Naveen ಸಾವಿಗೆ ನೀಟ್‌ ಹೆಸರಲ್ಲಿ ಕನ್ನಡಿಗರ ಹಕ್ಕು ಕಿತ್ತಿದ್ದೇ ಕಾರಣ: ನಾರಾಯಣಗೌಡ

Kannadaprabha News   | Asianet News
Published : Mar 03, 2022, 07:45 AM IST
Naveen ಸಾವಿಗೆ ನೀಟ್‌ ಹೆಸರಲ್ಲಿ ಕನ್ನಡಿಗರ ಹಕ್ಕು ಕಿತ್ತಿದ್ದೇ ಕಾರಣ: ನಾರಾಯಣಗೌಡ

ಸಾರಾಂಶ

*  ಸರ್ಕಾರದ ವಿರುದ್ಧ ಕರವೇ ಅಧ್ಯಕ್ಷ ನಾರಾಯಣಗೌಡ ಕಿಡಿ *  ಈ ಸಾವಿನ ಹೊಣೆ ಹೊರುವವರು ಯಾರು? *  ನವೀನ್‌ ಸಾವಿಗೆ ಭಾರತೀಯ ವೈದ್ಯಕೀಯ ಶಿಕ್ಷಣ ಕಾರಣ

ಬೆಂಗಳೂರು(ಮಾ.03): ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ದೇಶದ ಬೇರೆ ರಾಜ್ಯಗಳಿಗಿಂತ ಕರ್ನಾಟಕ(Karnataka) ಸಾಧನೆ ಮಾಡಿದೆ. 69 ಮೆಡಿಕಲ್‌ ಕಾಲೇಜುಗಳಿದ್ದು(Medical College) ರಾಜ್ಯ ಮೊದಲ ಸ್ಥಾನದಲ್ಲಿದೆ. ಆದರೆ ಕನ್ನಡದ ಮಕ್ಕಳಿಗೇ ಇಲ್ಲಿ ಮೆಡಿಕಲ್‌ ಸೀಟು ಸಿಗುವುದಿಲ್ಲ. ನೀಟ್‌ ಹೆಸರಿನಲ್ಲಿ ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ. ಉಕ್ರೇನ್‌ನಲ್ಲಿ ರಷ್ಯಾ ದಾಳಿಗೆ ನವೀನ್‌ ಬಲಿಯಾಗಿದ್ದಾನೆ. ಈ ಸಾವಿನ ಹೊಣೆ ಹೊರುವವರು ಯಾರು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ(TA Narayana Gowda) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಒಂದೆಡೆ ಸೀಟ್‌ಗೆ ಕೋಟಿಗಟ್ಟಲೆ ಹಣ ಬಾಚುವ ಕ್ಯಾಪಿಟೇಷನ್‌ ಲಾಬಿ, ಮತ್ತೊಂದೆಡೆ ಕನ್ನಡಿಗರ(Kannadigas) ಹಕ್ಕುಗಳನ್ನು ಕಸಿಯುತ್ತಿರುವ ನೀಟ್‌(NEET) ಎಂಬ ಷಡ್ಯಂತ್ರ. ಆದರೆ ಬಲಿಯಾಗುತ್ತಿರುವುದು ಮಾತ್ರ ಕನ್ನಡಿಗರು. 21 ಕೋಟಿ ಜನಸಂಖ್ಯೆಯಿದ್ದರೂ ಉತ್ತರ ಪ್ರದೇಶದಲ್ಲಿ ಕರ್ನಾಟಕದಲ್ಲಿ ಇರುವಷ್ಟು ಮೆಡಿಕಲ್‌ ಕಾಲೇಜುಗಳು ಇಲ್ಲ. ನೀಟ್‌ ಜಾರಿಗೆ ಬಂದಿದ್ದು ಈ ಕಾರಣಕ್ಕಾಗಿಯೇ. ನಮ್ಮಲ್ಲಿ ಉತ್ತರ ಭಾರತೀಯರನ್ನು(Indians) ತುಂಬುವ ಯೋಜನೆಯೇ ನೀಟ್‌ ಎಂದು ಆರೋಪಿಸಿದ್ದಾರೆ.

Russia-Ukraine War: ಉಕ್ರೇನ್‌ ತೊರೆಯಲು ಸಿಕ್ಕ ಸಿಕ್ಕ ವಾಹನ ಹತ್ತುತ್ತಿದ್ದಾರೆ ಕನ್ನಡಿಗರು..!

