
ಬೆಂಗಳೂರು (ಆ.21): ಸಿಲಿಕಾನ್ ಸಿಟಿಯ ರಸ್ತೆಗಳ ವಿಚಾರದಲ್ಲಿ ಸರ್ಕಾರ ಗಾಢ ನಿದ್ರೆಯಲ್ಲಿದೆ ಎನ್ನುವುದು ಕಣ್ಣಿಗೆ ರಾಚುವಂಥ ಸುದ್ದಿ ಇದು. ಯಾವುದೇ ಪ್ರದೇಶದಲ್ಲಿ ಉಳಿದುಕೊಳ್ಳುವ ಪ್ರತಿ ವ್ಯಕ್ತಿಗೂ ಉತ್ತಮ ನಾಗರೀಕ ಸೌಲಭ್ಯಗಳನ್ನು ಒದಗಿಸಬೇಕಾಗಿರುವ ಸರ್ಕಾರದ ಕರ್ತವ್ಯ. ಆದರೆ, ಸರ್ಕಾರ ಉದಾಸೀನತೆಯಿಂದ ಬೇಸತ್ತಿರುವ ವ್ಯಕ್ತಿಯೊಬ್ಬರು ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಬ್ಯಾಂಕ್‌ನಿಂದ ಸಾಲ ಪಡೆದುಕೊಂಡು ಕೆಲಸ ಮಾಡಿಸಿದ್ದಾರೆ. ಸರ್ಕಾರ ತಮ್ಮ ವಾರ್ಡ್‌ನ ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಉದಾಸೀನತೆಯಿಂದ ಬೇಸತ್ತಿದ್ದ 'ಸಿಟಿಜನ್ಸ್ ಗ್ರೂಪ್, ಈಸ್ಟ್ ಬೆಂಗಳೂರು', ಭಾನುವಾರ 'ನೋ ಡೆವಲಪ್ಮೆಂಟ್ ನೋಟ್ಯಾಕ್ಸ್', ಆಸ್ತಿ ತೆರಿಗೆ ಪಾವತಿಯನ್ನು ಬಹಿಷ್ಕರಿಸುವ ಅಭಿಯಾನವನ್ನು ಆರಂಭ ಮಾಡಿತ್ತು. ಕಳೆದ ವಾರ ಮುನೇಶ್ವರ ಲೇಔಟ್‌ನ ಹಾಲನಾಯಕನಹಳ್ಳಿ ಮತ್ತು ಚೂಡಸಂದ್ರದಲ್ಲಿ 6 ಕಿ.ಮೀ ಉದ್ದದ ರಸ್ತೆಯಲ್ಲಿದ್ದ ಗುಂಡಿಗಳನ್ನು ಸರಿಪಡಿಸಲು ಗುಂಪಿನ ಸದಸ್ಯರು ಸೇರಿ ಹಣ ನೀಡಿದ್ದಾರೆ. ಈ ಗ್ರೂಪ್‌ನ ಸಂಸ್ಥಾಪಕರಾಗಿರುವ 32 ವರ್ಷದ ಆರಿಫ್ ಮುದ್ಗಲ್, ರಸ್ತೆ ಗುಂಡಿಯನ್ನು ಮುಚ್ಚುವ ಸಲುವಾಗಿಯೇ ಬ್ಯಾಂಕ್‌ನಿಂದ 2.7 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಇಲ್ಲಿನ ಹೊಸ ರಸ್ತೆಯಲ್ಲಿ ಎರಡು ಅಪಘಾತಗಳನ್ನು ನಾನು ಕಂಡಿದ್ದೇನೆ. ಅದಕ್ಕಾಗಿ ರಸ್ತೆ ಗುಂಡಿಯನ್ನು ಮುಚ್ಚಲೇಬೇಕು ಎಂದು ತೀರ್ಮಾನ ಮಾಡಿದ್ದೆ ಎಂದಿದ್ದಾರೆ.
"ನನ್ನ ಅಪಾರ್ಟ್‌ಮೆಂಟ್ ಬಳಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ಅವರು ಪ್ರಯಾಣಿಸುತ್ತಿದ್ದ ಆಟೋ ಹೊಸ ರಸ್ತೆಯಲ್ಲಿನ ಗುಂಡಿಯಲ್ಲಿ ಬಿದ್ದ ನಂತರ ಸಂಪೂರ್ಣ ಪಲ್ಟಿಯಾಗಿ ಗಾಯಗೊಂಡಿದ್ದರು' ಎಂದು ಮುದ್ಗಲ್ ಹೇಳಿದ್ದಾರೆ. ಇನ್ನು ಆಗಸ್ಟ್ 14 ರ ರಾತ್ರಿ ಅದೇ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸುವ ವೇಳೆ ಇ-ಕಾಮರ್ಸ್ ಸಂಸ್ಥೆಯ ಡೆಲಿವರಿ ಏಜೆಂಟ್ ಗಾಯಗೊಂಡರು. ಅವರು ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದು ಕಾಲು ಮುರಿದುಕೊಂಡಿದ್ದಾರೆ. ಆತ ಮಂಡ್ಯದ ಹುಡುಗ. 9 ಜನರ ಕುಟುಂಬಕ್ಕೆ ಆತನ ಆದಾಯವೇ ಮೂಲವಾಗಿತ್ತು ಎಂದು ತಿಳಿದಾಗ ನನಗೆ ಬಹಳ ಬೇಸರವಾಗಿತ್ತು ಎಂದು ಮುದ್ಗಲ್ ಹೇಳಿದ್ದಾರೆ.
