೆ ಆ ಸಾಕ್ಷ್ಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಕೊಲೆ ಪ್ರಕರಣದಲ್ಲಿ ಮೃತನ ತಂದೆ ಹಾಗೂ ಸಹೋದರನ ಸಾಕ್ತ ಆಧರಿಸಿ ಇಬ್ಬರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ. 

ಕೊಲೆ ಪ್ರಕರಣದಲ್ಲಿ ಒಬ್ಬ ಪ್ರತ್ಯಕ್ಷ ಸಾಕ್ಷಿ, ಸತ್ತವರ ಕುಟುಂಬದ ಸದಸ್ಯನಾಗಿರುವ ಮಾತ್ರಕ್ಕೆ ಅಂತಹ ಸಾಕ್ಷಿಯ ಸಾಕ್ಷ್ಯವನ್ನು ತಿರಸ್ಕರಿಸಲಾಗುವುದಿಲ್ಲ. ಸತ್ತವರ ನಿಕಟ ಸಂಬಂಧಿಯಾಗಿರುವ ಪ್ರತ್ಯಕ್ಷದರ್ಶಿಯ ಸಾಕ್ಷ್ಯವು ಸಮಂಜಸ, ನಂಬಲರ್ಹ ಮತ್ತು ವಿಶ್ವಾಸಾರ್ಹವಾಗಿದ್ದರೆ, ಅದನ್ನು ಪರಿಗಣಿಸಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ರೇಣುಕಾಸ್ವಾಮಿ ಕೊಲೆ: ಆರೋಪಿ ಪ್ರದೋಷ್ ಬೆಳಗಾವಿಯಿಂದ ಬೆಂಗ್ಳೂರು ಜೈಲಿಗೆ

ವಿಜಯಪುರದ ಅಮಸಿದ್ದ ಬರಕಡೆ ಕೊಲೆ ಪ್ರಕರಣದಲ್ಲಿ ತಮ್ಮನ್ನು ದೋಷಿಯಾಗಿ ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಕಾಮಣ್ಣ (42) ಹಾಗೂ ಸೋಮಲಿಂಗ (36) ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಜಾ ಗೊಳಿಸಿರುವ ನ್ಯಾಯಮೂರ್ತಿ ಎಸ್. ಸುನೀ ಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರ ವಿಭಾಗೀಯ ಪೀಠ ಈ ಆದೇಶ ಮಾಡಿದೆ. 

ಅಮರಸಿದ್ದ ಬರಕಡೆ ಕೊಲೆ ನಡೆದ ಜಮೀನಿನಲ್ಲಿಯೇ ಪ್ರತ್ಯಕ್ಷ ದರ್ಶಿಗಳಾಗಿರುವ ಮೃತನ ತಂದೆ ಶಂಕರಪ್ಪ ಮತ್ತು ಸಹೋದರ ಫಾರ್ಮ್ ಹೌಸ್‌ ಕಟ್ಟಿಕೊಂಡುನೆಲೆಸಿದ್ದಾರೆ.ಆರೋಪಿಗಳು ಜಮೀನಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿ ದಾಗಮೃತನಕಿರುಚಾಟಕೇಳಿ ಪ್ರತ್ಯಕ್ಷದರ್ಶಿಗಳು ಘಟನಾ ಸ್ಥಳಕ್ಕೆ ಬಂದಿದ್ದರು. ಅಲ್ಲಿ ಅಮರಸಿದ್ದ ಮೃತದೇಹ ಬಿದ್ದಿರುವುದು ಕಂಡಿದ್ದಾರೆ, ಆರೋಪಿಗಳಿಂದ ಕೊಲೆಗೆ ಬಳಸಿದ ಜಂಬೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯಲ್ಲಿ ಮಿಸ್ಸಿಂಗ್ ಲಿಂಕ್ ಇಲ್ಲ. ಘಟನಾ ಸ್ಥಳದಲ್ಲಿ ಆರೋಪಿಗಳು ಇದ್ದದ್ದನ್ನುಸಾಕ್ಷ್ಯಾಧಾರಗಳಿಂದ ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ ಎಂದು ಅಲ್ಲದೆ, ದೂರುದಾರನಾಗಿರುವ ಮೃತನ ತಂದೆ ಮತ್ತು ಆತನ ಪುತ್ರ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳಾಗಿದ್ದಾರೆ. ಅವರನ್ನು ಆಸಕ್ತ ಸಾಕ್ಷ್ಯಗಳೆಂದು ಪರಿಗಣಿಸಲಾಗಿದೆ. ಒಬ್ಬ ಪ್ರತ್ಯಕ್ಷ ಸಾಕ್ಷಿಯು ಸತ್ತವರ ಕುಟುಂಬದ ಸದಸ್ಯನಾಗಿರುವುದರಿಂದ, ಅಂತಹ ಸಾಕ್ಷಿಯ ಸಾಕ್ಷ್ಯವನ್ನು ತಿರ ಸ್ಮರಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಪ್ರಕರಣವೊಂದರಲ್ಲಿ ಹೇಳಿರುವ ತೀರ್ಪು ಈ ಪ್ರಕರಣಕ್ಕೆ ಸ್ಪಷ್ಟವಾಗಿ ಅನ್ವಯಿಸಲಿದೆ. ಆದ್ದರಿಂದ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯ ಆದೇಶ ಸೂಕ್ತವಾಗಿದೆ ಎಂದು ಹೈಕೋರ್ಟ್ ಆದೇಶಿಸಿದೆ. 

