ನೆಲ, ಜಲ, ಗಡಿ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ?: ಹೆಚ್ಚಿದ ಜನಾಕ್ರೋಶ

Published : Nov 21, 2022, 08:00 PM IST
ನೆಲ, ಜಲ, ಗಡಿ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ?: ಹೆಚ್ಚಿದ ಜನಾಕ್ರೋಶ

ಸಾರಾಂಶ

• ಗಡಿವಿವಾದ ಕುರಿತು ಮಹಾರಾಷ್ಟ್ರ ಸರ್ಕಾರ ಹೈ ಪವರ್ ಮೀಟಿಂಗ್ • ನೆಲ, ಜಲ ವಿಚಾರದಲ್ಲಿ ಕರ್ನಾಟಕ ಸರ್ಕಾರ ಡೋಂಟ್ ಕೇರ್? • ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಗೋವಾ ಕ್ಯಾತೆ

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ನ.21): ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಪ್ರಕರಣವು ನವೆಂಬರ್ 23ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಗಡಿವಿವಾದ ಪ್ರಕರಣ ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬರುತ್ತದೆಯೋ ಇಲ್ಲವೋ ಎಂಬ ಬಗ್ಗೆ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮಹಾರಾಷ್ಟ್ರದ ಸರ್ವಪಕ್ಷ ನಾಯಕರನ್ನೊಳಗೊಂಡ 14 ಜನರ ಉನ್ನತಮಟ್ಟದ ಸಮಿತಿ ರಚಿಸಿದ್ದಾರೆ. ಈ ಸಮಿತಿ ಇಂದು ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಸಭೆ ನಡೆಸಿದೆ. ಗಡಿ ಸಮಸ್ಯೆಯ ಪರಿಹಾರಕ್ಕೆ ಮಹಾರಾಷ್ಟ್ರದ ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ್, ಅಬಕಾರಿ ಸಚಿವ ಶಂಭುರಾಜೇ ದೇಸಾಯಿ ನೇಮಕ ಮಾಡಲಾಗಿದೆ. 

ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಕುರಿತು ನಡೆಸಲಾದ ಸಭೆಯಲ್ಲಿ, ಈಗಾಗಲೇ ಕೈಗೊಂಡಿರುವ ಕಾನೂನು ಹೋರಾಟ ಸುಪ್ರೀಂಕೋರ್ಟ್ ನಲ್ಲಿ (Supreme court) ವಿಚಾರಣೆ ನಡೆಯುತ್ತಿದೆ. ತೀರ್ಪಿನ ಬಳಿಕ ಮಹಾರಾಷ್ಟ್ರ (Maharastra) ಸರ್ಕಾರ ಕೈಗೊಳ್ಳಬೇಕಾದ ನಡೆ ಬಗ್ಗೆ ಮಹತ್ವದ ಚರ್ಚೆ ನಡೆಸಿದೆ. ಇತ್ತ ಗಡಿವಿವಾದ ಪ್ರಕರಣ (border dispute case) ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬರಲ್ಲ ಎಂಬುದು ಕರ್ನಾಟಕದ (Karnataka) ವಾದವಾಗಿದ್ದು ಒಂದು ವೇಳೆ ಕರ್ನಾಟಕ ಸರ್ಕಾರದ ವಾದಕ್ಕೆ ಸುಪ್ರೀಂಕೋರ್ಟ್ ಮನ್ನಣೆ ನೀಡಿದರೆ, ಮಹಾರಾಷ್ಟ್ರದ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಭೇಟಿ ಮಾಡಬೇಕು ಎಂದು ಮುಖ್ಯಮಂತ್ರಿ ಏಕನಾಥ ಶಿಂಧೆಗೆ ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಹೈ ಪವರ್ ಮೀಟಿಂಗ್ ನಡೆದಿದೆ. ಆದರೆ, ಕರ್ನಾಟಕದಲ್ಲಿ ಯಾವುದೇ ಹೈ ಪವರ್, ಲೋ ಪವರ್ ಸಭೆಯೂ ನಡೆದಿಲ್ಲ. ವಿವಾದ ಕುರಿತ ಮುಂದಿನ ನಡೆಗಳನ್ನು ಕೈಗೊಳ್ಳಲು ಯಾವುದೇ ಸಮಿತಿಯೂ (Committee) ಇಲ್ಲ. ರಾಜ್ಯ ಸರ್ಕಾರದ ನಡೆಯ ಬಗ್ಗೆ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಕಿಡಿಕಾರಿದ್ದಾರೆ. 

