ಬರೋಬ್ಬರಿ 9.20 ಲಕ್ಷ ಬೆಲೆಗೆ ತಮಿಳುನಾಡಿಗೆ ಮಾರಾಟವಾದ ಮಂಡ್ಯದ ಒಂಟಿ ಎತ್ತು!

By Gowthami KFirst Published Jul 27, 2023, 9:09 AM IST
Highlights

ಮಂಡ್ಯದಲ್ಲಿ ಒಂಟಿ ಎತ್ತುವೊಂದು ದಾಖಲೆಯ ಬೆಲೆಗೆ ಮಾರಾಟವಾಗಿದೆ. ಹಳ್ಳಿಕಾರ್ ತಳಿಯ ಒಂಟಿ ಎತ್ತು ದಾಖಲೆ ಬೆಲೆಗೆ ಮಾರಾಟವಾಗಿದ್ದು, ಎತ್ತು ಮಾರಾಟವಾದ ಬೆಲೆ ಕೇಳಿದ್ರೆ ಎಂತವರೂ ಕೂಡ   ಅಬ್ಬಾಬ್ಬ ಅನ್ನೊದು ಗ್ಯಾರಂಟಿ. 

ಮಂಡ್ಯ  (ಜು.27): ಎತ್ತಿನಗಾಡಿ ಓಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಬಾಚಿಕೊಂಡಿದ್ದ ಅಪರೂಪದ ಹಳ್ಳಿಕಾರ್‌ ತಳಿಯ ಎತ್ತು ಮಂಡ್ಯ ಜಿಲ್ಲೆಯಿಂದ ತಮಿಳುನಾಡಿಗೆ ದಾಖಲೆ ಬೆಲೆಗೆ ಮಾರಾಟವಾಗಿದೆ.

ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ನವೀನ್‌ ಸಾಕಿದ್ದ ಹಳ್ಳಿಕಾರ್‌ ತಳಿಯ ಎತ್ತು ನೆರೆಯ ತಮಿಳುನಾಡಿಗೆ 9.26 ಲಕ್ಷ ರು. ದಾಖಲೆಯ ಬೆಲೆಗೆ ಮಾರಾಟವಾಗಿದೆ. ತಮಿಳುನಾಡಿನ ಸಿರುವಯ್‌ ತಂಬಿ ಎತ್ತನ್ನು ಖರೀದಿ ಮಾಡಿದ್ದು, ಅವರು ಕೂಡ ಎತ್ತಿನ ಗಾಡಿ ಓಟ ಪ್ರಿಯರಾಗಿದ್ದಾರೆ.

Latest Videos

ಲಾಕ್‌ಡೌನ್ ವೇಳೆ ಚಾಕೊಲೇಟ್ ಕಂಪನಿ ತೆರೆದು ಕೋಟ್ಯಧಿಪತಿ

ಕಳೆದೊಂದು ವರ್ಷದ ಹಿಂದೆ ಮಂಡ್ಯ ತಾಲೂಕು ಇಂಡುವಾಳು ಗ್ರಾಮದ ರೈತ ನಿಂದ 1.26 ಲಕ್ಷ ರು. ನೀಡಿ ಒಂದು ವರ್ಷದ ಹಳ್ಳಿಕಾರ್‌ ತಳಿಯ ಕರು ಖರೀದಿಸಿದ್ದ ನವೀನ್‌ ಸಾಕಿ ಸಲುಹಿದ್ದರು. ಅಷ್ಟೇ ಅಲ್ಲದೇ, ಎತ್ತಿನ ಗಾಡಿ ಓಟ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ತಯಾರು ಮಾಡಿ ಜಾಗ್ವಾರ್‌ ಎಂದು ನಾಮಕರಣ ಮಾಡಿದ್ದರು.

ಮಂಡ್ಯ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎತ್ತಿನ ಗಾಡಿ ಓಟ ಸ್ಪರ್ಧೆಗಳಲ್ಲಿ ಬೇರೆ ಎತ್ತಿನ ಸಹಾಯದಿಂದ ಭಾಗವಹಿಸುತ್ತಿದ್ದ ಜಾಗ್ವಾರ್‌ ಖ್ಯಾತಿಯ ಎರಡೂವರೆ ವರ್ಷದ ಹಳ್ಳಿಕಾರ್‌ ಎತ್ತು ಹಲವು ಬಹುಮಾನ ಪಡೆದಿತ್ತು. ನೆರೆಯ ತಮಿಳುನಾಡಿನಲ್ಲೂ ಓಟ ಸ್ಪರ್ಧೆಗಳಲ್ಲಿ ಭಾಗಿಯಾಗಿ ಗೆಲುವು ಸಾಧಿಸಿತ್ತು. ಆ ವೇಳೆ ಸಿರಿವಾಯ್‌ ತಂಬಿ ಕಣ್ಣಿಗೆ ಬಿದ್ದಿತ್ತು.

4000 ಕೋಟಿ ಮೌಲ್ಯದ ಅರಮನೆಯಲ್ಲಿದ್ದರೂ ಸ್ವಂತ ದುಡಿಮೆಗೆ ತರಕಾರಿ ಮಂಡಿ 

ಜಾಗ್ವಾರ್‌ ಖರೀದಿಗೆ ಮುಂದಾಗಿ ಮಾತುಕತೆ ನಡೆಸಿದ್ದ ಸಿರುವಯ್‌ ತಂಬಿ ಬುಧವಾರ ಶ್ರೀನಿವಾಸ ಅಗ್ರಹಾರಕ್ಕೆ ಬಂದು ಗ್ರಾಮಸ್ಥರ ಸಮ್ಮುಖದಲ್ಲಿ ಹಣ ಸಂದಾಯ ಮಾಡಿದರು.

ನವೀನ್‌ ಮತ್ತು ಸ್ನೇಹಿತರು ಸಿರಿವಾಯ್‌ ತಂಬಿಯನ್ನು ಸನ್ಮಾನಿಸಿ ಗೌರವಿಸಿದಲ್ಲದೇ, ಸಾಕಿ ಬೆಳೆಸಿದ್ದ ಜಾಗ್ವಾರ್‌ ಎತ್ತನ್ನು ಬೀಳ್ಕೊಡುವಾಗ ಪಟಾಕಿ ಸಿಡಿಸಿ, ಸಿಹಿಹಂಚುವ ಮೂಲಕ ಸ್ನೇಹಿತರ ಜೊತೆ ಸಂಭ್ರಮದಿಂದ ಕಳುಹಿಸಿಕೊಟ್ಟರು.

click me!