75 ವರ್ಷಗಳಿಂದ ಕನ್ನಡದ ನೆಲದಲ್ಲಿ, ಕನ್ನಡಿಗರ ದುಡ್ಡಿನಲ್ಲಿ, ಕನ್ನಡಿಗರ ಪರಿಶ್ರಮದಿಂದ 60 ಕ್ಕೂ ಅಧಿಕ ಮೆಡಿಕಲ್‌ ಕಾಲೇಜುಗಳು ಸ್ಥಾಪನೆಯಾಗಿವೆ. ಆದರೆ ನೀಟ್‌ನಿಂದಾಗಿ ಮೊದಲಿನ ಹಾಗೆ ಕನ್ನಡಿಗರಿಗೆ ಪ್ರವೇಶ ಸುಲಭವಿಲ್ಲ. ಇದರಿಂದಾಗಿ ಮೆಡಿಕಲ್ ಸೀಟು ಸಿಗದೆ ಈ ನೆಲದ ಹಲವು ಪ್ರತಿಭಾವಂತ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಕೆಟ್ಟವ್ಯವಸ್ಥೆ ನಮಗೆ ಬೇಕೆ. ಇದನ್ನೆಲ್ಲ ನೋಡಿಕೊಂಡು ನಾವು ಸುಮ್ಮನಿರಬೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ನೀಟ್‌ ವಿಷಯದಲ್ಲಿ ತಮಿಳುನಾಡು(Tamil Nadu) ಮೊದಲಿನಿಂದಲೂ ಧ್ವನಿ ಎತ್ತುತ್ತ ಬಂದಿದೆ. ನಮ್ಮ ಕರ್ನಾಟಕದ ರಾಜಕಾರಣಿಗಳಿಗೆ ಇದರ ಅರಿವೂ ಇಲ್ಲ. ಕನ್ನಡಿಗರ ಹಿತಾಸಕ್ತಿ ಕಾಪಾಡಬೇಕಾದ ರಾಜಕೀಯ ಪಕ್ಷಗಳು ಕನ್ನಡಿಗರ ಪಾಲಿಗೆ ಸತ್ತು ಹೋಗಿವೆ. ಇದರ ಪರಿಣಾಮವಾಗಿ ಕನ್ನಡದ ಮಕ್ಕಳು ನಲುಗುವಂತಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ನವೀನ್‌ ಸಾವಿಗೆ ಭಾರತೀಯ ವೈದ್ಯಕೀಯ ಶಿಕ್ಷಣ ಕಾರಣ

ಹಗರಿಬೊಮ್ಮನಹಳ್ಳಿ(Hagaribommanahalli): ವಿದ್ಯಾರ್ಥಿ ನವೀನ್‌ ಸಾವಿಗೆ ಭಾರತದ ವೈದ್ಯಕೀಯ ಶಿಕ್ಷಣವೇ(Medical Education in India) ಕಾರಣ ಎಂದು ವಿಜಯನಗರ ಜಿಲ್ಲಾ ಎಸ್‌ಎಫ್‌ಐ(SFI) ಮುಖಂಡ ಜಯಸೂರ್ಯ ಆರೋಪಿಸಿದರು.

ಉಕ್ರೇನ್‌ನಲ್ಲಿ(Ukraine) ರಷ್ಯಾ(Russia) ಸೇನೆಯ ದಾಳಿಗೆ ಹಾವೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್‌(Naveen) ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ. ನವೀನ್‌ ಸಾವಿಗೆ ಯುದ್ಧದಾಹಿ ರಷ್ಯಾಸೇನೆ ಎಷ್ಟುಹೊಣೆಯೋ, ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡು ಸಕಾಲದಲ್ಲಿ ನೆರವಾಗದೆ ನಿರ್ಲಕ್ಷಿಸಿದ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಅಷ್ಟೇ ಹೊಣೆಯಾಗಿದೆ.

Russia-Ukraine War: ಭಾರತಕ್ಕೆ ಜೀವಂತವಾಗಿ ಮರಳುವ ಆಸೆಯನ್ನೇ ಬಿಟ್ಟಿದ್ದೇವೆ: ಕನ್ನಡಿಗನ ಹತಾಶ ಸ್ಥಿತಿ..!