ಪ್ರಕರಣದ ವಿವರ: 

ವಿಜಯಪುರದ ಕನ್ನೂರು ಗ್ರಾಮದಲ್ಲಿ 5 ಎಕರೆ ಭೂಮಿಯನ್ನು ಮಲ್ಲಪ್ಪ ಬರಕಡೆ ಎಂಬುವವರು ಕಾಮಣ್ಣನ ಸಂಬಂಧಿ ರುದ್ರಪ್ಪ ಅವರಿಂದ ಖರೀದಿಸಿದ್ದರು. ಈ ಜಮೀನನ್ನು ಹಿಂದಿರುಗಿಸಬೇಕೆಂಬ ಕಾಮಣ್ಣನ ಒತ್ತಾಯಕ್ಕೆ ಮಲ್ಲಪ್ಪ ನಿರಾಕರಿಸಿದ್ದರು. ಮಲ್ಲಪ್ಪನ ಬೆಂಬಲಕ್ಕೆ ಸಹೋದರ ಅಮಸಿದ್ದ ಬರಕಡೆ ನಿಂತಿದ್ದರು. ಇದರಿಂದ ಕೋಪಗೊಂಡ ಕಾಮಣ್ಣ ಮತ್ತು ಇತರೆ ಆರೋಪಿಗಳು 2013ರ ಸೆ.19ರಂದು ಸಂಜೆ ತನ್ನ ಜಮೀನಿನಲ್ಲಿದ್ದ ಅಮರಸಿದ್ದ ಬರಕಡೆಯನ್ನು ಕೊಲೆಗೈದಿದ್ದರು. ಮೃತನ ತಂದೆ ಶಂಕರಪ್ಪ ನೀಡಿದ ದೂರು ಆಧರಿಸಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸಿ ಕೊಲೆ ಅಪರಾಧದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ಫಲಭರಿತ ತೆಂಗಿನ ಮರ ಕಡಿಯದಂತೆ ಹೈಕೋರ್ಟ್ ತಡೆ!

ಪ್ರಕರಣದ ವಿಚಾರಣೆ ನಡೆಸಿದ್ದ ವಿಜಯಪುರ 5ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ, ಕಾಮಣ್ಯ ಹಾಗೂ ಸೋಮಲಿಂಗ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 30 ಹೈಕೋರ್ಟ್ ತೀರ್ಮಾನಿಸಿದೆ. ಸಾವಿರ ದಂಡ ವಿಧಿಸಿ 2017ರ ಮಾ.28ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಮೊದಲ ಆರೋಪಿ ಕಾಮಣ್ಣ ಹಾಗೂ ನಾಲ್ಕನೇ ಆರೋಪಿ ಸೋಮಲಿಂಗ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. 

ಆರೋಪಿಗಳ ಪರ ವಕೀಲರು, ದೂರುದಾರ ಮತ್ತು ಆತನ ಮತ್ತೊಬ್ಬ ಪುತ್ರನನ್ನು ಪ್ರಕರಣದ ಪ್ರತ್ಯಕ್ಷ ದರ್ಶಿಗಳು/ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ಪ್ರಾಸಿಕ್ಯೂಷನ್ ವಾದ ಬೆಂಬಲಿಸಿದ ಪ್ರತ್ಯಕ್ಷ ದರ್ಶಿಗಳು ಪ್ರಕರಣದಲ್ಲಿ ಆಸಕ್ತ ಸಾಕ್ಷಿಗಳಾಗಿದ್ದಾರೆ. ಪ್ರತ್ಯಕ್ಷ ದರ್ಶಿಗಳು ಸಹ ತಮ್ಮ ಸಾಕ್ಷ್ಯದಲ್ಲಿ ಘಟನೆ ಸ್ಥಳದಲ್ಲಿ ಕಾಮಣ್ಣ ಮತ್ತು ಸೋಮಲಿಂಗ ಇದ್ದರು ಎಂಬುದಾಗಿ ಎಲ್ಲಿಯೂ ಹೇಳಿಲ್ಲ. ಅವರು ನುಡಿದ ಸಾಕ್ಷ್ಯ ಸಹ ತದ್ವಿರುದ್ದವಾಗಿದೆ. ಅದನ್ನು ಪರಿಗಣಿಸದೆ ಮತ್ತು ಮೃತನ ಕುಟುಂಬದವರ ಸಾಕ್ಷ್ಯ ಆಧರಿಸಿ ವಿಚಾರಣಾ ನ್ಯಾಯಾಲಯವು ಆರೋಪಿಗಳಿಗೆ ಶಿಕ್ಷೆ ವಿಧಿಸಿರುವುದು ದೋಷಪೂರಿತವಾಗಿದೆ. ಆದ್ದರಿಂದ ಆರೋಪಿಗಳನ್ನು ದೋಷಮುಕ್ತ ಗೊಳಿಸುವಂತೆ ಕೋರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