50 ವರ್ಷದೊಳಗಿನವರ ಸಾವಿನ ಪ್ರಮಾಣವೂ ಹೆಚ್ಚಳ : ಆತಂಕ

Kannadaprabha News   | Asianet News
Published : Apr 28, 2021, 10:31 AM ISTUpdated : Apr 28, 2021, 01:30 PM IST
50 ವರ್ಷದೊಳಗಿನವರ ಸಾವಿನ ಪ್ರಮಾಣವೂ ಹೆಚ್ಚಳ :  ಆತಂಕ

ಸಾರಾಂಶ

ದೇಶದಲ್ಲಿ ಮಹಾಮಾರಿ ಅಟ್ಟಹಾಸ ಮಿತಿ ಮೀರುತ್ತಿದೆ. ಸಾವು ನೋವುಗಳ ಸಂಖ್ಯೆಯೂ ಹೆಚ್ಚಾಗಿದೆ. ಇಷ್ಟು ದಿನಗಳ ಕಾಲ 60 ವರ್ಷ ಮೇಲ್ಪಟ್ಟವರಿಗೆ ಆತಂಕ ಎಂದೆನಿಸಿಕೊಂಡಿದ್ದ ಮಹಾಮಾರಿ ಇದೀಗ 50 ವರ್ಷದ ಒಳಗಿನವರನ್ನೂ ಹೆಚ್ಚಾಗಿಯೇ ಬಲಿ ತೆಗೆದುಕೊಳ್ಳುತ್ತಿದೆ. 

 ಬೆಂಗಳೂರು (ಏ.28):  ರಾಜ್ಯದಲ್ಲಿ ಕೋವಿಡ್‌-19ರ ಎರಡನೇ ಅಲೆಯು 50 ವರ್ಷದೊಳಗಿನವರ ಪಾಲಿಗೆ ಮಾರಣಾಂತಿಕವಾಗಿ ಪರಿಣಮಿಸಿದೆ. ಮಂಗಳವಾರ ಮೃತಪಟ್ಟ180 ಮಂದಿಯಲ್ಲಿ 50 ಮಂದಿ 50 ವರ್ಷದೊಳಗಿನವರಿದ್ದಾರೆ. ಅಂದರೆ ಮೃತರಾಗಿರುವ ಪ್ರತಿ ನಾಲ್ವರಲ್ಲಿ ಒಬ್ಬರು 50 ವರ್ಷದ ಒಳಗಿನವರಾಗಿದ್ದಾರೆ. ಕಳೆದೆರಡು ದಿನಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಯುವಕರು ಕೋವಿಡ್‌ಗೆ ಬಲಿಯಾಗಿದ್ದಾರೆ.

ಮಂಗಳವಾರದ ವರದಿಯಲ್ಲಿ ಧಾರವಾಡದದಲ್ಲಿ 19 ವರ್ಷದ ಯುವತಿ, ಮೈಸೂರಲ್ಲಿ 24ರ ಹರೆಯದ ಯುವತಿ ಮರಣವನ್ನಪ್ಪಿದ್ದನ್ನು ದಾಖಲಿಸಲಾಗಿದೆ. ಕಳೆದ ಕೆಲ ದಿನಗಳಿಂದ 50 ವರ್ಷದೊಳಗಿನವರ ಮರಣ ಪ್ರಮಾಣದಲ್ಲಿ ಏರಿಕೆ ದಾಖಲಾಗುತ್ತಿದೆ. ಆದರೆ ಮಂಗಳವಾರದ ವರದಿಯು ಕೋವಿಡ್‌-19 ಲಸಿಕೆ ಅಭಿಯಾನದ ವ್ಯಾಪ್ತಿಯೊಳಗೆ ಇನ್ನೂ ಬಂದಿರದ ಯುವಕರು ಹಾಗೆಯೇ ಮಧ್ಯವಯಸ್ಕರ ಪ್ರಾಣವನ್ನು ದೊಡ್ಡ ಸಂಖ್ಯೆಯಲ್ಲಿ ಕಸಿದುಕೊಳ್ಳುತ್ತಿರುವುದನ್ನು ಸಾಬೀತಾಗಿದೆ.

ಇಂದು (ಏ.27) ರಾಜ್ಯದಲ್ಲಿ ಕೊರೋನಾ ಸೊಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ! ..

ಸೋಮವಾರ 201 ಮಂದಿ ಮೃತರಾಗಿದ್ದು, ಈ ಪೈಕಿ 54 ಮಂದಿ 50 ವರ್ಷದೊಳಗಿನವರು. ಅಂದರೆ ಕಳೆದ ಎರಡು ದಿನಗಳಲ್ಲಿ ಮೃತಪಟ್ಟ381 ಮಂದಿಯಲ್ಲಿ 104 ಮಂದಿ 50ರೊಳಗಿನವರಾಗಿದ್ದಾರೆ. ಭಾನುವಾರ 143 ಮಂದಿ ಮೃತರಾಗಿದ್ದು, ಇವರಲ್ಲಿ 25 ಮಂದಿ, ಶನಿವಾರ 208 ಮಂದಿ ಮೃತರಾಗಿದ್ದು, ಇವರಲ್ಲಿ 39 ಮಂದಿ 50 ವರ್ಷದೊಳಗಿನವರಾಗಿದ್ದಾರೆ.

ಹದಿ ಹರೆಯದವರ ಮರಣ ಸಂಖ್ಯೆ ಕಡಿಮೆ ಇದ್ದರೂ ಒಂದೆರಡು ಪ್ರಕರಣಗಳು ಪ್ರತಿದಿನ ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