ರಾಜ್ಯ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡುವುದು ಬಿಡಬೇಕು ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ತಾಕೀತು ಮಾಡಿದರು. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ಹಣ ದುರುಪಯೋಗ ಆಗದಂತೆ ರಾಜ್ಯ ಸರ್ಕಾರ SNA ಖಾತೆ ತೆರೆಯುವಂತೆ ನಿಯಮ ಇದೆ. ಆರ್ಥಿಕ ಇಲಾಖೆ ಈ ನಿಯಮ ಮಾಡಿದೆ. ಆದರೆ ರಾಜ್ಯ ಸರ್ಕಾರ ಈವರೆಗೆ ಖಾತೆ ತೆರೆದಿಲ್ಲ ಎಂದರು.
ಚಿತ್ರದುರ್ಗ (ಫೆ.11): ರಾಜ್ಯ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡುವುದು ಬಿಡಬೇಕು ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ತಾಕೀತು ಮಾಡಿದರು.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ಹಣ ದುರುಪಯೋಗ ಆಗದಂತೆ ರಾಜ್ಯ ಸರ್ಕಾರ SNA ಖಾತೆ ತೆರೆಯುವಂತೆ ನಿಯಮ ಇದೆ. ಆರ್ಥಿಕ ಇಲಾಖೆ ಈ ನಿಯಮ ಮಾಡಿದೆ. ಆದರೆ ರಾಜ್ಯ ಸರ್ಕಾರ ಈವರೆಗೆ ಖಾತೆ ತೆರೆದಿಲ್ಲ. ಆರ್ಥಿಕ ಇಲಾಖೆಯ ನಿಯಮ ಪಾಲಿಸಿಲ್ಲ. ಇದೆಲ್ಲ ಬಿಟ್ಟು ಪ್ರಧಾನಿ ಬಗ್ಗೆ ಹಗುರವಾಗಿ ಮಾತಾಡೋದು, ತೆರಿಗೆ ತಾರತಮ್ಯ ತಪ್ಪು ಮಾಹಿತಿ ನೀಡೋದು ರಾಜ್ಯ ನಾಯಕರು ಮಾಡುತ್ತಿದ್ದಾರೆ. ಹೀಗೆ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದರೆ ಲಾಭವಾಗಲ್ಲ. ಅದರ ಬದಲು ಆರ್ಥಿಕ ನಿಯಮಗಳನ್ನ ಪಾಲಿಸಿ ವಿತ್ತ ಸಚಿವರು, ಇಲಾಖೆಯೊಂದಿಗೆ ಚರ್ಚಿಸಿ ಯೋಜನೆಗಳ ಲಾಭ ಪಡೆಯಲಿ. ರಾಜ್ಯ ಸರ್ಕಾರ ಸಹಕಾರ ಕೊಟ್ಟು ಕೇಂದ್ರದಿಂದ ಹಣ ಪಡೆಯುವಂತೆ ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದರು.
undefined
ಗ್ಯಾರಂಟಿಗಾಗಿ ಬೊಕ್ಕಸ ಖಾಲಿ ಮಾಡಿದರೆ ನಾವೇನೂ ಮಾಡಲಾಗದು: ಅಮಿತ್ ಶಾ
ರಾಜ್ಯ ಸರ್ಕಾರ ಕೇಂದ್ರದ ಸೂಚನೆಗಳನ್ನು ಪಾಲಿಸಿ ಹಣ ಕೇಳಿದರೆ ಅನುಕೂಲ ಆಗಲಿದೆ. ಭದ್ರಾ ಯೋಜನೆಗೆ ಹಣ ಬಿಡುಗಡೆ ಮಾಡಿಸಲು ಪ್ರಧಾನಿ ಮೋದಿ ಭೇಟಿ ಮಾಡುತ್ತೇನೆ. ರೈತರ ಅನುಕೂಲಕ್ಕಾಗಿ ಭದ್ರಾಗೆ ಹಣ ಬಿಡುಗಡೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
'ದೇಶದ್ರೋಹಿಗಳಿಗೆ ಗುಂಡಿಕ್ಕಿ ಕೊಲ್ಲಿ' ಹೇಳಿಕೆಗೆ ದಾವಣಗೆರೆ ಪೊಲೀಸರು ನೋಟಿಸ್; ಈಶ್ವರಪ್ಪ ಬೆನ್ನಿಗೆ ನಿಂತ ಬಿಎಸ್‌ವೈ
ಇನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ಬೇಕೆಂಬ ಕೂಗು ಎದ್ದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸ್ಥಳಿಯರಿಗೆ ಟಿಕೆಟ್ ಕೊಡಲಿ ನಾ ಬೇಡ ಅನ್ನುವುದಿಲ್ಲ. ಎಲ್ಲ ರಾಷ್ಟ್ರೀಯ ಪಕ್ಷಗಳಲ್ಲಿ ಸ್ಥಳೀಯರಿಗೆ ಟಿಕೆಟ್ ಕೊಡುವ ಬಗ್ಗೆ ಚರ್ಚೆ ನಡೆದಿದೆ. ನಾನು ರಾಜಕಾರಣಿಯಲ್ಲ, ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನನ್ನು ಕೆದುಕಬೇಡಿ, ಎಲ್ಲಿ ನಿಲ್ಲುತ್ತೀರಾ ಅಂತಾ ಕೇಳಬೇಡಿ. ಅಭಿವೃದ್ಧಿಗಾಗಿ ಈ ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಭಾರತ ವಿಶ್ವಗುರು ಸ್ಥಾನ ಗಳಿಸಲು ಮೋದಿ ಆಡಳಿತದಿಂದ ಮಾತ್ರ ಸಾಧ್ಯ ಎಂದರು.