Belagavi Border dispute : ಸುಪ್ರೀಂ ಕೋರ್ಟ್‌ನಲ್ಲಿ ನ.23ರಿಂದ ಅಂತಿಮ ವಿಚಾರಣೆ

ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿರುವ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ (Ashok Chandaragi), 'ಗಡಿ ವಿಚಾರದಲ್ಲಿ ಸಭೆ ಮಾಡಲು ನಮ್ಮಲ್ಲಿ ಯಾವ ಹೈ ಪವರ್, ಲೋ ಪವರ್ ಕಮೀಟಿನೂ ಇಲ್ಲ. ಕರ್ನಾಟಕದ 4 ಜಿಲ್ಲೆಗಳ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು 2004 ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ದಾವೆ (Litigation) ಹೂಡಿದೆ. ಈ ಪ್ರಕರಣದ ಅಂತಿಮ ವಿಚಾರಣೆ ನ.23 ರಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಗಡಿ ವಿವಾದ ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ. ಅದು ಸಂಸತ್‌ನ ಪರಮಾಧಿಕಾರ (Sovereignty) ಎಂಬುದು ನಮ್ಮ ವಾದ. ಮಹಾರಾಷ್ಟ್ರ ಸರ್ಕಾರದ ದಾವೆ ಅಂಗೀಕಾರ ಮಾಡಬೇಕೋ ತಿರಸ್ಕಾರ (Contempt) ಮಾಡಬೇಕೋ ಎಂಬ ವಿಚಾರಣೆ ವೇಳೆ ನ.23ರಂದು ನಡೆಯಲಿದೆ ಎಂದು ಹೇಳಿದರು.

ಸುಪ್ರೀಂಕೋರ್ಟ್ ಅಂತಿಮ ನಿರ್ಣಯ ಬಂದಾಗ ಕರ್ನಾಟಕ ಸರ್ಕಾರ ಏನೇನು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು? ಈವರೆಗೆ ಸರ್ಕಾರ ಯಾವ ಹಂತದಲ್ಲಿದೆ ಏನು ಕ್ರಮ ತಗೆದುಕೊಂಡಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಮಹಾರಾಷ್ಟ್ರದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ ಸಭೆ ನಡೆಸಲಾಗುತ್ತಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ (Chief minister) ನೇತೃತ್ವದಲ್ಲಿ ಅನೇಕ ಸಚಿವರು, ರಾಜಕೀಯ ಪಕ್ಷಗಳ ನಾಯಕರು ಸೇರಿ ಸಭೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸರ್ಕಾರ ಯಾವ ಸಮಿತಿಯನ್ನೂ ನೇಮಕ ಮಾಡಿಲ್ಲ. 2015 ರಿಂದ 2018 ವರೆಗೆ ಹೆಚ್.ಕೆ. ಪಾಟೀಲ್ (H.K. Patil) ಗಡಿ ಉಸ್ತುವಾರಿ ಸಚಿವರಾಗಿದ್ದರು. ಕಾಂಗ್ರೆಸ್ ಸರ್ಕಾರ ಹೋದ ಬಳಿಕ ಕುಮಾರಸ್ವಾಮಿ, ಯಡಿಯೂರಪ್ಪ,  ಹಾಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರಗಳಲ್ಲಿ ಗಡಿ ಉಸ್ತುವಾರಿ ಸಚಿವರೇ ಇಲ್ಲ. ಇನ್ನು ಗಡಿ ಸಂರಕ್ಷಣ ಆಯೋಗ ಮೂರು ವರ್ಷಗಳಿಂದ ಸಭೆ ನಡೆಸಿಲ್ಲ ಎಂದು ಕಿಡಿಕಾರಿದರು.

ಬೆಳಗಾವಿ: ಕಳಸಾ ಬಂಡೂರಿ ತಿರುವು ಯೋಜನೆಗೆ ಮತ್ತೆ ಗೋವಾ ಅಡ್ಡಗಾಲು?

