ಧಾರವಾಡ-ಬೆಂಗ್ಳೂರು ‘ವಂದೇ ಭಾರತ್‌’ ರೈಲಿಗೆ ಕಲ್ಲೆಸೆತ, ಗಾಜು ಪುಡಿಪುಡಿ

By Kannadaprabha News  |  First Published Jul 2, 2023, 6:30 AM IST

ಬೆಂಗಳೂರಿನಿಂದ ಬೆಳಗ್ಗೆ ಆಗಮಿಸಿದ್ದ ರೈಲು, ಮರಳಿ ಧಾರವಾಡದಿಂದ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಮಧ್ಯಾಹ್ನ 3.30ರ ಸುಮಾರಿಗೆ ದಾವಣಗೆರೆ ಬಳಿ ಯಾರೋ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ. ಇದರಿಂದ ಸಿ-4 ಕೋಚ್‌ನ ಕಿಟಕಿಗೆ ಕಲ್ಲು ಬಡಿದಿದ್ದು, ಗ್ಲಾಸ್‌ ಬಿರುಕು ಬಿಟ್ಟಿದೆ. 

ಹುಬ್ಬಳ್ಳಿ(ಜು.02):  ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಸಂಚಾರ ಆರಂಭಿಸಿರುವ ರಾಜ್ಯದ ಎರಡನೇ ಹೈಸ್ಪೀಡ್‌ ರೈಲು, ಬೆಂಗಳೂರು-ಧಾರವಾಡ ಮಧ್ಯೆ ಸಂಚರಿಸುವ ವಂದೇ ಭಾರತ್‌ ರೈಲಿಗೆ ಕಿಡಿಗೇಡಿಗಳು ಕಲ್ಲು ಎಸೆದಿರುವ ಘಟನೆ ದಾವಣಗೆರೆ ಬಳಿ ಶನಿವಾರ ಸಂಭವಿಸಿದೆ.

ಬೆಂಗಳೂರಿನಿಂದ ಬೆಳಗ್ಗೆ ಆಗಮಿಸಿದ್ದ ರೈಲು, ಮರಳಿ ಧಾರವಾಡದಿಂದ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಮಧ್ಯಾಹ್ನ 3.30ರ ಸುಮಾರಿಗೆ ದಾವಣಗೆರೆ ಬಳಿ ಯಾರೋ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ. ಇದರಿಂದ ಸಿ-4 ಕೋಚ್‌ನ ಕಿಟಕಿಗೆ ಕಲ್ಲು ಬಡಿದಿದ್ದು, ಗ್ಲಾಸ್‌ ಬಿರುಕು ಬಿಟ್ಟಿದೆ. 

Tap to resize

Latest Videos

ಧಾರವಾಡ- ಬೆಂಗಳೂರು ವಂದೇ ಭಾರತ್‌ ರೈಲು ಟಿಕೆಟ್ ದರದ ಸಂಪೂರ್ಣ ಮಾಹಿತಿ ಇಲ್ಲಿದೆ

ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಆರ್‌ಪಿಎಫ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

click me!