ತೀವ್ರ ವಿರೋಧದ ನಡುವೆಯೂ ಮಹಿಷ ದಸರಾ ಆಚರಣೆಗೆ ಪ್ರಗತಿಪರರ ನೇತೃತ್ವದಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಆಚರಣೆ ಸಂಬಂಧ 50ನೇ ವರ್ಷದ ಮಹಿಷ ದಸರಾ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಮೈಸೂರು (ಅ.7): ತೀವ್ರ ವಿರೋಧದ ನಡುವೆಯೂ ಮಹಿಷ ದಸರಾ ಆಚರಣೆಗೆ ಪ್ರಗತಿಪರರ ನೇತೃತ್ವದಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಆಚರಣೆ ಸಂಬಂಧ 50ನೇ ವರ್ಷದ ಮಹಿಷ ದಸರಾ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಆಹ್ವಾನ ಪತ್ರಿಕೆಯಲ್ಲಿ ಚಾಮುಂಡಿ ಬೆಟ್ಟದ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಬಗ್ಗೆ ಮಾಹಿತಿ ನೀಡಲಾಗಿದೆ. ಅ. 13 ರಂದು ಮಹಿಷ ದಸರಾ ನಡೆಯಲಿದೆ. ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಬೌದ್ದ ಬಿಕ್ಕು ಬೋಧಿದತ್ತ ಭಂತೇಜಿ ಸೇರಿ ಹಲವು ಪ್ರಗತಿಪರ ಸಾಹಿತಿಗಳು ಭಾಗಿಯಾಗಲಿದ್ದಾರೆ.
ಸಾಂಸ್ಕೃತಿಕ ನಗರಿಯಲ್ಲಿ ಮಹಿಷ ದಸರಾ ಸಂಘರ್ಷ: ಕರಾವಳಿಗೂ ಹಬ್ಬಿದ ಮಹಿಷ ದಸರಾ ನಂಟು..!
ಅ.13ರಂದು ಮಹಿಷ ದಸರಾ ಆಚರಣೆ ಸಮಿತಿ ಮತ್ತು ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘದಿಂದ ಮಹಿಷಾ ದಸರಾ ಆಚರಣೆ ನಡೆಸಲಾಗುತ್ತಿದೆ. ಮಹಿಷ ದಸರಾವನ್ನು ದಸರಾ ಅಥವಾ ಚಾಮುಂಡೇಶ್ವರಿಗೆ ವಿರುದ್ಧವಾಗಿ ನಡೆಸುತ್ತಿಲ್ಲ. ಮೈಸೂರು ಅಸ್ಮಿತೆಗಾಗಿ ನಡೆಸಲಾಗುತ್ತಿದೆ ಎಂದಿರುವ ಪ್ರಗತಿಪರರು ನಮ್ಮ ಆಚರಣೆಯು ಈ ನೆಲದ ಮೂಲ ನಿವಾಸಿಯಾದ ಮಹಿಷ ಮಂಡಲವನ್ನು ಆಳಿದ ದೊರೆ ಮಹಿಷಾಸುರನಿಗೆ ಗೌರವ ಸಲ್ಲಿಸಲು ಪ್ರತಿ ವರ್ಷದಂತೆ ಈ ವರ್ಷವೂ ಆಚರಿಸಲಾಗುತ್ತಿದೆ ಮೈಸೂರು ದಸರಾದಂತೆ ಅಂದು ಯಾವುದೇ ಪೂಜೆ ವಿಧಿ-ವಿಧಾನಗಳಿರುವುದಿಲ್ಲ. ನಾಡಿನ ಗಣ್ಯಸಾಹಿತಿಗಳಿಂದ ಪುಷ್ಪಾರ್ಚನೆ ಮಾಡಲಾಗುತ್ತಿದೆ ಮಹಿಷ ದಸರಾ ಸಮಿತಿ ಹೇಳಿಕೊಂಡಿದೆ.
ಕರ್ನಾಟಕದಲ್ಲಿ ರಾಕ್ಷಸರ ರಾಜ್ಯಭಾರ ನಡೆಯುತ್ತಿದೆ: ಕಾಂಗ್ರೆಸ್ ವಿರುದ್ಧ ಪ್ರತಾಪ್ ಸಿಂಹ ಕಿಡಿ
ಕಳೆದ ವರ್ಷ ಬಿಜೆಪಿ ಸರ್ಕಾರದಲ್ಲಿ ಮಹಿಷ ದಸರಾಗೆ ಅವಕಾಶ ನೀಡರಲಿಲ್ಲ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಹಿಷ ದಸರಾ ಆಚರಣೆಗೆ ವೇದಿಕೆ ಸಿದ್ಧಗೊಂಡಿದೆ. ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ ಕೂಡ ಮಹಿಷ ದಸರಾ ಆಚರಣೆಗೆ ನಾವು ಅಡ್ಡಿ ಮಾಡಲ್ಲ ಎಂದಿದ್ದಾರೆ. ಇತ್ತ ಬಿಜೆಪಿ ಸಂಸದ ಪ್ರತಾಪ ಸಿಂಹ ಅವರು ಮಹಿಷ ದಸರಾ ಆಚರಣೆ ನಡೆಯಲು ಬಿಡುವುದಿಲ್ಲ. ಘರ್ಷಣೆಯಾದರೂ ಸರಿಯೇ ಎಂದಿದ್ದಾರೆ. ವಿರೋಧದ ನಡುವೆಯೂ ಆಚರಣೆಗೆ ಮುಂದಾಗಿರುವ ಪ್ರಗತಿಪರರು.