ಅನ್ನಭಾಗ್ಯ ಯೋಜನೆಗೆ ರಾಜ್ಯ ಸರ್ಕಾರದ ಕೊಡುಗೆ ಶೂನ್ಯ: ಪಡಿತರ ಬಿಲ್‌ನಲ್ಲಿ ಬಯಲಾಯ್ತು ಗ್ಯಾರಂಟಿ ನಾಟಕ!

By Sathish Kumar KH  |  First Published Nov 21, 2023, 1:14 PM IST

ರಾಜ್ಯದ ಪಡಿತರ ಕಾರ್ಡ್‌ದಾರರಿಗೆ ವಿತರಿಸುವ ಅಕ್ಕಿಯಲ್ಲಿ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಪಾಲು ಶೂನ್ಯವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ರಶೀದಿಯಲ್ಲಿ ನಮೂದಿಸಿದೆ.


ಕೋಲಾರ (ನ.21): ರಾಜ್ಯ ಸರ್ಕಾರದಿಂದ ಕಾಂಗ್ರೆಸ್‌ 2ನೇ ಗ್ಯಾರಂಟಿಯಾಗಿ ಜಾರಿಗೊಳಿಸಲಾದ ಅನ್ನಭಾಗ್ಯ ಯೋಜನೆಯಲ್ಲಿ (ಪಡಿತರ ಚೀಟಿ ಎಲ್ಲ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ ವಿತರಣೆ) ಕೇಂದ್ರ ಸರ್ಕಾರದ ಪಾಲು ಎಷ್ಟು ಹಾಗೂ ರಾಜ್ಯ ಸರ್ಕಾರದ ಪಾಲು ಎಷ್ಟೆಂಬುದನ್ನು ಕೇಂದ್ರ ಸರ್ಕಾರ ಬಟಾಬಯಲು ಮಾಡಿದೆ. ಪರಿತರವನ್ನು ಪಡೆಯುವ ಎಲ್ಲರಿಗೂ ಈಗ ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿರುವ 5 ಕೆ.ಜಿ. ಅಕ್ಕಿಯನ್ನು ಮಾತ್ರ ವಿತರಣೆ ಮಾಡಲಾಗುತ್ತಿದ್ದು, ರಾಜ್ಯ ಸರ್ಕಾರದ ಪಾಲು ಶೂನ್ಯ ಎಂಬುದನ್ನು ರಶೀದಿಯಲ್ಲಿ ನಮೂದಿಸಿ ನೀಡಲಾಗುತ್ತಿದೆ.

ಹೌದು, ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ಮಹಾನಾಟಕ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಲೇ ಬಂದಿದ್ದರು. ಆದರೆ, ಅದಕ್ಕೆ ಸಾಕ್ಷಿ ಎಂಬಂತೆ ಈಗ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಪಡಿತರ ಧಾನ್ಯಗಳಾದ ಅಕ್ಕಿ, ರಾಗಿ, ಗೋಧಿ ಅಥವಾ ಜೋಳದ ಪ್ರಮಾಣ ಎಷ್ಟೆಂಬುದನ್ನು ಸರ್ಕಾರದಿಂದಲೇ ರಶೀದಿ ಮೂಲಕ ಪ್ರಿಂಟ್‌ ಮಾಡಿ ಕೊಡಲಾಗುತ್ತಿದೆ. ಇನ್ನು ರಶೀದಿಯಲ್ಲಿ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಪಾಲು ಶೂನ್ಯ ಎಂದು ರಶೀದಿಯಲ್ಲಿ ನಮೂದು ಮಾಡಿಕೊಡಲಾಗುತ್ತಿದೆ. ಹಾಗಾದರೆ, ಚುನಾವಣೆಯಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದು 6 ತಿಂಗಳಾದರೂ ಯೋಜನೆ ಜಾರಿಗೆ ತಂದಿಲ್ಲವೇ ಎಂಬ ಅನುಮಾನ ಮೂಡುವಂತಾಗಿದೆ.

Tap to resize

Latest Videos

ಕರ್ನಾಟಕಕ್ಕೆ ಪ್ರತ್ಯೇಕ ವಿಮಾನಯಾನ, ರೈಲ್ವೆ ಸಂಸ್ಥೆ ರಚನೆಗೆ ಮನವಿ: ಕಲರ್‌ ಡಿಸೈನ್‌ ಮಾಡಿಕೊಟ್ಟ ಗುತ್ತೇದಾರ್!

ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದಿಂದ ಟಕ್ಕರ್​ ನೀಡಿದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇಂದ್ರ ಸರ್ಕಾರದ ಹೊಸ ಪ್ಲಾನ್​ ಶುರುಮಾಡಿದೆ. ರಾಜ್ಯದಲ್ಲಿ ಗ್ರಾಹಕರಿಗೆ ಪಡಿತರ ವಿತರಣೆ ವೇಳೆ ಹೊಸ ಬಿಲ್‌​ ಸಿಸ್ಟಮ್​ ಜಾರಿ ಮಾಡಿದೆ. ಅದರಲ್ಲಿ, ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಹೊಸ ಪ್ರಿಂಟೆಡ್​ ಬಿಲ್​ ನೀಡಲಾಗುತ್ತಿದೆ. ಈ ಬಿಲ್‌ನಲ್ಲಿ ಸರ್ಕಾರದಿಂದ ವಿತರಣೆ ಮಾಡುವ ಅಕ್ಕಿಯ ವಿವರ, ಕೇಂದ್ರದ  ಅನುದಾನದ ವಿವರ ಮುದ್ರಣ ಮಾಡಲಾಗುತ್ತಿದೆ.

ಪೊಲೀಸ್ 112 ವಾಹನವನ್ನೇ ಓಡಿಸಿಕೊಂಡು ಪರಾರಿಯಾದ ಆರೋಪಿ!

ಜನರಿಗೆ ನೀಡುವ ಪಡಿತರ ಅಕ್ಕಿ ಕೇಂದ್ರ ಸರ್ಕಾರದ ಅನುದಾನ ಎಂದು ಮುದ್ರಣ ಮಾಡಲಾಗಿದೆ. ಅಕ್ಕಿ ವಿತರಣೆಯಲ್ಲಿ ರಾಜ್ಯ ಸರ್ಕಾರದ ಅನುದಾನದ ಪಾಲು ಶೂನ್ಯವಾಗಿದೆ. ರಾಜ್ಯ ಸರ್ಕಾರದ ಪಾಲಿನ ಅನುದಾನ ಗ್ರಾಹಕರ ಖಾತೆಗೆ ನೇರವಾಗಿ ಹಣದ ಮೂಲಕ ಸಂದಾಯವಾಗುತ್ತಿದೆ. ರಾಜ್ಯ ಸರ್ಕಾರದ ಉಚಿತ ಅನ್ನಭಾಗ್ಯ ಯೋಜನೆಯ ಅಸಲಿಯತ್ತನ್ನು ಜನರಿಗೆ ತಿಳಿಸಲು ಕೇಂದ್ರದ ಪ್ಲಾನ್​ ಮಾಡಿಕೊಂಡಿದೆ. ಸದ್ಯ ಕೋಲಾರ ಸೇರಿದಂತೆ ರಾಜ್ಯಾಧ್ಯಂತ ಮುಂದಿನ ತಿಂಗಳಿನಿಂದ ಅಧಿಕೃತವಾಗಿ ಬಿಲ್​ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಈ ಮೊದಲು ಪಡಿತರ ವಿತರಣೆ ವೇಳೆಯಲ್ಲಿ ಕೈಯಿಂದ ಬರೆದ ಬಿಲ್ ವಿತರಣೆ ಮಾಡಲಾಗುತ್ತಿತ್ತು. ಈಗ ಹೊಸ ಬಿಲ್​ ಸಿಸ್ಟಮ್‌ನಿಂದಾಗಿ ಅಕ್ಕಿ ವಿತರಣೆಯ ಅಕ್ರಮಕ್ಕೂ ಕೂಡಾ ಕಡಿವಾಣ ಹಾಕಿದಂತಾಗಲಿದೆ. ಆದರೆ, ಲೋಕಸಭಾ ಚುನಾವಣೆಗೂ ಮುನ್ನ ಹೊಸ ತಂತ್ರ ಮಾಡಿರುವುದು ಬಿಜೆಪಿಗೆ ಲಾಭವಾಗಲಿದೆ.

click me!