ವಿದ್ಯಾಭ್ಯಾಸ ಬಿಡಲು ಮುಂದಾಗಿದ್ದ ವಿದ್ಯಾರ್ಥಿನಿಗೆ ಪಿಯುಸಿನಲ್ಲಿ ಶೇ.93!

By Kannadaprabha NewsFirst Published Jul 19, 2020, 8:16 AM IST
Highlights

ವಿದ್ಯಾಭ್ಯಾಸ ಬಿಡಲು ಮುಂದಾಗಿದ್ದ| ವಿದ್ಯಾರ್ಥಿನಿಗೆ ಪಿಯುಸಿನಲ್ಲಿ ಶೇ.93| ಎಪಿಎಸ್‌ ಪಿಯು ಕಾಲೇಜು ವಿದ್ಯಾರ್ಥಿ ಜಯಸುಧಾ ಸಾಧನೆಗೆ ಮೆಚ್ಚುಗೆ

ಬೆಂಗಳೂರು(ಜು.19): ವಿಜ್ಞಾನ ವಿಭಾಗದ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ವಿದ್ಯಾಭ್ಯಾಸ ತೊರೆಯಲು ಮುಂದಾಗಿದ್ದ ಜಯಸುಧಾ ವಾಣಿಜ್ಯ ವಿಭಾಗದಲ್ಲಿ ಶೇ.93ರಷ್ಟುಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಎಪಿಎಸ್‌ ಪಿಯು ಕಾಲೇಜು ವಿದ್ಯಾರ್ಥಿ ಜಯಸುಧಾ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೇ, ಕಾಲೇಜಿನ ಆಡಳಿತ ಮಂಡಳಿಯು ಮುಂದಿನ ಶಿಕ್ಷಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದೆ.

ಓದು ಬೇಡ ಎಂದವ ವಿಜಯಪುರಕ್ಕೇ ಫಸ್ಟ್!

ತಮಿಳುನಾಡು ಮೂಲಕ ಅರುಣಾಚಲಂ ಮತ್ತು ಲಕ್ಷ್ಮೇ ಅವರ ಪುತ್ರಿಯಾದ ಜಯಸುಧಾ ಅವರು ಮರಗೆಲಸ ಮಾಡುತ್ತಿದ್ದರು. ಜಯಸುಧಾ 10ನೇ ತರಗತಿಯಲ್ಲಿ ಶೇ.86 ಅಂಕ ಪಡೆದುಕೊಂಡಿದ್ದಳು. ಸ್ವಾಮಿ ವಿವೇಕಾನಂದ ಯೂಥ್‌ ಮೂಮೆಂಟ್‌ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಆಯ್ಕೆಯಾಗಿ ಎಪಿಎಸ್‌ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಪಿಸಿಎಂಬಿ ವಿಷಯ ತೆಗೆದುಕೊಂಡಿದ್ದಳು. ಆದರೆ, ಕೆಲ ತಿಂಗಳ ನಂತರ ವಿಜ್ಞಾನ ವಿಷಯ ಪಾಠ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದಳು. ಪ್ರಾಂಶುಪಾಲರನ್ನು ಭೇಟಿಯಾಗಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದಳು. ತರುವಾಯ ಆಕೆಯನ್ನು ವಾಣಿಜ್ಯ ವಿಭಾಗದ ಜಿಇಬಿಎ ವಿಷಯ ನೀಡಲಾಯಿತು.

ಪಿಯುಸಿಯಲ್ಲಿ ಫೇಲ್: ಮನನೊಂದು ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನ

ವಾಣಿಜ್ಯ ವಿಭಾಗಕ್ಕೆ ಬಂದ ಹಿನ್ನೆಲೆಯಲ್ಲಿ ಹಣಕಾಸು ನೆರವು ನೀಡಲು ಮುಂದಾಗಿದ್ದ ಸ್ವಾಮಿ ವಿವೇಕಾನಂದ ಯೂಥ್‌ ಮೂಮೆಂಟ್‌ ಅದನ್ನು ನಿಲ್ಲಿಸಿತು. ವಿಜ್ಞಾನ ವಿಷಯಕ್ಕೆ ಮಾತ್ರ ಸಂಸ್ಥೆಯು ಹಣಕಾಸು ನೆರವು ನೀಡುತ್ತದೆ. ಕಾಲೇಜು ಆಡಳಿತ ಮಂಡಳಿ ಕಡಿಮೆ ಶುಲ್ಕವನ್ನು ಮಾಡಿತು. ಅಲ್ಲದೇ, ಕಿರಣ್‌ ಎಂಬುವವರು ಸೇರಿದಂತೆ ಇತರರ ಹಣಕಾಸಿನ ನೆರವಿನಲ್ಲಿ ವಿದ್ಯಾಭ್ಯಾಸ ಮಾಡಿದ ಜಯಸುಧಾ ಪಿಯುಸಿ ಪರೀಕ್ಷೆ ಶೇ.93ರಷ್ಟುಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.

click me!