ಗಡಿ ಸಂರಕ್ಷಣೆ ಅಧ್ಯಕ್ಷರೇ ಇಲ್ಲ: ಗಡಿ ಸಂರಕ್ಷಣೆ (Border protection) ಅಧ್ಯಕ್ಷರಾಗಿದ್ದ ಮಂಜುನಾಥ್ ಆರು ತಿಂಗಳ ಹಿಂದೆ ತೀರಿಕೊಂಡರು. ಹಿರಿಯ ಸದಸ್ಯರೊಬ್ಬರು ತೀರಿಕೊಂಡಿದ್ದಾರೆ. ಇಬ್ಬರೇ ಇಬ್ಬರು ಸದಸ್ಯರಿದ್ದಾರೆ.  ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಗಡಿ ವಿಷಯದಲ್ಲಿ ಆಳವಾದ ಜ್ಞಾನ, (Knowledge) ತಿಳುವಳಿಕೆ ಇರಬಹುದು. ಆದರೆ, ತಾವು ಏನು ಕ್ರಮ ಕೈಗೊಂಡಿದ್ದೀರಿ ಅಂತಾ ತಿಳಿಯುವ ಹಕ್ಕು ರಾಜ್ಯದ ಜನತೆಗಿದೆ. ಅದನ್ನು ತಿಳಿಸುವ ಕರ್ತವ್ಯವೂ ನಿಮ್ಮ ಮೇಲಿದೆ. ಈ ಕುರಿತು ಸಿಎಂ ಉನ್ನತ ಮಟ್ಟದ ಸಭೆ ನಡೆಸಿ ಹೆಚ್ಚಿನ ನಿರ್ಧಾರ ತಗೆದುಕೊಳ್ಳಬೇಕಾಗಿತ್ತು. ಆದರೆ, ಇವತ್ತಿನವರೆಗೂ ಯಾವುದೇ ನಿರ್ಧಾರ (Decision) ಕುರಿತು ತಿಳಿಸಿಲ್ಲ. ನೆಲ, ಜಲ, ವಿಚಾರದಲ್ಲಿ ರಾಜ್ಯದ ಜನತೆಗೆ ತಿಳಿಯುವ ಹಕ್ಕಿದೆ. ಮುಖ್ಯಮಂತ್ರಿ ಇದನ್ನು ಬಹಳ ಹಗುರವಾಗಿ (Lightly) ಪರಿಗಣಿಸಿದ್ದಾರೆ. ದೆಹಲಿಯಲ್ಲಿ ಕರ್ನಾಟಕ ಪರವಾಗಿ ನ್ಯಾಯ ಒದಗಿಸುವ ಹಿರಿಯ ನ್ಯಾಯವಾದಿಗಳ ತಂಡ ಇರಬಹುದು.  ಆದರೆ, ಈ ವಿಚಾರವಾಗಿ ಏನು ಮಾಡಲಾಗುತ್ತಿದೆ ಎಂಬುವುದನ್ನು ರಾಜ್ಯದ ಜನತೆಗೆ ತಿಳಿಸಬೇಕು. ಇಲ್ಲದಿದ್ದರೆ, ಮುಂದೆ ದಿನಗಳಲ್ಲಿ ಹೆಚ್ಚು ಕಡಿಮೆ ಆದಲ್ಲಿ ಇದರ ಸಂಪೂರ್ಣ ಜವಾಬ್ದಾರಿಯನ್ನು ಮುಖ್ಯಮಂತ್ರಿಯೇ ಹೊರಬೇಕಾಗುತ್ತದೆ ಎಂದು ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಆಕ್ರೋಶ ಹೊರಹಾಕಿದ್ದಾರೆ.

ಮಹದಾಯಿ ಪ್ರಾಧಿಕಾರಕ್ಕೆ ಗೋವಾ ಮನವಿ: ಮಹದಾಯಿ ನದಿ ವಿಚಾರದಲ್ಲಿ ನೆರೆ ರಾಜ್ಯ ಗೋವಾ ಮತ್ತೆ ಕಿರಿಕ್ ಮಾಡುತ್ತಿದೆ. ಕಳಸಾ (Kalasa), ಬಂಡೂರಿ (Banduri) ಯೋಜನೆ ಅನುಷ್ಠಾನದ ಪ್ರಯತ್ನಕ್ಕೆ ತಡೆಯೊಡ್ಡಲು ಗೋವಾ ರಾಜಕೀಯ ನಾಯಕರು ಯತ್ನಿಸುತ್ತಿದ್ದಾರೆ. ಕಳಸಾ ಕಾಮಗಾರಿ ಸ್ಥಳಕ್ಕೆ ಅನುಮತಿ ಇಲ್ಲದೇ ಗೋವಾ ಫಾರ್ವರ್ಡ್ ಪಾರ್ಟಿ (Goa Forward party) ಅಧ್ಯಕ್ಷ ವಿಜಯ ಸರದೇಸಾಯಿ (Vijai sardesai) ಭೇಟಿ ನೀಡಿದ್ದಾರೆ. ಖಾನಾಪುರ ತಾಲೂಕಿನ ಕಣಕುಂಬಿ (Kanakumbi) ಪ್ರದೇಶಕ್ಕೆ ಭೇಟಿ ನೀಡಿದ ವಿಜಯ ಸರದೇಸಾಯಿ, 'ಯೋಜನೆ ಜಾರಿಗೆಗೆ ಕರ್ನಾಟಕ ಸಿದ್ಧತೆ ಮಾಡಿಕೊಳ್ಳುತ್ತಿದೆ' ಎಂದು ಫೋಟೊ, ವಿಡಿಯೋಗಳನ್ನು ಗೋವಾ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಕರ್ನಾಟಕದ ವಿರುದ್ಧ ಗೋವಾದ ಪರಿಸರವಾದಿಗಳು, ಸರ್ಕಾರವನ್ನು ಎತ್ತಿಕಟ್ಟುವ (erect) ಪ್ರಯತ್ನ ಮಾಡಿದ್ದಾರೆ. ಕಳಸಾ ಬಂಡೂರಿ ಯೋಜನೆ ನಿಲ್ಲಿಸಲು ಗೋವಾ ಸರ್ಕಾರ ನಿರಂತರ ಪ್ರಯತ್ನ ನಡೆಸಿದ್ದು ಗೋವಾ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರ ಮಹದಾಯಿ ಪ್ರಾಧಿಕಾರ ರಚನೆ ಮಾಡಲಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಗೋವಾದ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್