ಉಚಿತ ರೇಷನ್‌ ಹಂಚೋ ಬದಲು ಉದ್ಯೋಗ ಸೃಷ್ಟಿಗೆ ಒತ್ತು ನೀಡಿ: ಕೇಂದ್ರ, ರಾಜ್ಯಕ್ಕೆ ಸುಪ್ರೀಂ ಚಾಟಿ!

By Santosh Naik  |  First Published Dec 10, 2024, 5:07 PM IST

ಆಹಾರ ಒದಗಿಸುವ ಜವಾಬ್ದಾರಿ ಕೇಂದ್ರದ ಮೇಲೆ ಇದೆ ಎನ್ನುವ ಕಾರಣ, ಜನರನ್ನು ಸಮಾಧಾನ ಮಾಡಲು ರಾಜ್ಯ ಸರ್ಕಾರಗಳು ಪಡಿತರ ಚೀಟಿಗಳನ್ನು ಬೇಕಾಬಿಟ್ಟಿಯಾಗಿ ನೀಡೋದನ್ನು ಮುಂದುವರಿಸುತ್ತಲೇ ಇರುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.


ನವದೆಹಲಿ (ಡಿ.10): ಆಹಾರ ಭದ್ರತಾ ಕಾಯ್ದೆಯಡಿ ಆಹಾರ ಒದಗಿಸುವ ವಿಷಯದದಲ್ಲಿ ಸೋಮವಾರ (ಡಿಸೆಂಬರ್ 9) ನಡೆದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಬಡವರಿಗೆ ಉಚಿತ ಪಡಿತರವನ್ನು ನೀಡುವ ಬದಲು ಉದ್ಯೋಗ ಸೃಷ್ಟಿಗೆ ಕೇಂದ್ರೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಪಡಿತರ ನೀಡುವ ಪದ್ದತಿ ಇನ್ನೂ ಮುಂದುವರಿದಿರುವುದು ಅಚ್ಚರಿ ಮೂಡಿದೆ. ಅದಲ್ಲದೆ, ಆಹಾರ ಒದಗಿಸುವ ಜವಾಬ್ದಾರಿ ಕೇಂದ್ರದ ಮೇಲೆ ಇದೆ ಎನ್ನುವ ಕಾರಣ, ಜನರನ್ನು ಸಮಾಧಾನ ಮಾಡಲು ರಾಜ್ಯ ಸರ್ಕಾರಗಳು ಪಡಿತರ ಚೀಟಿಗಳನ್ನು ಬೇಕಾಬಿಟ್ಟಿಯಾಗಿ ನೀಡೋದನ್ನು ಮುಂದುವರಿಸುತ್ತಲೇ ಇರುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. "ಉಚಿತ ಪಡಿತರವನ್ನು ನೀಡುವಂತೆ ರಾಜ್ಯಗಳನ್ನು ಕೇಳಿದರೆ, ಅವರಲ್ಲಿ ಹಲವರು ಹಣಕಾಸಿನ ಮುಗ್ಗಟ್ಟಿನ ಕಾರಣದಿಂದ ಸಾಧ್ಯವಿಲ್ಲ ಎಂದು ಹೇಳುತ್ತಾರೆ ಮತ್ತು ಆದ್ದರಿಂದ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುವತ್ತ ಗಮನ ಹರಿಸಬೇಕು" ಎಂದು ನ್ಯಾಯಾಲಯ ಹೇಳಿದೆ.

ರಾಜ್ಯಗಳು ಪಡಿತರ ಚೀಟಿ ನೀಡುವುದನ್ನು ಮುಂದುವರಿಸಿದರೆ ಪಡಿತರಕ್ಕೆ ಹಣವನ್ನು ಪಾವತಿ ಮಾಡುವಂತೆ ಮಾಡಬೇಕು ಎಂದು ಹೇಳಿದೆ. ಕೇಂದ್ರದ ವಕೀಲ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಅಡಿಯಲ್ಲಿ ಸರ್ಕಾರವು 80 ಕೋಟಿ ಬಡವರಿಗೆ ಗೋಧಿ ಮತ್ತು ಅಕ್ಕಿಯ ರೂಪದಲ್ಲಿ ಉಚಿತ ಪಡಿತರವನ್ನು 80 ಕೋಟಿ ಬಡವರಿಗೆ ಒದಗಿಸುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. 

