Hindu Temples : ದೇವಾಲಯಗಳನ್ನು ಹಿಂದುಗಳ ವಶಕ್ಕೆ ನೀಡಬೇಕು : ತೇಜಸ್ವಿ ಸೂರ್ಯ

By Kannadaprabha News  |  First Published Dec 26, 2021, 11:37 AM IST
  •  ದೇವಾಲಯಗಳನ್ನು ಹಿಂದುಗಳ ವಶಕ್ಕೆ ನೀಡಬೇಕು : ತೇಜಸ್ವಿ ಸೂರ್ಯ
  • ಪರ್ಯಾಯ ಮಂಗಲೋತ್ಸವ ‘ವಿಶ್ವಾರ್ಪಣಂ’ನಲ್ಲಿ ವಿಶೇಷ ಉಪನ್ಯಾಸ

 ಉಡುಪಿ (ಡಿ.26):  ಭಾರತದಲ್ಲಿ (India)  ಶೇ 80ರಷ್ಟಿರುವ ಹಿಂದುಗಳ ದೇವಾಲಯಗಳನ್ನು (Temple)  ಸರ್ಕಾರ ತನ್ನ ವಶದಲ್ಲಿಟ್ಟುಕೊಂಡಿವೆ, ಆದರೆ ಚರ್ಚ್, ಮಸೀದಿಗಳನ್ನು ಮಾತ್ರ ಆಯಾ ಧರ್ಮದವರಿಗೆ ನೀಡಿದೆ. ಅಂದರೆ ಇದು ಹಿಂದುಗಳಿಗೆ ಮಾಡುತ್ತಿರುವ ಅವಮಾನವಾಗಿದೆ. ಆದ್ದರಿಂದ ಎಲ್ಲರೂ ಒಕ್ಕೊರಲಿನಿಂದ ದೇವಾಲಯಗಳನ್ನು ಸರ್ಕಾರದ ವಶದಿಂದ ಬಿಡುಗಡೆಗೆ ಆಗ್ರಹಿಸಬೇಕಾಗಿದೆ. ಉತ್ತರಾಖಂಡದಲ್ಲಿ ಈಗಾಗಲೇ ಈ ಹೋರಾಟ ಆರಂಭವಾಗಿದೆ. ನಮ್ಮ ರಾಜ್ಯದಲ್ಲಿಯೂ ಇದು ಆರಂಭವಾಗಬೇಕು ಎಂದು ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಹೇಳಿದರು.

ಅವರು ಕೃಷ್ಣ ಮಠದ (Krishna Mutt) ರಾಜಾಂಗಣದಲ್ಲಿ ಪರ್ಯಾಯ ಅದಮಾರು ಮಠದ (Mutt) ಪರ್ಯಾಯ ಮಂಗಲೋತ್ಸವದ ’ವಿಶ್ವಾರ್ಪಣಂ’ನ 20ನೇ ದಿನ ಸಮಾರಂಭದಲ್ಲಿ ರಾಜಕಾರಣದಲ್ಲಿ (Politics)  ಯುವ ಪೀಳಿಗೆ ಪ್ರವೇಶ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.

Tap to resize

Latest Videos

 

ನಮ್ಮ ಸಂಸ್ಕೃತಿಗಳನ್ನು ಗಟ್ಟಿಯಾಗಿ ಉಳಿಸಿದ್ದು ಮಠಮಂದಿರಗಳು, ನಮ್ಮ ಕುಟುಂಬ (Family) ವ್ಯವಸ್ಥೆ, ನಮ್ಮ ಜಾತಿ (Cast) ವ್ಯವಸ್ಥೆ, ಆದ್ದರಿಂದ ಅವುಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ತೇಜಸ್ವಿ, ಹಿಂದೂ ಧರ್ಮದಲ್ಲಿರುವ ಜಾತಿಗಳ ನಡುವಿನ ತಾರತಮ್ಯವನ್ನು ತೊಡೆದು ಹಾಕಬೇಕಾಗಿದೆ. ಅಂದ ಮಾತ್ರಕ್ಕೆ ಜಾತಿಗಳನ್ನೇ ತೊಡೆದು ಹಾಕಬೇಕು ಎಂದಲ್ಲ. ಅವು ಹಿಂದೂ ಧರ್ಮದ ವಿಶೇಷತೆಯಾಗಿವೆ. ಅವು ಆಯಾಯ ಕಾಲದಲ್ಲಿ ಸೌಲಭ್ಯ ಅಗತ್ಯಕ್ಕನುಗುಣವಾಗಿ ಹುಟ್ಟಿಬೆಳೆದಿವೆ ಎಂದರು.

ಅಧ್ಯಕ್ಷತೆ ವಹಿಸಿದ್ಧ ಪರ್ಯಾಯ ಪೀಠಾಧೀಶರಾದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಖ್ಯಾತ ಜ್ಯೋತಿಷಿ ವಿಐ ವಿಷ್ಣುಪ್ರಸಾದ್‌ ಹೆಬ್ಬಾರ್‌, ಮುಂಬೈಯ (Mumbai) ಖ್ಯಾತ ವೈದ್ಯ ಡಾ.ಸುರೇಶ ರಾವ್‌, ಉದ್ಯಮಿ ಟಿ.ಶಂಭು ಶೆಟ್ಟಿ, ಹಿರಿಯ ಪತ್ರಿಕಾ ಛಾಯಾಗ್ರಾಹಕ ಯಜ್ಞ ಮಂಗಳೂರು ಅವರನ್ನು ಸನ್ಮಾನಿಸಿ ಅನುಗ್ರಹ ಸಂದೇಶ ನೀಡಿದರು.

