Fake Certificate ನಕಲಿ ಜಾತಿ ಪತ್ರ ಪಡೆದವರ ವಿರುದ್ಧ ಮುಲಾಜಿಲ್ಲದೆ ಕ್ರಮ, ಮಾಧುಸ್ವಾಮಿ ಎಚ್ಚರಿಕೆ!

Published : Mar 23, 2022, 04:25 AM IST
Fake Certificate ನಕಲಿ ಜಾತಿ ಪತ್ರ ಪಡೆದವರ ವಿರುದ್ಧ ಮುಲಾಜಿಲ್ಲದೆ ಕ್ರಮ, ಮಾಧುಸ್ವಾಮಿ ಎಚ್ಚರಿಕೆ!

ಸಾರಾಂಶ

- ಮೇಲ್ವರ್ಗದವರಿಂದ ಮೀಸಲು ಜಾತಿ ಪತ್ರ ದುರ್ಬಳಕೆ: ಸಚಿವ - ಪರಿಶಿಷ್ಟಜಾತಿ ಪ್ರಮಾಣಪತ್ರ ಪಡೆದು ಮೀಸಲಾತಿ ದುರ್ಬಳಕೆ  - ರೇಣುಕಾಚಾರ್ಯಗೆ ಎಸ್‌ಸಿ ಪ್ರಮಾಣಪತ್ರ-ಗೂಳಿಹಟ್ಟಿ  

ಬೆಂಗಳೂರು(ಮಾ.23) ರಾಜ್ಯದಲ್ಲಿ ಪರಿಶಿಷ್ಟಜಾತಿ ವ್ಯಾಪ್ತಿಗೆ ಬರುವ ಬೇಡ ಜಂಗಮ ಹಾಗೂ ಬುಡಗ ಜಂಗಮ ಮೀಸಲಾತಿಯನ್ನು ನಕಲಿ ಜಾತಿ ಪ್ರಮಾಣಪತ್ರಗಳ ಮೂಲಕ ಮೇಲ್ವರ್ಗದವರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಲಿದ್ದು, ಪ್ರಮಾಣಪತ್ರ ಪಡೆದವರು ಹಾಗೂ ನೀಡಿದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ನಿಯಮ 69ರ ಅಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಪಿ. ರಾಜೀವ್‌, ರಾಜ್ಯದಲ್ಲಿ ಮೇಲ್ವರ್ಗದವರು ಪರಿಶಿಷ್ಟಜಾತಿ ಪ್ರಮಾಣಪತ್ರ ಪಡೆದು ಮೀಸಲಾತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಆಂಧ್ರ ಪ್ರದೇಶದಿಂದ ವಲಸೆ ಬಂದ ಬೇಡ ಜಂಗಮ, ಬುಡಗ ಜಂಗಮ ಸಮುದಾಯವನ್ನು ಪರಿಶಿಷ್ಟಜಾತಿ ಎಂದು ಪರಿಗಣಿಸಲಾಗಿದೆ. 1995ರಲ್ಲಿ ವಿಧಾನಸಭೆಯಲ್ಲಿ ನಡೆದಿದ್ದ ಚರ್ಚೆ ವೇಳೆ ಬಿ.ಟಿ. ಲಲಿತಾ ನಾಯಕ್‌ ಅವರು ಬೇಡ ಜಂಗಮ ಎಂದರೆ ಬೆಕ್ಕು, ಅಳಿಲು, ಇಲಿ ತಿನ್ನುವವರು ಎಂದು ಹೇಳಿದ್ದರು. ಅಂತಹ ಬೇಡ ಜಂಗಮರ ಮೀಸಲಾತಿಯನ್ನು ಮೇಲ್ವರ್ಗದವರು ಕಸಿಯುತ್ತಿದ್ದಾರೆ ಎಂದು ದೂರಿದರು.

ಕರ್ನಾಟಕದಲ್ಲಿ ಜಾತಿ ಸೂಚಕ ಗ್ರಾಮಗಳ ಹೆಸರು ರದ್ದು

ಎನ್‌. ಮಹೇಶ್‌ ಮಾತನಾಡಿ, ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಇಂತಹ 12 ಮಂದಿ ಲಿಂಗಾಯತ ಜಂಗಮರಿಗೆ ಬೇಡ ಜಂಗಮ ಎಂದು ನಕಲಿ ಪ್ರಮಾಣಪತ್ರ ನೀಡಲಾಗಿದೆ. ಚಂದ್ರಶೇಖರ್‌ ಆರಾಧ್ಯ ಎಂಬುವವರಿಗೆ ಆದಿ ಕರ್ನಾಟಕ ಪ್ರಮಾಣಪತ್ರ ನೀಡಲಾಗಿದೆ. ಲಿಂಗಾಯತ ಜಂಗಮರು ಸಸ್ಯಾಹಾರಿಗಳು, ಬೇಡ ಜಂಗಮರು ಮಾಂಸಾಹಾರಿಗಳು ಎಂದರು.

