ಮೂಗಿನಲ್ಲಿ ನಿಂಬೆ ಹಣ್ಣಿನ ರಸ ಹಾಕಿಕೊಂಡ ಶಿಕ್ಷಕ ಸಾವು!

By Suvarna News  |  First Published Apr 28, 2021, 3:18 PM IST

ನಿಂಬೆ ಹಣ್ಣಿನ ಹನಿಗಳನ್ನು ಮೂಗಿನಲ್ಲಿ ಬಿಟ್ಟುಕೊಂಡರೆ  ಆಮ್ಲಜನಕ ವೃದ್ಧಿಯಾಗುತ್ತದೆ ಎನ್ನುವ ಸುದ್ದಿ ಹಬ್ಬಿದೆ. ಇದನ್ನು ಪ್ರಯತ್ನಿಸಿದ ಶಿಕ್ಷಕ ಸಾವನ್ನಪ್ಪಿರುವ ಘಟನೆ ನಡೆದಿದೆ.


ರಾಯಚೂರು, (ಏ.28): ನಿಂಬೆಹಣ್ಣಿನ ರಸ ಮೂಗಿನಲ್ಲಿ ಹಾಕಿಕೊಳ್ಳುವುದರಿಂದ ಕೊರೋನಾ ಮಹಾಮಾರಿಯಿಂದ ದೂರ ಇರಬಹುದು.  ನಾಲ್ಕು ಹನಿ ಮೂಗಿನಲ್ಲಿ ಹಾಕಿಕೊಂಡರೇ ಉಸಿರಾಟದ ತೊಂದರೆ ಇರುವುದಿಲ್ಲ. ಬದಲಿಗೆ ಆಮ್ಲಜನಕ ವೃದ್ಧಿಯಾಗುತ್ತದೆ ಎನ್ನುವ ಸುದ್ದಿ ರಾಜ್ಯದಲ್ಲಿ ಹರಿದಾಡುತ್ತಿದೆ.

ನಿಂಬೆ ಹಣ್ಣಿನಲ್ಲಿ ಸಿ ಮತ್ತು ಎ ವಿಟಮಿನ್‌ಗಳಿವೆ.ನಿಂಬೆ ಹಣ್ಣಿನ ಹನಿಗಳನ್ನು ಮೂಗಿನಲ್ಲಿ ಬಿಟ್ಟುಕೊಂಡರೆ ದೇಹದ ಆಮ್ಲಜನಕ ವೃದ್ಧಿಯಾಗುತ್ತದೆ ಎನ್ನುವ ಹೊಸ ಸುದ್ದಿಗೆ ಪರ, ವಿರೋಧಗಳು ವ್ಯಕ್ತವಾಗುತ್ತಿವೆ.

Latest Videos

undefined

ಇದರ ಮಧ್ಯೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಶಿಕ್ಷಕರೊಬ್ಬರು ನಿಂಬೆ ಹಣ್ಣಿನ ರಸವನ್ನು ಮೂಗಿನಲ್ಲಿ ಹಾಕಿಕೊಂಡಿದ್ದಾರೆ. ಬಳಿಕ, ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾರೆ. 

ಹುಳಿ ಹಿಂಡೋಕೆ ಮಾತ್ರವಲ್ಲ, ಲಿಂಬೆ ಹೀಗೂ ಬಲು ಉಪಕಾರಿ! 

ಹೌದು...ಇಂದು (ಬುಧವಾರ) ಸಿಂಧನೂರಿನ ಶರಣಬಸವೇಶ್ವರ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ(43) ಎನ್ನುವರು ಮೂಗಿನಲ್ಲಿ ನಿಂಬೆಹಣ್ಣಿನ ರಸ ಹಾಕಿಕೊಂಡ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬೆಳಗ್ಗೆ ಆರೋಗ್ಯವಾಗಿಯೇ ಇದ್ದ ಅವರು, ನಿಂಬೆರಸ ಹಾಕಿಕೊಂಡ ಬಳಿಕ ಏಕಾಏಕಿ ಒದ್ದಾಡಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

click me!