ಬೆಂಗ್ಳೂರು-ತುಮಕೂರು, ಬೆಂಗ್ಳೂರು-ಮೈಸೂರು ಚತುಷ್ಪಥ ರೈಲು 742 ಕಿ.ಮೀ. ಮಾರ್ಗ ಅಂತಿಮ ಸ್ಥಳ ಸಮೀಕ್ಷೆಗೆ ಸಮ್ಮತಿ

By Kannadaprabha News  |  First Published Feb 11, 2024, 1:23 PM IST

ಬೆಂಗ್ಳೂರು-ತುಮಕೂರು, ಬೆಂಗ್ಳೂರು-ಮೈಸೂರು ನಡುವೆ ಚತುಷ್ಪಥ. ಚಿಕ್ಕಬಾಣಾವರ-ಹಾಸನ ದ್ವಿಪಥ ರೈಲು ಮಾರ್ಗ ಸಮೀಕ್ಷೆಗೆ ಒಪ್ಪಿಗೆ. ರಾಜ್ಯಸಭೆಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮಾಹಿತಿ.


ನವದೆಹಲಿ (ಫೆ.11): ಬೆಂಗಳೂರು, ಸುತ್ತಮುತ್ತಲ ನಗರ ಪ್ರದೇಶಗಳ ನಡುವೆ ತಡೆರಹಿತ ರೈಲು ಸೇವೆಗಾಗಿ 742 ಕಿ.ಮೀ. ಹೊಸ ರೈಲು ಮಾರ್ಗ ನಿರ್ಮಿಸಲು ಅಂತಿಮ ಸ್ಥಳ ಸಮೀಕ್ಷೆಗೆ ಮಂಜೂರಾತಿ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಲೆಹರ್ ಸಿಂಗ್‌ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನ ಸುತ್ತಮುತ್ತಲ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ ಸರ್ಕ್ಯುಲರ್‌ ರೈಲ್ವೆ ಯೋಜನೆ ಕಾರ್ಯಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ನಿಡವಂದ–ದೊಡ್ಡಬಳ್ಳಾಪುರ–ದೇವನಹಳ್ಳಿ–ಮಾಲೂರು–ಹೀಲಲಿಗೆ–ಸೋಲೂರು–ನಿಡವಂದ ನಿಲ್ದಾಣಗಳನ್ನು ಸಂಪರ್ಕಿಸುವ ವೃತ್ತರೈಲು ಸಂಪರ್ಕ ಜಾಲ 287 ಕಿ.ಮೀ. ಇರಲಿದೆ. ಬೆಂಗಳೂರು-ತುಮಕೂರು ನಡುವೆ ಚತುಷ್ಪಥ (70 ಕಿ.ಮೀ), ಚಿಕ್ಕಬಾಣಾವರ-ಹಾಸನ (180 ಕಿ.ಮೀ) ನಡುವೆ ದ್ವಿಪಥ, ಬೆಂಗಳೂರು-ಮೈಸೂರು ನಡುವೆ ಚತುಷ್ಪಥ (135 ಕಿ.ಮೀ), ಬಂಗಾರಪೇಟೆ-ಜೋಲಾರ್‌ಪೇಟೆ (70 ಕಿ.ಮೀ) ನಡುವೆ ಚತುಷ್ಪಥ ರೈಲು ಮಾರ್ಗಕ್ಕೆ ಅಂತಿಮ ಸ್ಥಳ ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಲಾಗಿದೆ.

ಅಮಿತ್ ಶಾ ರಾಜ್ಯಕ್ಕೆ ಆಗಮನ ವೇಳೆ ವಿಮಾನ ನಿಲ್ದಾಣದಲ್ಲಿ ಕಿತ್ತಾಡಿಕೊಂ ...

Tap to resize

Latest Videos

undefined

ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್) ಅನುಷ್ಠಾನಗೊಳಿಸುತ್ತಿದೆ. 148 ಕಿ.ಮೀ. ಉದ್ದದ ಈ ಯೋಜನೆಗೆ ಕೇಂದ್ರ ಸಂಪುಟ 2020ರಲ್ಲಿ ಅನುಮೋದನೆ ನೀಡಿದೆ.

ಈ ಯೋಜನೆ ನಾಲ್ಕು ಕಾರಿಡಾರ್‌ಗಳನ್ನು ಒಳಗೊಂಡಿದೆ. ಯೋಜನೆಯು ಕಾಲಮಿತಿಯೊಳಗೆ ಪೂರ್ಣಗೊಳ್ಳಲು ರಾಜ್ಯ ಸರ್ಕಾರದಿಂದ ತ್ವರಿತ ಭೂಸ್ವಾಧೀನ, ಅರಣ್ಯಭೂಮಿ ಬಳಕೆಗೆ ಅರಣ್ಯ ಇಲಾಖೆಯಿಂದ ಒಪ್ಪಿಗೆ, ಯೋಜನಾ ವೆಚ್ಚ ಹಂಚಿಕೆ ಮತ್ತಿತರ ಅಂಶಗಳನ್ನು ಒಳಗೊಂಡಿರುತ್ತದೆ ಎಂದರು.