Tap to resize

Latest Videos

ಇದರ ನಡುವ ಮಾತನಾಡಿದ ಅರ್ಜಿದಾರರ ಪರ ವಕೀಲ ಪ್ರಶಾಂತ್‌ ಭೂಷಣ್‌, ಇಷ್ಟೆಲ್ಲಾ ಇದ್ದರೂ ಇನ್ನೂ ಸುಮಾರಿ 2-3 ಕೋಟಿ ಜನರು ಈ ಯೋಜನೆಯಿಂದ ಹೊರಗುಳಿದಿದ್ದಾರೆ ಎಂದರು.  ಆಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಗುರುತಿಸಲ್ಪಟ್ಟಿರುವ ಪಡಿತರ ಚೀಟಿಗಳು/ಆಹಾರ ಧಾನ್ಯಗಳಿಗೆ ಎನ್‌ಎಫ್‌ಎಸ್‌ಎ ಅಡಿಯಲ್ಲಿ ಅರ್ಹರಾಗಿರುವವರಿಗೆ ಈ ಕಾರ್ಡ್‌ಗಳನ್ನು 2024ರ ನವೆಂಬರ್‌ 19ರ ಒಳಾಗಿ ನೀಡಿರಬಕು. ಅಂಥವರ ಸಮಸ್ಯೆಗಳನ್ನು ಮಾತ್ರವೇ ಕೋರ್ಟ್‌ ಆಲಿಸಲಿದೆ ಎಂದಿತು. ಸೋಮವಾರ ನ್ಯಾಯಾಲಯದ ಕಲಾಪದಲ್ಲಿ ಎಸ್ ಜಿ ಮೆಹ್ತಾ ಮತ್ತು ಅರ್ಜಿದಾರ ಭೂಷಣ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

Justice is Due ಎಂದು ಬರೆದು ಸಾವಿಗೆ ಶರಣಾದ ಯುವಕನ 12 ಕೊನೆಯ ಆಸೆ, ಈಡೇರಿಸುತ್ತಾ ನಮ್ಮ ಸಮಾಜ?

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2020 ರಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಪ್ರಾರಂಭಿಸಿದೆ ಎಂದು ಸೂಚಿಸಿದಾಗ, ಸಾಲಿಸಿಟರ್ ಜನರಲ್ ಅವರು ಭೂಷಣ್ ಸರ್ಕಾರವನ್ನು ನಡೆಸಲು ಮತ್ತು ನೀತಿಗಳನ್ನು ಸ್ವತಃ ರೂಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು. ಈ ವೇಳೆ, ಭೂಷಣ್ ಅವರು ಎಸ್‌ಜಿ ವಿರುದ್ಧ ಕೆಲವು ಇಮೇಲ್‌ಗಳನ್ನು ಬಹಿರಂಗಪಡಿಸಿದ್ದರಿಂದ ಕೇಂದ್ರದ ವಕೀಲರು ತಮ್ಮ ವಿರುದ್ಧ ಇಂತಹ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಉತ್ತರಿಸಿದರು. ನಂತರ, ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜನವರಿ 8ಕ್ಕೆ ಮುಂದೂಡಿಕೆ ಮಾಡಿದೆ.

2025ರಲ್ಲಿ ಷೇರು ಮಾರುಕಟ್ಟೆಗೆ ಬರಲಿದೆ ಪ್ರಖ್ಯಾತ ಕಂಪನಿಗಳ IPO, ಇದರ ಮೌಲ್ಯವೇ 1.5 ಲಕ್ಷ ಕೋಟಿ!

click me!