ಶಕ್ತಿ ಯೋಜನೆ ಎಫೆಕ್ಟ್ ಒಪ್ಪಂದದ ಮೇರೆಗೆ ಸಂಚಾರ ಮಾಡುವ ಸಾರಿಗೆ ನಿಗಮದ ಬಸ್ ಗಳ ದರ ಏರಿಕೆ ಮಾಡಿ ಕೆಎಸ್ ಆರ್‌ಟಿಸಿ ಆದೇಶ ಹೊರಡಿಸಿದೆ.
ಬೆಂಗಳೂರು (ಜು.27): ಶಕ್ತಿ ಯೋಜನೆ ಎಫೆಕ್ಟ್ ಒಪ್ಪಂದದ ಮೇರೆಗೆ ಸಂಚಾರ ಮಾಡುವ ಸಾರಿಗೆ ನಿಗಮದ ಬಸ್ ಗಳ ದರ ಏರಿಕೆ ಮಾಡಿ ಕೆಎಸ್ ಆರ್‌ಟಿಸಿ ಆದೇಶ ಹೊರಡಿಸಿದೆ. ಶಕ್ತಿ ಯೋಜನೆಯಿಂದ ನಿತ್ಯ ಓಡಾಟದ ಬಸ್ ಗಳ ಬೇಡಿಕೆ ಹೆಚ್ಚಾದ ಹಿನ್ನೆಲೆ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.
ಹೊಸ ಆದೇಶದ ಪ್ರಕಾರ ಮೈಸೂರು ವ್ಯಾಪ್ತಿಯಲ್ಲಿ ಗಂಟೆ ಆಧಾರದಲ್ಲಿ ವಾಹನಗಳನ್ನ ಒದಗಿಸುವ ವ್ಯವಸ್ಥೆಯನ್ನು ನಿಗಮ ಕೈ ಬಿಟ್ಟಿದೆ. ಕರ್ನಾಟಕ ಸಾರಿಗೆ , ರಾಜಹಂಸ ಎಕ್ಸಿಕ್ಯೂಟಿವ್, ರಾಜಹಂಸ ಸೇರಿದಂತೆ 7 ವಿವಿಧ ರೀತಿಯ ಒಪ್ಪಂದದ ಮೇರೆಗೆ ಸಂಚಾರ ಮಾಡುವ ಬಸ್ ಗಳ ದರ ಪರಿಷ್ಕರಣೆ ಮಾಡಲಾಗಿದೆ. ಪರಿಷ್ಕೃತ ದರ ಆಗಸ್ಟ್ ಒಂದನೇ ತಾರೀಖಿನಿಂದ ಜಾರಿಯಾಗಲಿದೆ. ಈ ಆದೇಶಕ್ಕೂ ಮುನ್ನ ಬುಕ್ಕಿಂಗ್ ಮಾಡಿರುವ ಒಪ್ಪಂದದ ಬಸ್ ಗಳಿಗೆ ಹಳೆಯ ದರ ಮುಂದುವರಿಕೆಯಾಗಲಿದೆ.
ಬೆಂಗಳೂರು: ಬೈಯ್ಯಪ್ಪನಹಳ್ಳಿ-ಕೆ.ಆರ್.ಪುರ ಪ್ರಾಯೋಗಿಕ ಸಂಚಾರ ಶುರು
ಪರಿಷ್ಕೃತ ದರ ಪಟ್ಟಿ
ವರ್ಗ: ಕೆಎಸ್ಆರ್ಟಿಸಿ ಸಾರಿಗೆ
ಆಸನಗಳ ಸಂಖ್ಯೆ 55/5749
ಕನಿಷ್ಠ ಕಿಮೀ ದಿನಕ್ಕೆ 350ರೂ
ಪ್ರತೀ ಕಿಲೋಮೀಟರ್
(ವಾರದ ಎಲ್ಲಾ ದಿನ)
ರಾಜ್ಯದೊಳಗೆ 47ರೂಪಾಯಿ
ಅಂತರ ರಾಜ್ಯ 50
ವರ್ಗ: ರಾಜಹಂಸ ಎಕ್ಸಿಕ್ಯೂಟಿವ್
ಆಸನಗಳ ಸಂಖ್ಯೆ 36
ಕನಿಷ್ಠ ಕಿಮೀ ದಿನಕ್ಕೆ 350
ವಾರದ ಎಲ್ಲಾ ದಿನ
ರಾಜ್ಯದೊಳಗೆ 48ರೂಪಾಯಿ
ಅಂತರ ರಾಜ್ಯ 53 ರೂಪಾಯಿ
ವರ್ಗ: ರಾಜಹಂಸ
ಆಸನಗಳ ಸಂಖ್ಯೆ 39
ಕನಿಷ್ಠ ಕಿಮೀ ದಿನಕ್ಕೆ 350
ವಾರದ ಎಲ್ಲಾ ದಿನ
ರಾಜ್ಯದೊಳಗೆ 51 ರೂಪಾಯಿ
ಅಂತರ ರಾಜ್ಯ55 ರೂಪಾಯಿ
ಲಾಕ್‌ಡೌನ್ ವೇಳೆ ಚಾಕೊಲೇಟ್ ಕಂಪನಿ ತೆರೆದು ಕೋಟ್ಯಧಿಪತಿಯಾದ
ವರ್ಗ: ಮೈಸೂರು ನಗರ ಸಾರಿಗೆ ಸೆಮಿ ಲೋಫ್ಲೋರ್
ಆಸನಗಳ ಸಂಖ್ಯೆ 42
ಕನಿಷ್ಠ ಕಿಮೀ ದಿನಕ್ಕೆ 300
ವಾರದ ಎಲ್ಲಾ ದಿನ
ರಾಜ್ಯದೊಳಗೆ 45 ರೂಪಾಯಿ
ಅಂತರ ರಾಜ್ಯ-
ವರ್ಗ: ಮಿಡಿ ಬಸ್
ಆಸನಗಳ ಸಂಖ್ಯೆ 30
ಕನಿಷ್ಠ ಕಿಮೀ ದಿನಕ್ಕೆ 300
ವಾರದ ಎಲ್ಲಾ ದಿನ
ರಾಜ್ಯದೊಳಗೆ 40 ರೂಪಾಯಿ
ಅಂತರ ರಾಜ್ಯ
ವರ್ಗ: ನಾನ್ ಎಸಿ ಸ್ಲೀಪರ್
ಆಸನಗಳ ಸಂಖ್ಯೆ 32
ಕನಿಷ್ಠ ಕಿಮೀ ದಿನಕ್ಕೆ 400
ವಾರದ ಎಲ್ಲಾ ದಿನ
ರಾಜ್ಯದೊಳಗೆ 55 ರೂಪಾಯಿ
ಅಂತರ ರಾಜ್ಯ60 ರೂಪಾಯಿ