ಬೆಂಗ್ಳೂರು ರೈಲ್ವೆ ಮಾರ್ಗದಲ್ಲಿ ಸ್ವಯಂ ಚಾಲಿತ ಸಿಗ್ನಲಿಂಗ್‌ ಅಳವಡಿಕೆಗೆ ಸಿದ್ಧತೆ:
ಅಪಘಾತ ತಡೆ, ಸುಗಮ ರೈಲ್ವೆ ಸಂಚಾರಕ್ಕಾಗಿ ಬೆಂಗಳೂರು ಹಾಗೂ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಆರು ಯೋಜನೆಗಳ ಮೂಲಕ ಒಟ್ಟು 639.05 ಕಿ.ಮೀ. ರೈಲ್ವೆ ಮಾರ್ಗದಲ್ಲಿ ಆಟೋಮ್ಯಾಟಿಕ್‌ ಸಿಗ್ನಲಿಂಗ್‌ ಸಿಸ್ಟಂಅನ್ನು ರೂಪಿಸಿಕೊಳ್ಳಲು ರೈಲ್ವೆ ಮಂಡಳಿಯು ₹874.12 ಕೋಟಿ ವೆಚ್ಚದ ಕಾಮಗಾರಿಗೆ ಮಂಜೂರಾತಿ ನೀಡಿದೆ.

ಎಸಿ ರೈಲಿನಲ್ಲಿ ಕೊಳಕು ಬೆಡ್ ಶೀಟ್ ಸಿಕ್ಕಿದ್ಯಾ? ಟೆನ್ಷನ್ ಬೇಡ.. ಹೀಗೆ ಬದಲಾಯಿಸಿ

ಈ ಬಗ್ಗೆ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದು, ಬೆಂಗಳೂರು ಹಾಗೂ ಮೈಸೂರಿನ ಮಾರ್ಗದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲುಗಳ ಸುಗಮ ಸಂಚಾರಕ್ಕಾಗಿ ಆಟೋಮ್ಯಾಟಿಕ್‌ ಸಿಗ್ನಲಿಂಗ್‌ ಸಿಸ್ಟಂ ಅನುಷ್ಠಾನ ಮಾಡಲಾಗುವುದು. ಇದರಿಂದ ಚೆನ್ನೈ, ಮೈಸೂರು, ಹುಬ್ಬಳ್ಳಿ ಮತ್ತು ಹೈದರಾಬಾದ್ ಕಡೆಗೆ ರೈಲುಗಳ ಸಂಚಾರ ಇನ್ನಷ್ಟು ಸುಲಲಿತವಾಗಲಿದೆ. ರೈಲ್ವೆಯ ಮೂಲಸೌಕರ್ಯ ಹೆಚ್ಚಿಸುವ ಮತ್ತು ಆಧುನೀಕರಣಗೊಳಿಸುವ ಹೆಜ್ಜೆಯಾಗಿ ಇದನ್ನು ರೂಪಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಯಾವ್ಯಾವ ಮಾರ್ಗ: ಬೆಂಗಳೂರು ಸಿಟಿ- ಯಶವಂತಪುರ- ಯಲಹಂಕ (17.75 ಕಿಮೀ), ಯಶವಂತಪುರ- ಅರಸಿಕೆರೆ (160.65 ಕಿಮೀ), ಲೊಟ್ಟೆಗೊಲ್ಲನಹಳ್ಳಿ- ಹೊಸೂರು (63.6 ಕಿಮೀ), ವೈಟ್‌ಫೀಲ್ಡ್‌- ಜೋಲಾರಪೇಟೆ (119 ಕಿಮೀ), ಚನ್ನಸಂದ್ರ ಮಾರ್ಗವಾಗಿ ಬೈಯಪ್ಪನಹಳ್ಳಿ-ಪೆನುಕೊಂಡ (139.8 ಕಿಮೀ) ಹಾಗೂ ಬೆಂಗಳೂರು ಸಿಟಿ- ಮೈಸೂರು (138 .25 ಕಿಮೀ) ಮಾರ್ಗದಲ್ಲಿ ಆಟೋಮ್ಯಾಟಿಕ್‌ ಸಿಗ್ನಲಿಂಗ್‌ ಸಿಸ್ಟಂ ರೂಪಿಸಲಾಗುವುದು ಎಂದು ನೈಋತ್ಯ ರೈಲ್ವೇ ಮಾಹಿತಿ ನೀಡಿದೆ.

ಪ್ರಯೋಜನವೇನು?: ಆಟೋಮ್ಯಾಟಿಕ್‌ ಸಿಗ್ನಲಿಂಗ್‌ ಸಿಸ್ಟಂನಿಂದ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ರೈಲ್ವೆ ನಿಲ್ದಾಣ, ಟ್ರ್ಯಾಕ್‌ಗಳಲ್ಲಿ ರೈಲುಗಳು ನಿಂತಿರುವ, ತೆರಳಿರುವ ಪಕ್ಕಾ ಮಾಹಿತಿ ಕಮಾಂಡ್‌ ಸೆಂಟರ್‌ಗೆ ಸಿಗಲಿದೆ. ಪರಿಣಾಮ ರೈಲುಗಳ ವಿಳಂಬ ಸಂಚಾರ ನಿಯಂತ್ರಿಸಬಹುದು. ಮುಖ್ಯವಾಗಿ ಸುರಕ್ಷತೆ ದೃಷ್ಟಿಯಿಂದ ಇದು ಹೆಚ್ಚು ಪ್ರಯೋಜನಕಾರಿಯಾಗಿದ್ದು, ರೈಲ್ವೆ ಅಪಘಾತ ತಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ.

click me!