ಜೆಡಿಎಸ್‌ ಸದಸ್ಯ ಕೆ. ಅನ್ನದಾನಿ, ಅಂಬೇಡ್ಕರ್‌ ನೀಡಿರುವ ಮೀಸಲಾತಿ ಉದ್ದೇಶವೇ ಹಾಳಾಗುತ್ತಿದೆ. ಈವರೆಗೂ ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆದ ಒಬ್ಬರಿಗೂ ಶಿಕ್ಷೆಯಾಗಿಲ್ಲ ಎಂದು ಕಿಡಿಕಾರಿದರು. ಈ ವೇಳೆ ಜೆ.ಸಿ. ಮಾಧುಸ್ವಾಮಿ, ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ ಜಿಲ್ಲಾಧಿಕಾರಿಗಳು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಬಹುದು. ಅರ್ಹರಲ್ಲದವರು ತೆಗೆದುಕೊಂಡಿದ್ದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರವು ಈ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Caste Census: ಜಾತಿ ಗಣತಿ ಅಂಗೀಕರಿಸಿ ಮುಂದಿನ ಚುನಾವಣೆ ನಡೆಸಿ

ರೇಣುಕಾಚಾರ್ಯಗೆ ಎಸ್‌ಸಿ ಪ್ರಮಾಣಪತ್ರ-ಗೂಳಿಹಟ್ಟಿ
ಯಾರೂ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವ ಬಗ್ಗೆ ಗಮನಕ್ಕೆ ಬಂದಿಲ್ಲ ಎಂದು ಸರ್ಕಾರ ಉತ್ತರ ನೀಡಿದೆ. ಆದರೆ, ನನ್ನ ಬಳಿ ನಕಲಿ ಪ್ರಮಾಣಪತ್ರ ಪಡೆದಿರುವವರ ದಾಖಲೆಗಳಿವೆ. ಇವುಗಳನ್ನು ಸದನದಲ್ಲಿ ಬಿಚ್ಚಿಟ್ಟರೆ ನಾಳೆ ನನ್ನ ವಿರುದ್ಧ ಪ್ರತಿಭಟನೆ, ಧರಣಿ, ಪ್ರತಿಕೃತಿ ದಹನ ನಡೆಯಬಹುದು ಎಂದು ಬಿಜೆಪಿ ಸದಸ್ಯ ಗೂಳಿಹಟ್ಟಿಶೇಖರ್‌ ವಿಧಾನಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ನಕಲಿ ಜಾತಿ ಪ್ರಮಾಣ ಪತ್ರದ ಬಗ್ಗೆ ಚರ್ಚೆ ವೇಳೆ ಈ ಆತಂಕ ವ್ಯಕ್ತಪಡಿಸಿದಾಗ ಪಟ್ಟಿಓದಿ ಏನೂ ಆಗುವುದಿಲ್ಲ ಎಂದು ಜೆಡಿಎಸ್‌ ಸದಸ್ಯರು ಧೈರ್ಯ ತುಂಬಿದರು. ಬಳಿಕ ಮಾತನಾಡಿದ ಶೇಖರ್‌, ‘ಎಂ.ಪಿ. ರೇಣುಕಾಚಾರ್ಯ ಹಾಗೂ ಅವರ ಪುತ್ರಿ ಕುಮಾರಿ ಎಂ.ಆರ್‌. ಚೇತನಾ’ ಅವರಿಗೆ ಬೇಡ ಜಂಗಮ ಎಸ್‌ಸಿ ಜಾತಿ ಪ್ರಮಾಣಪತ್ರ ಪಡೆಯಲಾಗಿದೆ. ಜತೆಗೆ ಪಾಂಚಾಕ್ಷರಯ್ಯ, ಡಾ.ಎಂ.ಪಿ. ದಾರಕೇಶ್ವರಯ್ಯ ಪುತ್ರಿ ಎಂ.ಇ. ಸುಜಾತಾ ಸೇರಿದಂತೆ ಸುಮಾರು 10 ಮಂದಿಯ ದಾಖಲೆಗಳು ನನ್ನ ಬಳಿ ಇವೆ ಎಂಬ ಕುತೂಹಲಕಾರಿ ಹೇಳಿಕೆ ನೀಡಿದರು.

ದಾಖಲೆ ಮನೆ ಬಾಗಿಲಿಗೆ: ಸರ್ಕಾರದ ಕ್ರಾಂತಿಕಾರಕ ಹೆಜ್ಜೆ
ರೈತರ ಪಹಣಿ ಪತ್ರ, ದಾಖಲೆ ಪತ್ರಕ್ಕಾಗಿ ಅಲೆದಾಟ, ಸುತ್ತಾಟ ತಪ್ಪಿಸಲು ನಿಮ್ಮ ದಾಖಲೆ ನಿಮ್ಮ ಹಕ್ಕು, ನಿಮ್ಮ ಬಾಗಿಲಿಗೆ ತಲುಪಿಸುವುದು ನಮ್ಮ ಕರ್ತವ್ಯವಾಗಿದೆ. ಇಂತಹ ಕ್ರಾಂತಿ​ಕಾರಕ ಹೆಜ್ಜೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ​ಸ​ರ್ಕಾ​ರ ಇಟ್ಟಿದೆ ಎಂದು ಲೋಕೋ​ಪ​ಯೋಗಿ ಹಾಗೂ ಬಾಗ​ಲ​ಕೋಟೆ ಜಿಲ್ಲಾ ಉಸ್ತು​ವಾ​ರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರಿನ ಪಿಜಿ ಕಟ್ಟದಲ್ಲಿ ಸಿಲಿಂಡರ್ ಸ್ಫೋಟ, ಎಂಜಿನೀಯರ್ ಸಾವು, ಮೂವರಿಗೆ ಗಾಯ
ನ್ಯಾಯವೂ ಹೊರಗುತ್ತಿಗೆ?: ಬೆಂಗಳೂರಿನ ಕಾನೂನು ಕೆಲಸ ಮಾಡಿದ ಮಹಾರಾಷ್ಟ್ರ ಪೊಲೀಸರು!