ಎರಡು ರಾಷ್ಟ್ರಗಳು ಶಾಂತಿಯುತ ಮಾತುಕತೆಗೆ ಮುಂದಾಗಿ ಯುದ್ಧ ನಿಲ್ಲಿಸಬೇಕು. ಭಾರತದ ಪ್ರಧಾನಿ ಮತ್ತು ವಿದೇಶಾಂಗ ಇಲಾಖೆ ಅಂತಾರಾಷ್ಟ್ರೀಯ ಸಂಬಂಧ ಬಳಸಿಕೊಂಡು ಯುದ್ಧದಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು, ನಾಗರಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಪ್ರಯತ್ನಿಸಬೇಕು. ನವೀನ್‌ ಸಾವಿಗೆ ಕಾರಣವಾಗಿರುವ ಭಾರತದ ವ್ಯೆದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿ ಪ್ರಯತ್ನಿಸಬೇಕು. ನಮ್ಮ ದೇಶ ಬಿಟ್ಟು ವೈದ್ಯಕೀಯ ಶಿಕ್ಷಣಕ್ಕಾಗಿ ಹತ್ತಾರು ಸಾವಿರ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ಗೆ ಹೋಗಲು ನಿಜವಾದ ಕಾರಣವಾಗಿರುವ ಅಂಶಗಳನ್ನು ಭಾರತ ಸರ್ಕಾರ ಮನಗಾಣಬೇಕು. ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಅತಿಯಾದ ಖಾಸಗೀಕರಣ, ಕೇಂದ್ರಿಕರಣ ಹಾಗೂ ನೀಟ್‌ ಪ್ರವೇಶ ಪರೀಕ್ಷೆಯ ದುಷ್ಪರಿಣಾಮವಾಗಿ ಭಾರತದಲ್ಲಿ ಪ್ರತಿ ವರ್ಷ ಸುಮಾರು 1.20 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯುತ್ತಿದ್ದು, ಅದರಲ್ಲಿ 8 ಸಾವಿರ ಮಂದಿಗೆ ಮಾತ್ರ ಸರ್ಕಾರಿ ಸೀಟುಗಳು.

ಇನ್ನು ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳು ಕೋಚಿಂಗ್‌ ಪಡೆಯಲು ಹಣವಿಲ್ಲದೆ ವೈದ್ಯಕೀಯ ವಿದ್ಯಾಭ್ಯಾಸದಿಂದ ದೂರ ಉಳಿಯುವಂತಾಗಿದೆ. ಕೋಟ್ಯಂತರ ರೂಪಾಯಿ ದುಬಾರಿ ಶುಲ್ಕ ಪಾವತಿ ಮಾಡಿ ವೈದ್ಯಕೀಯ ಶಿಕ್ಷಣ ಪಡೆಯುವುದು ಕಷ್ಟಸಾಧ್ಯವಾಗಿದೆ. ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಕಲಿಯಲು ಸಾಲ ಕೂಡ ಸಮರ್ಪಕವಾಗಿ ಸಿಗುವುದಿಲ್ಲ. ಉಕ್ರೇನ್‌ನಲ್ಲಿ ಶೈಕ್ಷಣಿಕ ಸಾಲ ಸೌಲಭ್ಯ ಸಿಗುತ್ತದೆ. ಸರ್ಕಾರ ಕೂಡಲೇ ನೀಟ್‌ ಪರೀಕ್ಷೆ ರದ್ದುಗೊಳಿಸಿ ಏಕರೂಪದ ಕೇಂದ್ರೀಯ ಶಾಸನ ಜಾರಿಗೆ ತರಲು ಎಸ್‌ಎಫ್‌ಐ ಒತ್ತಾಯಿಸುತ್ತಿದೆ. ವಿಜ್ಞಾನ ವಿಭಾಗದಲ್ಲಿ ಪಿಯುಸಿ ಓದಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ವಿದ್ಯಾಭ್ಯಾಸ ಕನಸು ದೊಡ್ಡದಾಗಿರುತ್ತದೆ. ದೇಶದ ಪ್ರಧಾನಿ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕನಿಷ್ಟಜಿಲ್ಲೆಗೊಂದು ಮೆಡಿಕಲ್‌ ಕಾಲೇಜುಗಳನ್ನು ನಿರ್ಮಿಸಿಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಸ್‌ಎಫ್‌ಐ ತಾಲೂಕು ಸಂಚಾಲಕ ಅಬ್ದುಲ್‌ ಸುಭಾನ್‌ ಇದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!