ಅನಾಥಾಶ್ರಮ ಹೆಸರಲ್ಲಿ ತಾಲಿಬಾನ್ ಮಾದರಿ ಶಿಕ್ಷಣ ನೀಡ್ತಿರೋ ಆರೋಪ ; ಆ ಬಗ್ಗೆ ನನಗೆ ಗೊತ್ತಿಲ್ಲ ಎಂದ ಗೃಹಸಚಿವ! 

By Ravi JanekalFirst Published Nov 21, 2023, 2:27 PM IST
Highlights

ಅನಾಥಾಶ್ರಮ ಹೆಸರಲ್ಲಿ ಮಕ್ಕಳಿಗೆ ತಾಲಿಬಾನ್ ಮಾದರಿಯ ಶಿಕ್ಷಣ ನೀಡುತ್ತಿರುವ ಆರೋಪ ವಿಚಾರ ನನಗೆ ಆ ಬಗ್ಗೆ ಮಾಹಿತಿ ಇಲ್ಲ. ಅಲ್ಲಿ ನಡೆತ್ತಿರುವ ಶಿಕ್ಷಣ ಮಾದರಿಯ ಬಗ್ಗೆ ನನಗೆ ಗೊತ್ತಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ವಿಜಯಪುರ (ನ.21): ಅನಾಥಾಶ್ರಮ ಹೆಸರಲ್ಲಿ ಮಕ್ಕಳಿಗೆ ತಾಲಿಬಾನ್ ಮಾದರಿಯ ಶಿಕ್ಷಣ ನೀಡುತ್ತಿರುವ ಆರೋಪ ವಿಚಾರ ನನಗೆ ಆ ಬಗ್ಗೆ ಮಾಹಿತಿ ಇಲ್ಲ. ಅಲ್ಲಿ ನಡೆತ್ತಿರುವ ಶಿಕ್ಷಣ ಮಾದರಿಯ ಬಗ್ಗೆ ನನಗೆ ಗೊತ್ತಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಅನಾಥಾಶ್ರಮಗಳಲ್ಲಿ ಮೂಲಭೂತ ಸೌಕರ್ಯ ಇಲ್ಲದೇ ಹೋದರೆ ಕ್ರಮ ಜರುಗಿಸುತ್ತೇವೆ. ನಡೆಸುವವರು ಖಾಸಗಿಯವರಾಗಿದ್ರೆ ಅವರ ಮೇಲೆ ಕ್ರಮ ಜರುಗಿಸುತ್ತೇವೆ. ಸರ್ಕಾರದ್ದಾದ್ರೆ ಎಲ್ಲಿ ಲೋಪ ಇದೆ ಸಂಬಂಧ ಪಟ್ಟ ಇಲಾಖೆಯವರಿಗೆ ತಿಳಿಸ್ತೇವೆ. ಕ್ರಮ ಜರುಗಿಸ್ತೇವೆ ಸಮಸ್ಯೆ ಏನಿಲ್ಲ. ಎಂದರು. ಇದೇ ವೇಳೆ ಅನಾಥಾಶ್ರಮ ಹೆಸರಿನಲ್ಲಿ ತಾಲಿಬಾನ್ ಮಾದರಿ ಶಿಕ್ಷಣ ನಡೆಸುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಗೊತ್ತಿಲ್ಲ ಎಂದುತ್ತರಿಸಿದದರು. ತಾಲಿಬಾನ್ ಮಾದರಿ ಶಿಕ್ಷಣ ಎಂದೊಡನೆ ನನಗೆ ಆ ಬಗ್ಗೆ ಮಾಹಿತಿ ಇಲ್ಲ ಎಂದ ಗೃಹಸಚಿವರು.

ಸುಳ್ಳುಸುದ್ದಿ, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲು ಸಚಿವ ಪರಮೇಶ್ವರ್ ಸೂಚನೆ

ಇನ್ನು ರಾಯಚೂರು ವಿದ್ಯುತ್ ಘಟಕದಲ್ಲಿ ಕಲ್ಲಿದಲು ಕಳ್ಳತನ ವಿಚಾರ ಸಂಬಂಧ ಕೇಳಿದ ಪ್ರಶ್ನೆಗೆ, ಅದರ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಅದು ರಾಜ್ಯಕ್ಕೆ ಸಂಬಂಧ ಪಟ್ಟ ಘಟಕವಾಗಿದೆ. ಸರಕಾರವಾಗಿ ಅದರ ಬಗ್ಗೆ ತನಿಖೆ ನಡೆಸುತ್ತೇವೆ. ಸಂಬಂಧ ಪಟ್ಟ ಅಧಿಕಾರಿಗಳ ಹತ್ತಿರ ಮಾಹಿತಿ ಪಡೆಯುತ್ತೇನೆ. ಹೇಗೆ ಕಲ್ಲಿದಲು ಕಳ್ಳತನವಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದರು.

ದಾವಣಗೆರೆಯಲ್ಲಿ ಸಚಿವರ ಆಪ್ತನಿಂದ ಪೊಲೀಸ್ ಅಧಿಕಾರಿಗೆ ಆವಾಜ್ ಹಾಕಿರುವ ವಿಚಾರ ಬಗ್ಗೆ ಕೇಳಿದಾಗಲೂ ಆ ಘಟನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಘಟನೆ ಯಾವಾಗ ಆಗಿದೆ ಎಂದು ಈ ಬಗ್ಗೆ ಅಧಿಕಾರಿಗಳನ್ನ ವಿಚಾರಿಸಿ ಮಾಹಿತಿ ಪಡೆಯೋದಾಗಿ ಹೇಳಿದ ಗೃಹಸಚಿವರು.

ಶಾಂತಿ ಕದಡಬೇಡಿ: ಬಜರಂಗದಳಕ್ಕೆ ಸಚಿವ ಪರಮೇಶ್ವರ್‌ ಎಚ್ಚರಿಕೆ

click me!