ಮುದ್ಗಲ್ ಹಾಗೂ ಇತರ ಸಮಾನ ಮನಸ್ಕ ಜನರು ಐದು ವರ್ಷಗಳ ಹಿಂದೆ 'ಸಿಟಿಜನ್ಸ್ ಗ್ರೂಪ್, ಈಸ್ಟ್ ಬೆಂಗಳೂರು' ಅನ್ನು ಸ್ಥಾಪಿಸಿದ್ದರು. "ಗುಂಪಿನ ಇತರ ಸದಸ್ಯರು ಸಹ ಹಣವನ್ನು ನೀಡಿದ್ದಾರೆ ಮತ್ತು ನಾವು ಕೆಲವು ಗುಂಡಿಗಳನ್ನು ಸರಿಪಡಿಸಿದ್ದೇವೆ" ಎಂದು ಮುದ್ಗಲ್ ಹೇಳಿದರು. ಆದರೆ, ಗುಂಡಿ ಮುಚ್ಚುವ ಸಲುವಾಗಿ ನನ್ನ ಬಳಿ ಹಣವಿರಲಿಲ್ಲ. ಅದಕ್ಕಾಗಿ ನಾನು ಬ್ಯಾಂಕ್‌ನಿಂದ ಸಾಲವನ್ನು ತೆಗೆದುಕೊಂಡಿದ್ದೇನೆ. ಈ ಭಾಗದ ಜನಪ್ರತಿನಿಧಿಗಳನ್ನು ಹಲವು ಬಾರಿ ಭೇಟಿ ಮಾಡಿ ಉತ್ತಮ ರಸ್ತೆ, ಚರಂಡಿ ಹಾಗೂ ಇತರೆ ನಾಗರಿಕ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದರೂ, ಈ ಬಗ್ಗೆ ಯಾರೂ ಗಮನ ನೀಡಿಲ್ಲ ಎಂದು ಗುಂಪಿನ ಸದಸ್ಯ ಮಿಥಿಲೇಶ್ ಕುಮಾರ್ ಹೇಳಿದ್ದಾರೆ.
ಈ ಪ್ರದೇಶದ ರಾಜಕಾರಣಿಗಳು ಇಲ್ಲಿನ ವಿಷಯಗಳ ಬಗ್ಗೆ ಬಹಳ ಅಸಡ್ಡೆ ಹೊಂದಿದ್ದಾರೆ. ಏಕೆಂದರೆ ಇಲ್ಲಿರುವ ಹೆಚ್ಚಿನ ನಿವಾಸಗಳು ಇತರ ರಾಜ್ಯಗಳು ಅಥವಾ ಇತರ ಜಿಲ್ಲೆಗಳಿಂದ ಬಂದವರು ಎಂಧು ಅವರು ಭಾವಿಸಿದ್ದಾರೆ. ಇದೇ ಕಾರಣಕ್ಕಾಗಿ ಕಳೆದ ಭಾನುವಾರ ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನ ಪ್ರಾರಂಭ ಮಾಡಿದ್ದೇವೆ ಎಂದು ಮಿಥಿಲೇಶ್ ಕುಮಾರ್ ತಿಳಿಸಿದ್ದಾರೆ.
CHANDRAYAAN-3 UPDATES: ಚಂದ್ರನಲ್ಲಿ ಲ್ಯಾಂಡರ್‌ನಿಂದ ಸ್ಥಳ ಹುಡುಕಾಟ, ಚಿತ್ರ ರಿಲೀಸ್ ಮಾಡಿದ ಇಸ್ರೋ
‘NoDevelopmentNoTax’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಎಕ್ಸ್‌ನಲ್ಲಿ ಅಭಿಯಾನವನ್ನು ಆರಂಭಿಸಿದ್ದು, ಇಲ್ಲಿಯವೆಗೂ ಇದಕ್ಕೆ ಪ್ರತಿಕ್ರಿಯೆ ಉತ್ತಮವಾಗಿದೆ ಎಂದಿದ್ದಾರೆ. ಇನ್ನೂ ಕೆಲವರು ನಾವು ತೆರಿಗೆ ಪಾವತಿ ಮಾಡುತ್ತೇವೆ. ಅದಕ್ಕಾಗಿ ಸರ್ಕಾರದಿಂದ ಉತ್ತಮ ನಾಗರಿಕ ಸೌಲಭ್ಯ ಕೇಳೋದರಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ ಎಂದು ಮುದ್ಗಲ್ ತಿಳಿಸಿದ್ದಾರೆ.
ಇನ್ನೆರಡೇ ದಿನ ಬಾಕಿ, ನಾಡಿದ್ದು ಸಂಜೆ 6.04ಕ್ಕೆ ವಿಕ್ರಂ ಲ್ಯಾಂಡರ್ ‘ಚಂದ್ರಸ್ಪರ್ಶ’ಕ್ಕೆ ಮುಹೂರ್ತ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