ಕುಕ್ಕೆ ಸುಬ್ರಹ್ಮಣ್ಯ ಮಠದ (Mutt) ಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹಾಗೂ ಕೊಂಡೆವೂರು ]ನಿತ್ಯಾನಂದ ಯೋಗಾಶ್ರಮದ ]ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು.

ಅಭ್ಯಾಗತರಾಗಿ ಉಡುಪಿ ಶಾಸಕ ರಘುಪತಿ ಭಚ್‌, ವಾಸ್ತುತಜ್ಞ ಶತಾವಧಾನಿ ಸುಬ್ರಹ್ಮಣ್ಯ ಭಟ್‌ ಮತ್ತು ಹೈದರಾಬಾದಿನ ದ್ವಾರಕಾ ಹೋಟೆಲಿನ (Hotel) ಬಿ.ಪಿ.ರಾಘವೇಂದ್ರ ರಾವ್‌ ಉಪಸ್ಥಿತಿರಿದ್ದರು. ಮಠದ ವ್ಯವಸ್ಥಾಪಕ ಗೋವಿಂದರಾಜ್‌ ಸ್ವಾಗತಿಸಿ, ಮಠದ ಆಸ್ಥಾನ ವಿದ್ವಾಂಸ ಕೃಷ್ಣರಾಜ ಭಟ್‌ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

  •  ದೇವಾಲಯಗಳನ್ನು ಹಿಂದುಗಳ ವಶಕ್ಕೆ ನೀಡಬೇಕು : ತೇಜಸ್ವಿ ಸೂರ್ಯ
  • ಪರ್ಯಾಯ ಮಂಗಲೋತ್ಸವ ‘ವಿಶ್ವಾರ್ಪಣಂ’ನಲ್ಲಿ ವಿಶೇಷ ಉಪನ್ಯಾಸ
  • ಎಲ್ಲರೂ ಒಕ್ಕೊರಲಿನಿಂದ ದೇವಾಲಯಗಳನ್ನು ಸರ್ಕಾರದ ವಶದಿಂದ ಬಿಡುಗಡೆಗೆ ಆಗ್ರಹಿಸಬೇಕಾಗಿದೆ ಎಂದ ತೇಜಸ್ವಿ ಸೂರ್ಯ

ದೇಗುಲಗಳ ರಕ್ಷಣೆ ಹೆಸರಿನಲ್ಲಿ ಲಾಭಕ್ಕೆ ಯತ್ನ : ಮಂದಿರ ರಕ್ಷಣೆ ಹೋರಾಟದಲ್ಲಿ 5 ಪರ್ಸೆಂಟ್‌ ಲಾಭ ತೆಗೆದುಕೊಳ್ಳೋಣ ಎಂದು ಕಾಂಗ್ರೆಸ್‌ ಹೊರಟಿದೆ ಎಂದು ಬೆಂಗಳೂರು ದಕ್ಷಿಣ ಸಂಸದ  ತೇಜಸ್ವಿ  ವ್ಯಂಗ್ಯವಾಡಿದ್ದಾರೆ.  ನಂಜನಗೂಡಿನ ಹುಚ್ಚಗಣಿ ದೇವಾಲಯ ತೆರವು ವಿರೋಧಿಸಿ ಮೂಡಿಗೆರೆಯಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪ್ರತಾಪ್ ಸಿಂಹ ಅವರಿಗೆ ಘೇರಾವ್‌ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂದಿರ ರಕ್ಷಣೆ ಹೋರಾಟದಲ್ಲಿ ತಮಗೂ 5 ಪರ್ಸೆಂಟ್‌ ಲಾಭ ಬರಲಿ ಅಂತಾ ಕಾಂಗ್ರೆಸ್‌ ಯೋಚಿಸುತ್ತಿದೆ. ಹೀಗಾಗಿ ರಾತ್ರೋರಾತ್ರಿ ಮಂದಿರದ ಬಗ್ಗೆ ಪ್ರೀತಿ ಬಂದಿದೆ ಎಂದು ಹೇಳಿದರು. ಆಷಾಡಭೂತಿತನ ತೋರಿಸುತ್ತಿರುವ ಕಾಂಗ್ರೆಸ್ಸಿಗರ ನಾಟಕವನ್ನು ಜನ ನಂಬುವುದಿಲ್ಲ. ಮೂರ್ತಿಭಂಜಕ ಟಿಪ್ಪು ಜಯಂತಿ ಮಾಡಿದವರ ಬಗ್ಗೆ ಜನಕ್ಕೆ ಗೊತ್ತಿದೆ. ನಾಟಕ ಮಾಡುವುದನ್ನು ಕಾಂಗ್ರೆಸ್‌ ಮೊದಲು ನಿಲ್ಲಿಸಲಿ ಎಂದಿದ್ದರು. 

click me!